ಅಬ್ಬೆಟ್ಟು ಉದಯ ಕ್ರಿಕೆಟರ್ಸ್ ವತಿಯಿಂದ ನಡೆದ ದಿ.ವಿದ್ಯಾಧರ ಶೆಟ್ಟಿ ಸ್ಮಾರಕ ಉದಯ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಪಂಜಿಮೊಗರು ಸನ್ನಿ ಕ್ರಿಕೆಟರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.
- ಉದಯ ಕ್ರಿಕೆಟರ್ಸ್ ತಂಡ ರನ್ನರ್‌ಅಪ್
- ಕ್ರಿಕೆಟ್ ಪಂದ್ಯದ ಫೈನಲ್ ಪಂದ್ಯ
ವಿಜಯವಾಣಿ ಸುದ್ದಿಜಾಲ ಮಂಗಳೂರು
ಅಬ್ಬೆಟ್ಟು ಉದಯ ಕ್ರಿಕೆಟರ್ಸ್ ವತಿಯಿಂದ ನಡೆದ ದಿ.ವಿದ್ಯಾಧರ ಶೆಟ್ಟಿ ಸ್ಮಾರಕ ಉದಯ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಪಂಜಿಮೊಗರು ಸನ್ನಿ ಕ್ರಿಕೆಟರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಭಾನುವಾರ ಅಬ್ಬೆಟ್ಟು ಬಾಕಿಮಾರು ಗದ್ದೆಯಲ್ಲಿ ನಡೆದ ಕ್ರಿಕೆಟ್ ಪಂದ್ಯದ ಫೈನಲ್ ಪಂದ್ಯದಲ್ಲಿ ಸನ್ನಿ ಕ್ರಿಕೆಟರ್ಸ್ ತಂಡ ಆತಿಥೇಯ ಉದಯ ಅಬ್ಬೆಟ್ಟು ತಂಡವನ್ನು ಸೋಲಿಸಿ ಚಾಂಪಿಯನ್ ಆಯಿತು. ಉದಯ ಕ್ರಿಕೆಟರ್ಸ್ ತಂಡ ರನ್ನರ್‌ಅಪ್ ಆಯಿತು. ಸೆಮಿಫೈನಲ್
ಪಂದ್ಯದಲ್ಲಿ ಸನ್ನಿ ಕ್ರಿಕೆಟರ್ಸ್ ತಂಡ ವೈದ್ಯನಾಥ ಸುಜೀರು ತಂಡವನ್ನು ಪರಾಭವಗೊಳಿಸಿದರೆ, ಉದಯ ಅಬ್ಬೆಟ್ಟು ತಂಡ ಎನ್ಎಫ್ ಸಿ ಪಕ್ಕಲಪಾದೆ ತಂಡವನ್ನು ಸೋಲಿಸಿತು. ಸನ್ನಿ ತಂಡದ ಅಶ್ವಿತ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರೆ, ಅಶ್ರ್ ಮುತ್ತೂರು ಪಂದ್ಯಶ್ರೇಷ್ಠ, ಬೆಸ್ಟ್ ಬ್ಯಾಟ್ಸ್‌ಮನ್ ಪ್ರಶಸ್ತಿ ಪಡೆದರು. ಉದಯ ಅಬ್ಬೆಟ್ಟು ತಂಡ ಸುಕೇಶ್ ಉತ್ತಮ ಬೌಲರ್ ಪ್ರಶಸ್ತಿ ಪಡೆದರು.
ಉದಯ ಯುವಕ ಮಂಡಲ ಗೌರವಾಧ್ಯಕ್ಷ ಗೋಪಿನಾಥ್ ಶೆಟ್ಟಿ ಅಬ್ಬೆಟ್ಟು ಕ್ರಿಕೆಟ್ ಟೂರ್ನಿ ಉದ್ಘಾಟಿಸಿದರು. ಕುದ್ರೋಳಿ ನಾರಾಯಣಗುರು ಐಟಿಐ ಕಾಲೇಜು ಉಪನ್ಯಾಸಕ ಬಿನುತ್ ಕುಮಾರ್, ಸ್ಥಳೀಯ ಹಿರಿಯರಾದ ದಯಾನಂದ ಎಸ್.ಪೂಜಾರಿ, ಗಂಗಾಧರ ಲಚ್ಚಿಲ್, ಉದಯ ಯುವಕ ಮಂಡಲದ ಮಾಜಿ ಅಧ್ಯಕ್ಷ ನವೀನ್ ಗಂಪ, ಕ್ರೀಡಾ ಕಾರ್ಯದರ್ಶಿ ಚಂದ್ರಹಾಸ್ ಬೋರುಗುಡ್ಡೆ ಉಪಸ್ಥಿತರಿದ್ದರು.
ಸಮಾರೋಪ ಕಾರ್ಯಕ್ರಮದಲ್ಲಿ ಉದಯ ಯುವಕ ಮಂಡಲ ಗೌರವಾಧ್ಯಕ್ಷರಾದ ಗಂಗಾಧರ ಪೂಜಾರಿ, ಗೋಪಿನಾಥ್ ಶೆಟ್ಟಿ, ಶೇಖರ್ ಪೂಜಾರಿ, ಸನ್ನಿ ಕ್ರಿಕೆಟರ್ಸ್ ತಂಡದ ಮಾಲೀಕ ಸಂದೀಪ್ ಪೂಜಾರಿ ವಿದ್ಯಾನಗರ, ಶ್ರೀ ವ್ಯಾಘ್ರೇಶ್ವರಿ ಭಜನಾ ಮಂದಿರ ಅಧ್ಯಕ್ಷ ವಿಖ್ಯಾತ್, ಉದಯ ಯುವಕ ಮಂಡಲ ಉಪಾಧ್ಯಕ್ಷ ಕೃಷ್ಣಪ್ಪ ಪೂಜಾರಿ, ಸದಸ್ಯ ಸಂತೋಷ್, ಕ್ರೀಡಾ ಕಾರ್ಯದರ್ಶಿಗಳಾದ ಚಂದ್ರಹಾಸ ಬೋರುಗುಡ್ಡೆ, ಸಂದೀಪ್ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು. ಉದಯ ಯುವಕ ಮಂಡಲ ಅಧ್ಯಕ್ಷ ಮೋಹನ್‌ದಾಸ್ ಮರಕಡ ನಿರೂಪಿಸಿದರು.