ಶಿವಮೊಗ್ಗ ತಾಲೂಕಿನ ಕುಂಸಿ ಠಾಣೆಗೆ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿದರು. ಡಿಐಜಿಪಿ ಬಿ.ರಮೇಶ್, ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್, ಸಚಿವರ ವಿಶೇಷ ಅಧಿಕಾರಿ ಚನ್ನಬಸಪ್ಪ ಮತ್ತಿತರರಿದ್ದರು.  
ನ್ಯೂಸ್

ಕುಂಸಿ ಠಾಣೆಗೆ ಪರಮೇಶ್ವರ್ ಭೇಟಿ, ಕಡತ ಪರಿಶೀಲನೆ

ಶಿವಮೊಗ್ಗ: ಜಿಲ್ಲಾ ಪ್ರವಾಸ ಕೈಗೊಂಡಿದ್ದ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಕುಂಸಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಕಡತಗಳನ್ನು ಪರಿಶೀಲನೆ ನಡೆಸಿದರು.

ದೂರುಗಳ ವಿವರ, ಸಾರ್ವಜನಿಕರ ಭೇಟಿ ಇತ್ಯಾದಿ ಮಾಹಿತಿಗಳನ್ನೊಳಗೊಂಡ ಕಡತಗಳ ಪರಿಶೀಲನೆ ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲವೆಂದು ಠಾಣಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸೊರಬದಲ್ಲಿ ಮಾಜಿ ಸಿಎಂ ಎಸ್.ಬಂಗಾರಪ್ಪ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುವಾಗ ಮಾರ್ಗಮಧ್ಯೆ ದಿಢೀರ್ ಆಗಿ ಕುಂಸಿ ಠಾಣೆಗೆ ಭೇಟಿ ಸಚಿವರು ನೀಡಿದರು. ಇದರಿಂದ ಅಲ್ಲಿದ್ದ ಕೆಲ ಸಿಬ್ಬಂದಿ ವಿಚಲಿತರಾದರು. ದಾವಣಗೆರೆ ಪೂರ್ವ ವಯಲದ ಡಿಐಜಿಪಿ ಬಿ.ರಮೇಶ್, ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ಜತೆಗಿದ್ದರು.