ನ್ಯೂಸ್

ಭಾರತೀಯರನ್ನು ತನ್ನ ದೇಶಕ್ಕೆ ಆಹ್ವಾನಿಸಿದ ಪಾಕಿಸ್ತಾನ ಸುಂದ್ರಿ ! ಕಾರಣವೇನು ಗೊತ್ತಾ? Pakistani Girl

ಪಾಕಿಸ್ತಾನ: ( Pakistani Girl ) ಭಾರತೀಯರನ್ನು ತನ್ನ ದೇಶಕ್ಕೆ ಪಾಕ್​ನ ಯುವತಿ ಆಹ್ವಾನಿಸಿದ್ದಾಳೆ. ಸುಂದರ ಪಾಕಿಸ್ತಾನಿ ಹುಡುಗಿಯ ಈ ವಿಡಿಯೋ ವೈರಲ್​​ ಆಗುತ್ತಿದೆ. ಈಕೆ ಯಾಕೆ ಭಾರತೀಯರನ್ನು ಆಹ್ವಾನಿಸಿದ್ದಾಳೆ ಎನ್ನೋ ಕಂಪ್ಲಿಟ್​​​ ಡಿಟೇಲ್ಸ್​​ ಇಲ್ಲಿದೆ....

ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಪಾಕಿಸ್ತಾನದ ಸುಂದರ ಹುಡುಗಿಯೊಬ್ಬಳು ಅಲ್ಲಿನ ಮಾರ್ಕೆಟ್‌ನಲ್ಲಿ ನಡೆದುಕೊಂಡು ಹೋಗುತ್ತಾ ಕ್ಯಾಮೆರಾ ನೋಡುತ್ತಾ ಪಾಕ್​​ನ ಯಾವುದೋ ಒಂದು ಸ್ಥಳವನ್ನು ತೋರಿಸಿ.. ಪ್ರೀತಿಯಿಂದ ನಗುತ್ತಾ ಭಾರತದ ಜನತೆಗೆ ‘ಭಾರತೀಯರೇ ದಯವಿಟ್ಟು ಪಾಕಿಸ್ತಾನಕ್ಕೆ ಬನ್ನಿ’ ಎಂದು ವಿನಂತಿಸುತ್ತಿದ್ದಾರೆ.

ವಿಡಿಯೋ ಕುರಿತು ಪ್ರತಿಕ್ರಿಯಿಸಿದ ಜನರು, ಶೀಘ್ರದಲ್ಲೇ ನಾವು ಇಡೀ ಪಾಕಿಸ್ತಾನವನ್ನು ಭಾರತದೊಂದಿಗೆ ವಿಲೀನಗೊಳಿಸುತ್ತೇವೆ, ನಂತರ ನಾವು ನಿಮ್ಮೊಂದಿಗೆ ಇರುತ್ತೇವೆ ಎಂದು ಹೇಳಿದ್ದಾರೆ. ಕೆಲವರು, ಪಾಕಿಸ್ತಾನ ಮತ್ತು ಭಾರತದ ನಡುವಿನ ಸಂಬಂಧವನ್ನು ಇನ್ನಷ್ಟು ಗಾಢವಾಗಿಸುವ ಸಮಯ ಇದು ಎಂದು ಕೆಲವರು ಹೇಳಿದರು. ಹುಡುಗಿ ತನ್ನ ದೇಶಕ್ಕೆ ಭಾರತೀಯರನ್ನು ಆಹ್ವಾನಿಸಿದ ವಿಡಿಯೋ ವೈರಲ್​ ಆಗುತ್ತಿದ್ದಂತೆ ಹೀಗೆ ನಾನಾ ಕಾಮೆಂಟ್​ಗಳು ಬಂದಿವೆ.

ಈ ವೀಡಿಯೊವನ್ನು Instagram ನಲ್ಲಿ 'batoolhoon' ಹೆಸರಿನ ಖಾತೆಯೊಂದಿಗೆ ಹಂಚಿಕೊಳ್ಳಲಾಗಿದೆ. ಇದನ್ನು ಪಾಕಿಸ್ತಾನಿ ಪ್ರಭಾವಿಗಳು ತಮ್ಮ ಭಾರತೀಯ ಅಭಿಮಾನಿಗಳಿಗಾಗಿ ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋವನ್ನು ಇದುವರೆಗೆ 9.5 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಜನರು ಕೂಡ ವೀಕ್ಷಿಸಿದ್ದಾರೆ. ಪಾಕಿಸ್ತಾನದ ಈ ಪ್ರಭಾವಿ ತನ್ನ ಸೌಂದರ್ಯ ಮತ್ತು ಕೆಲವು ಒಳ್ಳೆಯ ವಿಚಾರಗಳಿಗೆ ಹೆಸರುವಾಸಿಯಾಗಿದ್ದಾಳೆ.