ಪಾಕಿಸ್ತಾನಿ ಟಿಕ್​ಟಾಕರ್​ ಹರೀಮ್​ ಶಾ 
ನ್ಯೂಸ್

ಖ್ಯಾತ ಟಿಕ್​ಟಾಕರ್​ ಖಾಸಗಿ ವಿಡಿಯೋ ಲೀಕ್​: ಯಾರನ್ನು ನಂಬುವುದು ಅಂತ ಕಣ್ಣೀರಿಟ್ಟ ಯುವತಿ

ಇಸ್ಲಮಾಬಾದ್​: ಪಾಕಿಸ್ತಾನದ ಖ್ಯಾತ ಟಿಕ್​ಟಾಕರ್​ ಹಾಗೂ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್​​ ಹರೀಮ್​ ಶಾ ಅವರ ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವಿಡಿಯೋ ಸೋರಿಕೆಯಾಗಿರುವುದು ಗೊತ್ತಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಹರೀಮ್​ ಶಾ, ಇದರ ಹಿಂದೆ ನನ್ನ ಬೆಸ್ಟ್​ ಫ್ರೆಂಡ್ಸ್​​ ಕೈವಾಡ ಇದೆ ಎಂದು ಆರೋಪಿಸಿದ್ದಾರೆ. ಹರೀಮ್​ ಅವರ ಆತ್ಮೀಯ ಸ್ನೇಹಿತೆಯರಾದ ಸ್ಯಾಂಡಲ್​ ಖಟಕ್​ ಮತ್ತು ಆಯೇಜಾ ನಾಜ್​ ವಿರುದ್ಧ ವಿಡಿಯೋ ಸೋರಿಕೆ ಆಪಾದನೆ ಇದೆ. ಇತ್ತೀಚೆಗೆ ಮೂವರ ನಡುವೆ ಉಂಟಾದ ವೈಮನಸ್ಸು ಇದಕ್ಕೆ ಕಾರಣ ಎಂದು ತಿಳಿದುಬಂದಿದೆ. ತನ್ನ ಖ್ಯಾತಿ ಹಾಗೂ ಗೌರವಕ್ಕೆ ಧಕ್ಕೆ ತರಲೆಂದೇ ವಿಡಿಯೋ ಸೋರಿಕೆ ಮಾಡಿದ್ದಾರೆ ಎಂದು ಹರೀಮ್​ ಆರೋಪ ಮಾಡಿದ್ದಾರೆ. ಯಾರನ್ನೂ ನಂಬುವುದು ಎಂದು ಬೇಸರ ಹೊರಹಾಕಿದ್ದಾರೆ.

ನನ್ನ ಸ್ನೇಹಿತೆಯ ಆಗಾಗ ನನ್ನೊಂದಿಗೆ ಉಳಿದುಕೊಳ್ಳುತ್ತಿದ್ದರು. ಈ ಸಮಯದಲ್ಲಿ ವಿಡಿಯೋ ಮಾಡಿದ್ದಾರೆ. ವಿಡಿಯೋವನ್ನು ಬಿಡುಗಡೆ ಮಾಡುವ ಮೊದಲು ಇಬ್ಬರೂ ತನಗೆ ಬೆದರಿಕೆ ಹಾಕಿದ್ದರು ಎಂದು ಹರೀಮ್ ಹೇಳಿದ್ದಾರೆ. ಆಕೆಯ ವೈವಾಹಿಕ ಜೀವನವನ್ನು ಹಾಳು ಮಾಡಲು ಸ್ನೇಹಿತರು ವಿಡಿಯೋ ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ.

ವಿಡಿಯೋ ಸೋರಿಕೆಯಾದ ಬಳಿಕ ಹರೀಮ್ ತನ್ನ ಸ್ನೇಹಿತೆಯರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಇದೇ ವೇಳೆ ಹರೀಮ್​ ಶಾ ಪತಿ ಪ್ರತಿಕ್ರಿಯಿಸಿದ್ದು, ಪತ್ನಿಯ ಸ್ನೇಹಿತೆಯರು ಕರುಣೆಗೆ ಅರ್ಹರಲ್ಲ ಎಂದು ಹೇಳಿದರು ಮತ್ತು ಅವರ ವಿರುದ್ಧ ಸಾಧ್ಯವಿರುವ ಎಲ್ಲ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಹರೀಮ್​ ಶಾ ಅಪರಿಚಿತನೊಂದಿಗಿನ ಖಾಸಗಿ ವಿಡಿಯೋ ಲೀಕ್ ಆಗಿದ್ದು ಪಾಕಿಸ್ತಾನದಲ್ಲಿ ಬಿಸಿ ಟಾಪಿಕ್ ಆಗಿದೆ. ಹರೀಮ್ ಶಾರನ್ನು ಬಿಟ್ಟು ಹೋಗುವಂತೆ ಆಕೆಯ ಪತಿಗೆ ಸಂದೇಶಗಳ ಸುರಿಮಳೆ ಬರುತ್ತಿದೆ. ಆದರೆ, ಹರೀಮ್‌ನ ಪತಿ ಆಕೆಯನ್ನು ತೊರೆದರೆ ಅನ್ಯಾಯವಾಗುತ್ತದೆ ಅಂತ ಜತೆಗಿದ್ದಾನೆ ಮತ್ತು ಕಠಿಣ ಪರಿಸ್ಥಿತಿಯಲ್ಲಿ ತನ್ನ ಹೆಂಡತಿಯನ್ನು ಎಂದಿಗೂ ಬಿಡುವುದಿಲ್ಲ ಎಂದು ಹೇಳಿದ್ದಾರೆ. (ಏಜೆನ್ಸೀಸ್​)