ನ್ಯೂಸ್

Woman Celebrates Divorce : ಡಿವೋರ್ಸ್‌ ಪಡೆದು ಕೇಕ್‌ ಕತ್ತರಿಸಿ ಸಂಭ್ರಮಿಸಿದ ಮಹಿಳೆ! ವಿಡಿಯೋ ನೋಡಿ...

ಇಸ್ಲಾಮಾಬಾದ್​​: ( Woman Celebrates Divorce  )ಪಾಕಿಸ್ತಾನಿ ಮಹಿಳೆಯೊಬ್ಬರು ತನ್ನ ಪತಿಯಿಂದ ಬೇರ್ಪಟ್ಟು, ವಿಚ್ಛೇದನ ಪಡೆದು ಪಾರ್ಟಿ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಮಹಿಳೆಯೊಬ್ಬರು ಗಂಡನಿಂದ ಮುಕ್ತಿ ಸಿಕ್ತಲ್ವಾ ದೇವ್ರೇ ಎಂದು ಡಿವೋರ್ಸ್‌ ಸಿಕ್ಕ ಖುಷಿಗೆ ಮದುವೆ ಫೋಟೋಗಳನ್ನು ಹರಿದು ಹಾಕಿ, ಕೇಕ್‌ ಕಟ್‌ ಮಾಡಿ ಭರ್ಜರಿ ಸಂಭ್ರಮಾಚರಣೆ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ವಿಡಿಯೋದಲ್ಲಿ ಏನಿದೆ?: ಪಾಕಿಸ್ತಾನದ ಮಹಿಳೆಯೊಬ್ಬರು ಹ್ಯಾಪಿ ಡಿವೋರ್ಸ್‌ ಎಂದು ಬರೆದಿರುವ ಕೇಕ್‌ ಕಟ್‌ ಮಾಡಿ, ಮದುವೆ ಫೋಟೋಗಳನ್ನು ಹರಿದು ಹಾಕಿ ಹಾಗೂ ತಮ್ಮ ನಿಕಾಹ್‌ ದುಪಟ್ಟಾವನ್ನು ಹರಿದು ಹಾಕುವ ಮೂಲಕ ತಮ್ಮ ವಿಚ್ಛೇದನವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಈ ಕುರಿತ ವಿಡಿಯೋವನ್ನು ಶೋನಿ ಕಪೂರ್‌  ಎಂಬವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನವೆಂಬರ್‌ 4 ರಂದು ಹಂಚಿಕೊಳ್ಳಲಾದ ಈ ವಿಡಿಯೋ 62 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ.  ಈ ವಿಡಿಯೋ ವೈರಲ್​​ ಆಗುತ್ತಿದ್ದಂತೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.