ವಾಷಿಂಗ್ಟನ್: ಭಾರತದಲ್ಲಿ ಕರೊನಾ ಸೋಂಕಿನ ಹಾವಳಿ ಕಡಿಮೆಯಾಗುತ್ತಿದೆಯಾದರೂ ಬೇರೆ ದೇಶಗಳಲ್ಲಿ ಸೋಂಕಿನ ಪ್ರಮಾಣ ತಗ್ಗಿಲ್ಲ. ಅಮೆರಿಕದಲ್ಲಂತೂ ಸೋಂಕು ಶರವೇಗದಲ್ಲಿ ಹಬ್ಬಲಾರಂಭಿಸಿದೆ. ಸೋಂಕಿನ ತೀವ್ರತೆ ಕಾಣುತ್ತಿರುವ ಅಮೆರಿಕದಲ್ಲಿ ಇದೀಗ ಟಾಯ್ಲೆಟ್ ಪೇಪರ್ಗೂ ಬರ ಬಂದಿದೆ.
ಅಮೆರಿಕದ ಬಹುತೇಕ ರಾಜ್ಯಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ. 22 ರಾಜ್ಯಗಳು ಮತ್ತೊಮ್ಮೆ ಲಾಕ್ಡೌನ್ ಘೋಷಿಸಿವೆ. ಅಗತ್ಯ ಸೇವೆಯ ಅಂಗಡಿಗಳು ಹೊರೆತಾಗಿ ಬೇರೆಲ್ಲ ಅಂಗಡಿಗಳು ಬಾಗಿಲು ಮುಚ್ಚಿವೆ. ಅನೇಕ ಕಾರ್ಖಾನೆಗಳೂ ಬಾಗಿಲು ಮುಚ್ಚಿರುವುದರಿಂದಾಗಿ ಅಂಗಡಿಗಳಿಗೆ ಸರಕು ಪೂರೈಕೆಯಾಗುತ್ತಿಲ್ಲ. ಟಾಯ್ಲೆಟ್ ಪೇಪರ್, ಸೋಪು, ಪೇಪರ್ ಟವಲ್, ಕ್ಲೀನಿಂಗ್ ವೈಪ್ಸ್, ಕೈಗವಚ ಸೇರಿ ಅನೇಕ ವಸ್ತುಗಳು ಅಂಗಡಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ. ಅದೇ ಹಿನ್ನೆಲೆಯಲ್ಲಿ ಅನೇಕ ಮಾರ್ಕೆಟ್ಗಳು ಮತ್ತು ಅಂಗಡಿಯಲ್ಲಿ ಇಂತಹ ಸರಕು ಖಾಲಿಯಾಗಲಾರಂಭಿಸಿದೆ.
ಇದನ್ನೂ ಓದಿ: ಪ್ರತಿದಿನ 18-20 ರೊಟ್ಟಿ ತಿನ್ನುತ್ತಾನೆ ಆದರೂ 18 ತಿಂಗಳಿನಿಂದ ಶೌಚಕ್ಕೇ ಹೋಗಿಲ್ಲ; ವಿಚಿತ್ರ ಬಾಲಕನ ಕಥೆ
ಮರು ಲಾಕ್ಡೌನ್ ಆರಂಭವಾದ ಹಿನ್ನೆಲೆಯಲ್ಲಿ ಜನರು ಅಗತ್ಯ ಸರಕಿನ ಖರೀದಿಗೆ ಮುಗಿ ಬಿದ್ದಿದ್ದಾರೆ. ಕ್ಯಾಲಿಫೋರ್ನಿಯಾ ಸೇರಿ ಅನೇಕ ನಗರಗಳಲ್ಲಿ ಈ ಸಮಸ್ಯೆ ಉಂಟಾಗಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. (ಏಜೆನ್ಸೀಸ್)