ಅಕೋರಾ ಖಟ್ಟಕ್: ತಾಲೀಬಾನ್ ಲೀಡರ್ಗಳಾಗಿ ಜಿಹಾದಿ ಸೇನೆಯನ್ನು ಮುನ್ನಡೆಸುತ್ತಿರುವವರ ಹೆಸರುಗಳನ್ನು ಪ್ರಕಟಿಸಿದ ಮೌಲಾನಾ ಯೂಸಫ್ ಷಾ ದೊಡ್ಡ ನಗೆ ನಕ್ಕು, ಅಫ್ಘಾನಿಸ್ತಾನದಲ್ಲಿ ಸೂಪರ್ ಪವರ್ಗಳ ಮೇಲೆ ಅವರು ವಿಜಯ ಸಾಧಿಸಿದ್ದಾರೆ. ಎಲ್ಲರೂ ಪಾಕಿಸ್ತಾನದ ದಾರುಲ್ ಉಲೂಮ್ ಹಕ್ಕಾನಿಯಾದ ಮಾಜಿ ವಿದ್ಯಾರ್ಥಿಗಳೆಂಬುದು ಹೆಮ್ಮೆಯ ವಿಚಾರ ಎಂದು ಘೋಷಿಸಿದ್ದಾನೆ.
ದಾರುಲ್ ಉಲೂಮ್ ಹಕ್ಕಾನಿಯಾದ ಹಳೆಯ ವಿದ್ಯಾರ್ಥಿಗಳು ಕಳೆದ 20 ವರ್ಷಗಳಿಂದ ಕಾಬೂಲ್ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಾ ಬಂದಿದ್ದಾರೆ. ಅದು ಈಗ ಮಾತುಕತೆಯ ಹಂತಕ್ಕೆ ಬಂದಿದ್ದು, ಶೀಘ್ರವೇ ಯುದ್ಧ ಅಂತ್ಯವಾಗಲಿದೆ. ರಷ್ಯಾ ಒಡೆದು ಚೂರಾಗಲು ನಮ್ಮವರೇ ಕಾರಣ. ಅಮೆರಿಕಕ್ಕೂ ನಮ್ಮವರನ್ನು ಕಳುಹಿಸಿದ್ದೇವೆ. ನಿಜಕ್ಕೂ ಇದು ಹೆಮ್ಮೆ ಎಂದು ಷಾ ಹೇಳಿಕೊಂಡಿದ್ದಾನೆ.
ಪೇಶಾವರದಿಂದ 60 ಕಿ.ಮೀ ದೂರದಲ್ಲಿ ದಾರುಲ್ ಉಲೂಮ್ ಹಕ್ಕಾನಿಯಾ ಸೆಮಿನರಿ ಇದ್ದು, ಇಲ್ಲಿ ಕಲಿತ ಬಹುತೇಕರು ಜಿಹಾದಿ ಸಂಘಟನೆಗಳ ಕಮಾಂಡರ್ಗಳಾಗಿದ್ದಾರೆ. ಹೊರ ಜಗತ್ತಿನ ಮಟ್ಟಿಗೆ ಇದು ಜಿಹಾದಿಗಳ ವಿಶ್ವವಿದ್ಯಾಲಯವಾಗಿದ್ದು, ಉಗ್ರ ಚಟುವಟಿಕೆಗೆ ಪಾಕಿಸ್ತಾನದ ಕುಮ್ಮಕ್ಕಿಗೆ ಇಂತಹ ನಿದರ್ಶನಗಳು ಪದೇಪದೇ ಜಗತ್ತಿನೆದುರು ಅನಾವರಣಗೊಳ್ಳುತ್ತಲೇ ಇವೆ. (ಏಜೆನ್ಸೀಸ್)