ಬೆಂಗಳೂರು: ವಿಶ್ವದ ನಾಯಕರ ಕೋರಿಕೆಯನ್ನು ಪುರಸ್ಕರಿಸಿದ ಭಾರತ ಗಂಭೀರ ದೇಶವೆಂದು ತೋರಿಸಿ ಕೊಟ್ಟಿದೆ. ಆದರೆ ಪಾಕಿಸ್ತಾನದ ನಡೆಯನ್ನು ವಿಶ್ವ ಗಮನಿಸಿದ್ದು, ವಿಶ್ವದ ನಾಯಕರೇ ಯೋಚಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಉಗ್ರರ ವಿರುದ್ಧ ಭಾರತೀಯ ಸೇನೆ ಕೈಗೆತ್ತಿಕೊಂಡಿರುವ ಕಾರ್ಯಾಚರಣೆ ಯಶಸ್ವಿಯಾಗಲಿ ಎಂದು ಹಾರೈಸಿ, ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಭಾನುವಾರ ಏರ್ಪಡಿಸಿದ್ದ ‘ದೇಶಕ್ಕಾಗಿ ನಡಿಗೆ’ಯಲ್ಲಿ ಭಾಗವಹಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.
ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳನ್ನು ನಮ್ಮ ಸೈನಿಕರು ನಾಶ ಮಾಡಿದ್ದಾರೆ. ನಮ್ಮ ಪ್ರತೀಕಾರವನ್ನು ಗಡಿಯಲ್ಲಿ ತೋರಿಸುತ್ತಲೇ ಬಂದಿದ್ದೇವೆ. ನಮ್ಮ ದಾಳಿಗೆ ಹೆದರಿದ ಪಾಕಿಸ್ತಾನ, ಅಮೆರಿಕ ಇನ್ನಿತರ ದೇಶ ಕಾಲ ಹಿಡಿದು ಯುದ್ಧ ನಿಲ್ಲಿಸಲು ಮೊರೆಯಿಟ್ಟಿತು.
ಯುದ್ಧ ಮುಂದುವರಿಸುವ ಶಕ್ತಿ ನಮಗಿಲ್ಲವೆಂದು ಪಾಕಿಸ್ತಾನ ಕೋರಿತು. ಅಮೆರಿಕ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ೋಷಿಸಿದ ನಂತರ ಪಾಕಿಸ್ತಾನ ನರ ಬುದ್ಧಿ ತೋರಿಸಿದೆ ಎಂದು ಕಿಡಿಕಾರಿದರು.
ಕುಡಿಯಲು ನೀರು, ತಿನ್ನಲು ಅನ್ನಕ್ಕಾಗಿ ಪರದಾಡುತ್ತಿರುವ ಪಾಕಿಸ್ತಾನ ನಿರಂತರ ತೊಂದರೆ ನೀಡುತ್ತಿದ್ದು, ಮಟ್ಟಹಾಕಲೇಬೇಕಾಗಿದೆ. ಪಾಕಿಸ್ತಾನದ ಕುತಂತ್ರದ ಬಗ್ಗೆ ಆಲೋಚಿಸುವುದು ವಿಶ್ವದ ನಾಯಕರ ವಿವೇಚನೆಗೆ ಬಿಟ್ಟದ್ದು ಎಂದು ಶೋಭಾರ ಕರಂದ್ಲಾಜೆ ಹೇಳಿದರು.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ ಭಯೋತ್ಪಾದಕರ ದುಷ್ಕೃತ್ಯದ ವಿರುದ್ಧ ಇಡೀ ದೇಶ ಕೆರಳಿ ನಿಂತು, ಯುದ್ಧ ಮಾಡಬೇಕು ಎಂದರೆ ಗಾಂಧಿ ತತ್ವ, ಶಾಂತಿ ಪಾಲಿಸಿ ಎಂದು ಹೇಳಿದರು.
ಕದನ ವಿರಾಮದ ಬಗ್ಗೆ ಪ್ರಸ್ತಾಪವಾದಾಗ ಇಂದಿರಾಗಾಂಧಿ ವಿಚಾರ ಎಳೆದು ತಂದು ಈಗ ಯುದ್ಧ ಮಾಡಿ ಎನ್ನುತ್ತಿದ್ದಾರೆ. ಇದು, ನಕಲಿ ಗಾಂಧಿಗಳ ಕೆಲಸವೆಂದು ಟೀಕಿಸಿದರು.
ಅಂತಾರಾಷ್ಟ್ರೀಯಮಟ್ಟದಲ್ಲಿ ನಾವು ಕೂಡ ಒಂದು ಶಕ್ತಿಯಾಗಿದ್ದೇವೆ. ಪಾಕಿಸ್ತಾನದ ರೀತಿ ವರ್ತನೆ ಮಾಡಲಾಗದು. ಭಯೋತ್ಪಾದಕರ ಕಂಪನಿಯಾಗಿರುವ ಪಾಕಿಸ್ತಾನದ ಹೆಡೆಮುರಿ ಕಟ್ಟುವಲ್ಲಿ ನಮ್ಮ ಸೇನೆ ಯಶಸ್ವಿಯಾಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.
ವಿದ್ಯಾರಣ್ಯಪುರದ ಎನ್‌ಟಿಎ ಆಟದ ಮೈದಾನದಿಂದ ಶುರುವಾದ ರಾಷ್ಟ್ರಧ್ವಜ ಹಿಡಿದುಕೊಂಡವರ ನಡಿಗೆ ಸಹಕಾರ ನಗರದ ಗಣೇಶ ದೇವಸ್ಥಾನಕ್ಕೆ ತಲುಪಿತು. ಪಹಲ್ಗಾಮ್ ದುಷ್ಕೃತ್ಯಕ್ಕೆ ಪ್ರತಿಯಾಗಿ ಉಗ್ರರ ನೆಲೆಗಳ ಧ್ವಂಸ, ಭಯೋತ್ಪಾದಕ್ಕೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನಕ್ಕೆ ಭಾರತೀಯ ಸೇನೆ ತಕ್ಕಶಾಸ್ತಿ ಮಾಡುತ್ತಿರುವುದಕ್ಕೆ ಪ್ರಶಂಸಿಸಿದರು.
ಆಪರೇಷನ್ ಸಿಂಧೂರ ಯಶಸ್ವಿಯಾಗಲಿ ಎಂದು ಜಯ ೋಷ ಮೊಳಗಿಸಿದರು. ಈ ನಡಿಗೆಯಲ್ಲಿ ಹೆಜ್ಜೆ ಹಾಕಿದ ನಿವೃತ್ತ ಏರ್‌ಮಾರ್ಷಲ್ ಎನ್.ಪಿ.ಸಿಂಗ್ ಮಾತನಾಡಿದರು. ನಡಿಗೆಯಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ, ಪಕ್ಷದ ರಾಜ್ಯ ಕಾರ್ಯದರ್ಶಿ ಎಚ್.ಸಿ.ತಮ್ಮೇಶ್‌ಗೌಡ, ಮುಖಂಡರಾದ ಪಿ.ಕೆ.ರಾಜಗೋಪಾಲ, ನಂದಿನಿ ಶ್ರೀನಿವಾಸ, ಕಾರ್ಯಕರ್ತರು ಭಾಗವಹಿಸಿದ್ದರು.