ನ್ಯೂಸ್

ನನ್ನ ಅಮ್ಮನಿಗೆ 2ನೇ ಮದ್ವೆ ಆಗುವ ಹಕ್ಕಿದೆ! ತಾಯಿಗೆ 2ನೇ ಮದುವೆ ಮಾಡಿಸಿದ ಮಗ.. Son Arrange Mother Second Marriage

Webdesk - Savina Naik

ಪಾಕಿಸ್ತಾನ:  (Son Arrange Mother Second Marriage) ಯುವಕನೊಬ್ಬ ವಿಚ್ಛೇದನ ಪಡೆದು ತಂದೆಯಿಂದ ದೂರವಾಗಿ ಒಂಟಿಯಾಗಿ ಜೀವಿಸುತ್ತಿದ್ದ ತನ್ನ ತಾಯಿಗೆ ಎರಡನೇ ಮದುವೆ ಮಾಡಿದ್ದಾನೆ.  ಪಾಕಿಸ್ತಾನದ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪಾಕಿಸ್ತಾನದ ಯುವಕ ಅಬ್ದುಲ್‌ ಅಹದ್‌ ಎಂಬಾತ ತನ್ನ ತಾಯಿಗೆ ಎರಡನೇ ಮದುವೆ ಮಾಡಿಸಿದ್ದಾನೆ. ಕಳೆದ 18 ವರ್ಷಗಳಿಂದ  ಅಮ್ಮನಿಗೆ ವಿಶೇಷ ಜೀವನವನ್ನು ನೀಡಲು ಪ್ರಯತ್ನಿಸಿದ್ದೇನೆ. ಆಕೆ ನಮಗಾಗಿ ತನ್ನ ಇಡೀ ಜೀವನವನ್ನೇ ತ್ಯಾಗ ಮಾಡಿದ್ದಾಳೆ. ಅವಳು ಶಾಂತಿಯುತ ಜೀವನವನ್ನು ನಡೆಸಲು ಅರ್ಹಳು, ಆಕೆಗೂ ಜೀವನ ಮತ್ತು ಪ್ರೀತಿಯಲ್ಲಿ ಎರಡನೇ ಅವಕಾಶವನ್ನು ಪಡೆಯುವ ಹಕ್ಕಿದೆ ಎನ್ನುತ್ತಾ ತನ್ನ ತಾಯಿಯ ಖುಷಿಗಾಗಿ ಅಹದ್‌ ಅಮ್ಮನಿಗೆ ಎರಡನೇ ಮದುವೆಯನ್ನು ಮಾಡಿಸಿದ್ದಾನೆ. ಈ  ಕುರಿತಾದ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಅಹದ್ ತಾನೇ ಮುಂದೆ ನಿಂತು ತನ್ನ ತಾಯಿಗೆ ಎರಡನೇ ಮದುವೆ ಮಾಡಿಸಿದ ಹೃದಯಸ್ಪರ್ಶಿ ದೃಶ್ಯವನ್ನು ಕಾಣಬಹುದು.

ನಿಜವಾಗಿಯೂ ಒಂಟಿಯಾಗಿ ಬದುಕುವುದು ತುಂಬಾ ಕಷ್ಟ, ನಿಮ್ಮ ತಾಯಿ ಕುರಿತಾಗಿ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀರ...ಒಳ್ಳೆಯದಾಗಲಿ...ಎಂದು  ಕಾಮೆಂಟ್​​ ಮಾಡುತ್ತಾ ನವ ದಂಪತಿಗೆ ಶುಭಕೋರಿದ್ದಾರೆ.