ಪನೀರ್ನಿಂದ ಮಾಡುವ ಅಡುಗೆಗಳೆಂದರೆ ಮಕ್ಕಳಿಗೂ ತುಂಬಾ ಇಷ್ಟ. ಮನೆಯಲ್ಲಿಯೇ ಸುಲಭದಲ್ಲಿ ತಯಾರಿಸ ಬಹುದಾದ ಕೆಲ ಪನೀರ್ ರೆಸಿಪಿ ಇಲ್ಲಿದೆ.
ಬೇಕಾಗುವ ಸಾಮಾನು: 200 ಗ್ರಾಮ್ ತುರಿದ ಪನೀರ್ 1 ಈರುಳ್ಳಿ 1 ಟೊಮ್ಯಾಟೋ 1 ಕ್ಯಾಪ್ಸಿಕಂ 1 ಚಮಚ ಜೀರಿಗೆ ಸ್ವಲ್ಪ ಇಂಗಿನ ಪೌಡರ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಉಪ್ಪು 1 ಚಮಚ ಖಾರದ ಪುಡಿ. ಮಾಡುವ ವಿಧಾನ : ಬಾಣಲೆಗೆ ಸ್ವಲ್ಪ ಹೆಚ್ಚೇ ಎಣ್ಣೆ ಹಾಕಿ, ಒಗ್ಗರಣೆಗೆ ಜೀರಿಗೆ, ಇಂಗಿನ ಪೌಡರ್ ಹಾಕಿದ ನಂತರ ಈರುಳ್ಳಿ ಹಾಕಿ ಫ್ರೖೆ ಮಾಡಿ. ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಅದರ ಹಸಿ ವಾಸನೆ ಹೋದ ನಂತರ ಟೊಮ್ಯಾಟೋ ಹಾಕಿ, ಅದು ಮೆತ್ತಗಾದ ಮೇಲೆ ಕ್ಯಾಪ್ಸಿಕಂ ಇಷ್ಟವಿರೋರು ವಿವಿಧ ಬಣ್ಣದ ಕ್ಯಾಪ್ಸಿಕಂ ಹಾಕಿ ಬೇಯಿಸಿ, ಉಪ್ಪು ಖಾರ ಸೇರಿಸಿ. ನೀರು ಹಾಕಬಾರದು, ಎಣ್ಣೆಯಲ್ಲೇ ಬೇಯಿಸಿ ರುಚಿ ಜಾಸ್ತಿ. ನಂತರ ತುರಿದ ಪನೀರ್ ಹಾಕಿ.