ನ್ಯೂಸ್

ಪನೀರ್ ವೆರೈಟಿ: ಪನ್ನೀರ್​ ಬಟರ್​ ಮಸಾಲ

ಪನೀರ್​ನಿಂದ ಮಾಡುವ ಅಡುಗೆಗಳೆಂದರೆ ಮಕ್ಕಳಿಗೂ ತುಂಬಾ ಇಷ್ಟ. ಮನೆಯಲ್ಲಿಯೇ ಸುಲಭದಲ್ಲಿ ತಯಾರಿಸ ಬಹುದಾದ ಕೆಲ ಪನೀರ್ ರೆಸಿಪಿ ಇಲ್ಲಿದೆ.

ಬೇಕಾಗುವ ಸಾಮಾನು: 200 ಗ್ರಾಮ್ ಪನೀರ್ 1 ಈರುಳ್ಳಿ, 1 ಟೊಮ್ಯಾಟೋ 5-6 ಗೋಡಂಬಿ 2 ಲವಂಗ 1 ಚಕ್ಕೆ ಉಪ್ಪು 1 ಚಮಚ ಖಾರದ ಪುಡಿ 1/2 ಚಮಚ ಗರಂ ಮಸಾಲ ಬೆಣ್ಣೆ.

ಮಾಡುವ ವಿಧಾನ : ಬಾಣಲೆಗೆ ಎಣ್ಣೆ ಹಾಕಿ, ಈರುಳ್ಳಿ ಹಾಕಿ ಅದು ಕಂದು ಬಣ್ಣ ತಿರುಗಿದ ನಂತರ ಟೊಮ್ಯಾಟೋ ಹಾಕಿ ಬೇಯಿಸಿ. ಗೋಡಂಬಿಯನ್ನು ಹುರಿದು ಲವಂಗ ಚಕ್ಕೆ ಕೂಡ ಸೇರಿಸಿ ಪಕ್ಕಕ್ಕಿಡಿ. ತಣ್ಣಗಾದ ಮೇಲೆ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಪುನಃ ಬಾಣಲೆಗೆ ಈ ಮಿಶ್ರಣವನ್ನು ಹಾಕಿ ಬಿಸಿಯಾದ ನಂತರ ಚೌಕಾಕಾರಕ್ಕೆ ತುಂಡು ಮಾಡಿದ ಪನೀರ್ ತುಂಡುಗಳನ್ನು ಹಾಕಿ 10 ನಿಮಿಷ ಬೇಯಿಸಿದಾಗ ಮಿಶ್ರಣ ಹಾಗೂ ಪನೀರ್ ಬೆರೆಯುತ್ತದೆ. ಉಪ್ಪು, ಖಾರದ ಪುಡಿ, ಗರಂ ಮಸಾಲ ಹಾಕಿ 5 ನಿಮಿಷಗಳ ಕಾಲ ಕುದಿಸಿರಿ. ಕೊನೆಯಲ್ಲಿ ಬೆಣ್ಣೆ ಹಾಕಿ.