ನ್ಯೂಸ್

ಪಾಕಿಸ್ತಾನದ ಡ್ರೋನ್​​ ಲಾಂಚ್‌ಪ್ಯಾಡ್, ಮಿಲಿಟರಿ ಪೋಸ್ಟ್​​​ ಧ್ವಂಸಗೊಳಿಸಿದ ಭಾರತೀಯ ಸೇನೆ|Indian Army

Indian Army: ಪಾಕಿಸ್ತಾನವು ಯುದ್ಧದ ಪರಿಸ್ಥಿತಿಯನ್ನು ಹೆಚ್ಚಿಸುತ್ತಲೇ ಇರುವುದರಿಂದ ಪ್ರತೀಕಾರವಾಗಿ ಭಾರತೀಯ ಪಡೆಗಳು ಹಲವಾರು ಪಾಕಿಸ್ತಾನಿ ಮಿಲಿಟರಿ ಪೋಸ್ಟ್‌ಗಳು ಮತ್ತು ಭಯೋತ್ಪಾದಕ ಲಾಂಚ್‌ಪ್ಯಾಡ್ಅನ್ನು ನಾಶಪಡಿಸಿವೆ ಎಂದು ಸುದ್ದಿಸಂಸ್ಥೆ 'ಎಎನ್‌ಐ' ವರದಿ ಮಾಡಿದೆ.

ಪಾಕಿಸ್ತಾನವು ಭಾರತೀಯ ದಾಳಿಯಲ್ಲಿ ನಾಶವಾದ ಲಾಂಚ್‌ಪ್ಯಾಡ್ಅನ್ನು ಟ್ಯೂಬ್-ಲಾಂಚಡ್ ಡ್ರೋನ್‌ಗಳನ್ನು ಉಡಾಯಿಸಲು ಬಳಸಲಾಗುತ್ತಿತ್ತು. ಜಮ್ಮು ಬಳಿ ನೆಲೆಗೊಂಡಿರುವ ಭಾರತೀಯ ಸೇನಾ ಪಡೆಗಳು ಈ ಕಾರ್ಯಾಚರಣೆಯನ್ನು ನಡೆಸಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಾಜಸ್ಥಾನದಲ್ಲಿ, ಬಾರ್ಮರ್‌ನಲ್ಲೂ ಡ್ರೋನ್‌ಗಳು ಕಂಡುಬಂದಿದ್ದು, ಶುಕ್ರವಾರ ರಾತ್ರಿ ಮತ್ತು ಇಂದು ಬೆಳಿಗ್ಗೆ ಶ್ರೀನಗರ ವಿಮಾನ ನಿಲ್ದಾಣ, ಅವಂತಿಪೋರಾ ವಾಯುನೆಲೆ, ನಾಗ್ರೋಟಾ, ಜಮ್ಮು, ಪಠಾಣ್‌ಕೋಟ್, ಫಜಿಲ್ಕಾ ಮತ್ತು ಜೈಸಲ್ಮೇರ್ ಅನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಆದರೆ ಯಾವುದೇ ಭಾರತೀಯ ಮಿಲಿಟರಿ ಸ್ಥಾಪನೆಗೆ ಹಾನಿಯಾಗಿಲ್ಲ.

ಪಾಕಿಸ್ತಾನದ ಗಡಿಯುದ್ದಕ್ಕೂ ರಾತ್ರಿಯಿಡೀ ಶೆಲ್ ದಾಳಿ ಮುಂದುವರಿಸಿದೆ. ಕುಪ್ವಾರಾದಲ್ಲಿ ಬ್ಲ್ಯಾಕ್‌ಔಟ್ ಜಾರಿಗೊಳಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ಹಿರಿಯ ಅಧಿಕಾರಿಯೊಬ್ಬರು ಶೆಲ್ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಶೆಲ್ ಅವರ ಮನೆಗೆ ಬಡಿದ ನಂತರ ಅವರು ಸಾವನ್ನಪ್ಪಿದ್ದಾರೆ ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ದೃಢಪಡಿಸಿದ್ದಾರೆ. (ಏಜೆನ್ಸೀಸ್​)