ನ್ಯೂಸ್

ಲ್ಯಾಂಡಿಂಗ್​ ವೇಳೆ ಪಾಕ್​ ಸೇನಾ ವಿಮಾನಕ್ಕೆ ಬೆಂಕಿ; ವಿಮಾನಗಳ ಹಾರಾಟ ರದ್ದು| Airport fire

ಪಾಕಿಸ್ತಾನದ ಲಾಹೋರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ (26) ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಿಂದಾಗಿ ಎಲ್ಲಾ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.

ಮೂಲಗಳ ಪ್ರಕಾರ, ಪಾಕಿಸ್ತಾನ ಸೇನಾ ವಿಮಾನವು ಲಾಹೋರ್ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಾಗ ಅದರ ಒಂದು ಟೈರ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ನಂತರ ಹೊತ್ತಿದ ಬೆಂಕಿಯನ್ನು ನಿಯಂತ್ರಿಸಲು ಸ್ಥಳಕ್ಕೆ ಅಗ್ನಿಶಾಮಕ ದಳದ ವಾಹನಗಳನ್ನು ಕರೆಯಿಸಲಾಗಿದೆ. ಈ ಘಟನೆಯಿಂದಾಗಿ ರನ್‌ವೇಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.

ಲಾಹೋರ್‌ನ ಅಲ್ಲಾಮಾ ಇಕ್ಬಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಬೆಂಕಿ ಅವಘಡದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವಿಮಾನ ನಿಲ್ದಾಣದಲ್ಲಿ ಇದ್ದ ಜನರು ಹೊಗೆಯಲ್ಲಿ ಸಿಲುಕಿಕೊಂಡಿರುವುದನ್ನು ಕಾಣಬಹುದು. 32 ಸೆಕೆಂಡುಗಳ ವೀಡಿಯೊದಲ್ಲಿ, ಪ್ರಯಾಣಿಕರು ಘಟನೆಯ ಬಗ್ಗೆ ಚರ್ಚಿಸುತ್ತಿರುವುದನ್ನು ನೋಡಬಹುದು. ಇನ್ನೂ ಈ ಘಟನೆಯಿಂದ ಯಾವುದೇ ಸಾವುನೋವುಗಳು ಸಂಭವಿಸುವ ವರದಿಯಾಗಿಲ್ಲ.

(ಏಜೆನ್ಸೀಸ್)

ಪಾಕಿಸ್ತಾನದ ಅಲ್ಲಾಮಾ ಇಕ್ಬಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಂಕಿ ಅವಘಡ ಸಂಭವಿಸಿರುವುದು ಇದೇ ಮೊದಲೇನಲ್ಲ. ವಿಮಾನ ನಿಲ್ದಾಣದಲ್ಲಿ ಬೆಂಕಿ ಅವಘಡಗಳು ನಡೆದಿರುವ ಬಗ್ಗೆ ಈ ಹಿಂದೆ ವರದಿಗಳಿದ್ದು, ಇದು ದೇಶದ ಕಳಪೆ ಮೂಲಸೌಕರ್ಯ ಮತ್ತು ಭದ್ರತಾ ಮಾನದಂಡಗಳ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ. ಕಳೆದ ವರ್ಷ ಮೇ 9 ರಂದು, ಲಾಹೋರ್ ವಿಮಾನ ನಿಲ್ದಾಣದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿತ್ತು.