ನ್ಯೂಸ್

ಪರಿಸರ ಶುದ್ಧವಾಗಿರಲು ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು; ಪರಮೇಶ

Haveri - Kariyappa Aralikatti

ರಾಣೆಬೆನ್ನೂರ: ಪರಿಸರ ಶುದ್ಧವಾಗಿದ್ದರೆ ಉತ್ತಮ ಆರೋಗ್ಯ ಇದ್ದಂತೆ. ನಮ್ಮ ಮನೆಯ ವಾತಾವರಣ ಪರಿಸರ ಪರಿಶುದ್ಧ ವಾಗಿರಬೇಕಾದರೆ ಮಕ್ಕಳ ಪಾತ್ರ ಬಹಳ ಮಹತ್ವದ್ದು ಎಂದು ತಾಪಂ ಇಒ ಪರಮೇಶ ಹೇಳಿದರು.
ತಾಲೂಕಿನ ಹನುಮಾಪುರ ಗ್ರಾಮದಲ್ಲಿ ಜಿಪಂ, ತಾಪಂ ವತಿಯಿಂದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಂದ ಶನಿವಾರ ಹಮ್ಮಿಕೊಂಡ ಸ್ವಚ್ಛತೆಯಡೆಗೆ ದಿಟ್ಟ ಹೆಜ್ಜೆ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪರಿಶುದ್ಧ ಕರ್ನಾಟಕ ವಾದರೆ ಪರಿಶುದ್ಧ ಭಾರತವಾಗಲು ಸಾಧ್ಯ. ಮಕ್ಕಳು ಬಾಲ್ಯದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿದರೆ ಉತ್ತಮ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.
ಗ್ರಾಪಂ ಅಧ್ಯಕ್ಷ ಮಹೇಶ ಲಮಾಣಿ, ಸದಸ್ಯರಾದ ಮಾರುತಿ ಮಾದರ, ನೀಲವ್ವ ಮಾದರ, ಪಿಡಿಒ ಮಾಲತೇಶ ಮಡಿವಾಳರ, ಶಾಲೆಯ ಮುಖ್ಯಶಿಕ್ಷಕ ಎಂ.ಜಿ. ಬಡಿಗೇರ, ತಾಲೂಕು ಐಇಸಿ ಸಂಯೋಜಕ ದಿಂಗಾಲೇಶ ಅಂಗೂರ, ಹೊನ್ನಪ್ಪ ಮಾಳಪ್ಪನವರ, ಮಂಜುನಾಥ ಚಲವಾದಿ ಹಾಗೂ ಗ್ರಾಪಂ ಸಿಬ್ಬಂದಿ ಮತ್ತಿತರರು ಪಾಲ್ಗೊಂಡಿದ್ದರು.