ಪಾಲಕ್ ಸೊಪ್ಪು ಬಳಸಿ ಮಾಡುವ ಅಡುಗೆಗಳೆಂದರೆ ಮಕ್ಕಳಿಗೂ ತುಂಬಾ ಇಷ್ಟ. ಮನೆಯಲ್ಲಿಯೇ ಸುಲಭದಲ್ಲಿ ತಯಾರಿಸ ಬಹುದಾದ ಪಾಲಕ್ ರೆಸಿಪಿ ಇಲ್ಲಿದೆ.
ಮಾಡುವ ವಿಧಾನ: ಮೊದಲಿಗೆ ಕುಕ್ಕರ್ ಪಾತ್ರೆಯಲ್ಲಿ ತೊಗರಿ ಬೇಳೆ ತೊಳೆದು, ಅದಕ್ಕೆ ಹೆಚ್ಚಿದ ಪಾಲಕ್ ಸೊಪ್ಪನ್ನು ಸೇರಿಸಿ ಐದು ವಿಸಿಲ್ ಬರುವ ತನಕ ಕುಕ್ಕರ್ ಇಟ್ಟು, ಆವಿ ಇಳಿದ ನಂತರ ಒಂದು ಪಾತ್ರೆಗೆ ಹಾಕಿ ರುಚಿಗೆ ತಕ್ಕಷ್ಟು ಉಪ್ಪು, ಖಾರದ ಪುಡಿ ಹಾಕಿ. ಸಣ್ಣಗೆ ಹೆಚ್ಚಿದ ಶುಂಠಿ ಸೇರಿಸಿ, ಅರಿಶಿಣ ಪುಡಿ ಉದುರಿಸಿ ಸ್ವಲ್ಪ ಕುದಿಯಲು ಬಿಡಿ. ಐದು ನಿಮಿಷ ಕುದ್ದ ನಂತರ ಒಗ್ಗರಣೆ ಹಾಕಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
ಸುಪ್ರೀತಾ ವೆಂಕಟ್ ಬೆಂಗಳೂರು