ನ್ಯೂಸ್

ಕೇವಲ ಬೆಂಗಳೂರು ಸುತ್ತಮುತ್ತಲು ಅಭಿವೃದ್ಧಿಗೆ ಒತ್ತು ನೀಡಿದ್ದರಿಂದ ರಾಜ್ಯದ ಸಮಾನಾಂತರ ಅಭಿವೃದ್ಧಿ ಕ್ಷಿಣ: ನಿವೃತ್ತ ಡಿಜಿಪಿ ಶಂಕರ್ ಬಿದರಿ.

ಬೆಂಗಳೂರು: ಕರ್ನಾಟಕದಲ್ಲಿ ಎಲ್ಲ ಸಂಪತ್ತು ಇದ್ದರು ಪ್ರಗತಿ ಮಾತ್ರ ಹಿನ್ನಡೆಯಾಗಿದೆ.ರಾಜ್ಯದ 7 ಕೋಟಿ ಜನರ ಹಣ ಬೆಂಗಳೂರು ಸುತ್ತಮುತ್ತಲ ಅಭಿವೃದ್ಧಿಗೆ ಮೀಸಲಾಗಿದ್ದು, ರಾಜ್ಯವು ಸಮಾನಾಂತರ ಅಭಿವೃದ್ಧಿಯ ಬೆಳವಣಿಗೆ ಆಗಿಲ್ಲ ಎಂದು ನಿವೃತ ಡಿಜಿಪಿ ಶಂಕರ್ ಬಿದರಿ ತಿಳಿಸಿದ್ದಾರೆ

ದಿವಂಗತ ನಾರಾಯಣ ಕುಮಾರ್ ಕನ್ನಡ ಚಳುವಳಿ ಕೇಂದ್ರ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪರಮೇಶ ಪುಲಿಕೇಶಿ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ರಾಜ್ಯದ ಬೊಕ್ಕಸಕ್ಕೆ ಬರುವ ಹಣದಲ್ಲಿ ಶೇ.70ರಷ್ಟು ಬೆಂಗಳೂರು ಹಾಗೂ ಸುತ್ತಮುತ್ತಲ ಅಭಿವೃದ್ಧಿಗೆ ಬಳಕೆಯಾಗಿದೆ ರಾಜ್ಯದ ಇತರೆ ಭಾಗಕ್ಕೆ ಕಡಿಮೆ ಬಳಕೆ ಆಗಿರುವ ಕಾರಣ ಗ್ರಾಮೀಣ ಭಾಗ ಹಿನ್ನಡೆ ಸಾಧಿಸಿದೆ. ಹಾಗೂ ಕೃಷ್ಣ ಕೊಳ್ಳದ ನದಿ ತೀರ್ಪಿನಂತೆ 900 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಬೇಕಾಗಿತ್ತು. ಆದರೆ,300 ಟಿಎಂಸಿ ಮಾತ್ರ ಬಳಕೆ ಮಾಡಿಕೊಳ್ಳಲಾಗಿದೆ ಇದು ಕೂಡ ರಾಜ್ಯದ ಅಭಿವೃದ್ಧಿ ಹಿನ್ನೆಡೆಗೆ ಕಾರಣವಾಗಿದ್ದು ಜನರು ಸ್ವಲ್ಪಮಟ್ಟಿಗಾದರು ಯೋಗ್ಯರನ್ನ ಆಯ್ಕೆ ಮಾಡುವಂತಾಹದರೆ ಕರ್ನಾಟಕ ರಾಜ್ಯ ಖಂಡಿತವಾಗಿಯೂ ದೇಶದಲ್ಲಿಯೇ ಮೊದಲನೆ ಸ್ಥಾನಕ್ಕೆ ಬರುತ್ತದೆ ಎಂದರು

ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ. ಕುರುಬೂರ್ ಶಾಂತಕುಮಾರ್ ಮಾತನಾಡಿ ಕನ್ನಡದ ಉಳಿವಿಗಾಗಿ ಸರ್ಕಾರ ಕಠಿಣ ನಿಲುವುಗಳ ಯೋಜನೆಗಳು ಜಾರಿ ತರಬೇಕು. ರಾಜ್ಯ ಸರ್ಕಾರದಲ್ಲಿ ಕೆಲಸ ಮಾಡುವ ಎಲ್ಲ ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಮಾಧ್ಯಮಿಕ ಶಾಲೆ ತನಕ ಸರ್ಕಾರಿ ಶಾಲೆಯಲ್ಲಿಯೇ ವಿದ್ಯಾಭ್ಯಾಸ ಮಾಡಿಸಬೇಕು ಎಂಬ ಕಾನೂನು ನಿಯಮ ಜಾರಿಗೆ ತಂದು ರಾಜ್ಯ ಸರ್ಕಾರದ ನೌಕರಿಗೆ ಆಯ್ಕೆ ಮಾಡುವಾಗ ಕನ್ನಡ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ಶೇಕಡ 25 ಮೀಸಲು ಎನ್ನುವ ನೀತಿ ಜಾರಿ ಮಾಡಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಸ್ಥಾಪನೆಯಾಗುವ ಕೈಗಾರಿಕೆ ಹಾಗೂ ಐಟಿ ಬಿಟಿ ಉದ್ಯಮಗಳಲ್ಲಿ ಶೇ.50ರಷ್ಟು ಕನ್ನಡಿಗರಿಗೆ ಹುದ್ದೆ ಮೀಸಲಿಟ್ಟರೆ ಕನ್ನಡ ಶಾಲೆಗಳು ಉಳಿಯುತ್ತವೆ ಹಾಗೂ ಬೆಳೆಯುತ್ತವೆ. ಸರ್ಕಾರಗಳು ಮಂತ್ರಿಗಳು ಕೇವಲ ಜನರ ಓಲೈಕೆಯ ಮಾತನಾಡಬಾರದು. ಇತ್ತೀಚಿನ ದಿನಗಳಲ್ಲಿ ಉದ್ಯೋಗಗಳಲ್ಲಿ ಕೆಲಸ ಮಾಡುವ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಭಾಷೆ ಬಳಕೆ ವ್ಯಾಮೋಹ ಕಡಿಮೆಯಾಗುತ್ತಿದೆ.ಹೊರ ರಾಜ್ಯದ ವಲಸಿಗರ ಸಂಖ್ಯೆ ಏರಿಕೆಯಾಗುತ್ತಿರುವುದನ್ನು ಗಮನಿಸಿದರೆ ಮುಂದಿನ ವರ್ಷಗಳಲ್ಲಿ ಕನ್ನಡಿಗರ ರಾಜ್ಯಧಾನಿ ಕನ್ನಡಿಗರಿಂದ ಕೈ ತಪ್ಪುವ ಲಕ್ಷಣಗಳು ಗೋಚರಿಸುತ್ತಿವೆ ಹೀಗಾಗಿ ಕನ್ನಡ ಚಳುವಳಿಗಳು ಮತ್ತಷ್ಟು ಪ್ರಬಲಗೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರೈಲ್ವೆ. ಬ್ಯಾಂಕು. ಐಟಿಬಿಟಿ. ಕಂಪನಿಗಳು ಪೆಟ್ರೋಲಿಯಂ ಕಂಪನಿಗಳಲ್ಲಿ. ಕನ್ನಡೆತರ ಅಧಿಕಾರಿಗಳ ಸಂಖ್ಯೆ ಏರಿಕೆಯಾಗುತ್ತಿದೆ. 6 ತಿಂಗಳಲ್ಲಿ ಸ್ಥಳೀಯ ಭಾಷೆ ಕಲಿಯಬೇಕೆಂಬ ನಿಯಮವನ್ನು ಗಾಳಿಗೆ ತೂರಲಾಗುತ್ತಿದೆ ಇದನ್ನು ಧಿಕ್ಕರಿಸಲು ಚಳುವಳಿಗಳು ಸದಾಕಾಲ ಸಕ್ರಿಯವಾಗಿರಬೇಕು ನಾವು ಇಂಥ ಹೋರಾಟಗಳಿಗೆ ಬೆಂಗವಲಾಗಿರುತ್ತೇವೆ ಎಂದರು.

ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮುಕುಂದ ರಾಜ್,ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ನಾಗಲಕ್ಷ್ಮಿ ಚೌದ್ರಿ,ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್, ಕನ್ನಡ ಚಳುವಳಿ ಕೇಂದ್ರ ಸಮಿತಿ ಅಧ್ಯಕ್ಷ ಗುರುದೇವ್ ನಾರಾಯಣ ಕುಮಾರ್ ಮತ್ತಿತರರಿದ್ದರು.