ನ್ಯೂಸ್

ಟ್ವಿಟರ್ ಸಿಇಒ ಆಗಿ ಭಾರತ ಮೂಲದ ಪರಾಗ್ ಅಗರ್​ವಾಲ್​; ಬಾಂಬೆ ಐಐಟಿ ಪದವೀಧರನಿಗೆ ಒಲಿಯಿತು ಮಹತ್ವದ ಸ್ಥಾನ

ನವದೆಹಲಿ: ಭಾರತ ಸರ್ಕಾರದೊಂದಿಗೆ ಇತ್ತೀಚೆಗೆ ಭಾರಿ ಸಂಘರ್ಷ ಹೊಂದಿದ್ದ ಟ್ವಿಟರ್​ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಥಾನವನ್ನು ಭಾರತೀಯರೊಬ್ಬರೇ ಅಲಂಕರಿಸಿದ್ದಾರೆ. ಟ್ವಿಟರ್​​ನ ನೂತನ ಸಿಇಒ ಆಗಿ ಭಾರತ ಮೂಲದ ಪರಾಗ್ ಅಗರ್​ವಾಲ್ ನೇಮಕಗೊಂಡಿದ್ದಾರೆ.

ಟ್ವಿಟರ್​ ಸಹ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ಜಾಕ್​ ಡಾರ್ಸಿ ಅವರು ಸಿಇಒ ಸ್ಥಾನಕ್ಕೆ ಇದ್ದಕ್ಕಿದ್ದಂತೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಪರಾಗ್ ಅಗರ್​ವಾಲ್​ ನೂತನ ಸಿಇಒ ಆಗಿ ನೇಮಕಗೊಂಡಿದ್ದಾರೆ. ಈ ಮೂಲಕ ಬಾಂಬೆ ಐಐಟಿಯ ಪದವೀಧರನಿಗೆ ಅಂತಾರಾಷ್ಟ್ರೀಯ ಮಟ್ಟದ ಮಹತ್ವದ ಸ್ಥಾನವೊಂದು ಒಲಿದಂತಾಗಿದೆ.

ನೂತನ ಸಿಇಒ ಆಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸಂತೋಷ ವ್ಯಕ್ತಪಡಿಸಿರುವ ಪರಾಗ್, ಕಂಪನಿ ತೋರಿರುವ ವಿಶ್ವಾಸ ಹಾಗೂ ಬೆಂಬಲದ ಕುರಿತು ಸುದೀರ್ಘ ಪತ್ರವೊಂದನ್ನು ಬರೆದು ಧನ್ಯವಾದ ತಿಳಿಸಿದ್ದಾರೆ.