ನ್ಯೂಸ್

ಪಲ್ಲವಿ ಮೇಲೆ ಹಲ್ಲೆ ಮಾಡಿದವರನ್ನು ಬಂಧಿಸಲು ಒತ್ತಾಯ

ರಾಣೆಬೆನ್ನೂರ: ಎಸ್ಸಿ, ಎಸ್ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯೆ ಜಿ. ಪಲ್ಲವಿ ಅವರ ಮೇಲೆ ಬೆಂಗಳೂರಿನಲ್ಲಿ ಹಲ್ಲೆ ಮಾಡಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿೆ ವಿಧಿಸಬೇಕು ಎಂದು ಒತ್ತಾಯಿಸಿ ಶಿವಶರಣ ನುಲಿಯ ಚಂದಯ್ಯ ಕೊರಮ ಸಮಾಜದ ಕ್ಷೇಮಾಭಿವೃದ್ಧಿ ಸಂದ ವತಿಯಿಂದ ಸೋಮವಾರ ತಹಸೀಲ್ದಾರ್​ ಆರ್​.ಎಚ್​. ಭಾಗವಾನ್​ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಜು. 5ರಂದು ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಅಲೆಮಾರಿ ಮುಖಂಡರ ಸಭೆಯಲ್ಲಿ 51 ಜಾತಿಯವರ ಬದಲು 49 ಜಾತಿಯವರು ಸೇರಿಕೊಂಡು ಸಭೆ ಮಾಡುತ್ತಿದ್ದರು. ಈ ಕುರಿತು ಕೊರಮ ಸಮಾಜದ ರಾಜ್ಯಾಧ್ಯೆ ಆಗಿರುವ ಜಿ. ಪಲ್ಲವಿ ಅವರು ಅಲ್ಲಿಗೆ ತೆರಳಿ ಇದನ್ನು ಪ್ರಶ್ನೆ ಮಾಡಿದರು.

ಮಾಜಿ ಸಚಿವ ಎಚ್​. ಆಂಜನೇಯ ಸಮ್ಮುಖದಲ್ಲಿ ಕೆಲ ಪುಡಾರಿಗಳು ಸೇರಿ ಕೇವಲ 49 ಜಾತಿಗಳು ಮಾತ್ರ ಅಲೇಮಾರಿ ಪಟ್ಟಿಯಲ್ಲಿ ಬರುತ್ತವೆ. ಕೊರಮ ಮತ್ತು ಕೊರಚ ಜಾತಿ ಬರುವುದಿಲ್ಲ ಎಂದು ಹೇಳಿದರು. ಇದನ್ನು ಜಿ. ಪಲ್ಲವಿ ಪ್ರಶ್ನಿಸಿದಾಗ ಏಳು ಜನ ಆರೋಪಿಗಳು ಪಲ್ಲವಿಯವರ ಮೇಲೆ ಹಲ್ಲೆ ಮಾಡಿ ಮಾನಹಾನಿ ಮಾಡಿದ್ದಾರೆ.

ಒಬ್ಬ ಮಹಿಳೆ ಮೇಲೆ ಈ ರೀತಿ ನಡೆದುಕೊಂಡಿರುವುದು ಸರಿಯಲ್ಲ. ಆದ್ದರಿಂದ ಕೂಡಲೇ ಏಳು ಜನ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ ಎಸ್ಸಿ, ಎಸ್ಟಿ ಅಲೆಮಾರಿ ಅಭಿವೃದ್ಧಿ ನಿಗಮದಲ್ಲಿ ಕೊರಮ ಮತ್ತು ಕೊರಚ ಜಾತಿಯವರನ್ನು ಸೇರಿಸಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಅರುಣಕುಮಾರ ಕೊರಗರ, ನಾಗಪ್ಪ ಕೊರವರ, ರಮೇಶ ಕೊರವರ, ಗಂಗಪ್ಪ ಭಜಂತ್ರಿ, ಮಂಜುನಾಥ ಕೊರವರ, ಲಕ್ಷ$್ಮಪ್ಪ ಭಜಂತ್ರಿ, ರಾವೇಂದ್ರ ಭಜಂತ್ರಿ ಮತ್ತಿತರರು ಉಪಸ್ಥಿತರಿದ್ದರು.