ನ್ಯೂಸ್

ಪಾಕ್​ನಲ್ಲಿ ಹಾಲಿನ ಬೆಲೆ 10 ಪಿಕೆಆರ್​ ಏರಿಕೆ.. ಲೀಟರ್​ಗೆ ಎಷ್ಟೆಂದು ಕೇಳಿದ್ರೆ ಹೌಹಾರ್ತೀರಾ?

ಇಸ್ಲಾಮಾಬಾದ್​: ದಿವಾಳಿಯಾಗಿರುವ ಪಾಕಿಸ್ತಾನದಲ್ಲಿ ಅಗತ್ಯವಸ್ತುಗಳು ಗಗನಕ್ಕೆ ಏರಿರುವುದು ಗೊತ್ತೇ ಇದೆ. ಗಾಯದ ಮೇಲೆ ಬರೆ ಎಳೆದಂತೆ ಈಗ ಕರಾಚಿಯಲ್ಲಿ ರೈತರ ಒತ್ತಾಯದ ಮೇರೆಗೆ ಹಾಲಿನ ಬೆಲೆ 10ಪಾಕ್​ ರೂಪಾಯಿ ಹೆಚ್ಚಿಸಲಾಗಿದೆ. ಇದರೊಂದಿಗೆ ಪ್ರತಿ ಲೀಟರ್​ ಹಾಲಿನ ಬೆಲೆ 200ಪಿಕೆಆರ್​ ನಿಂದ 210 ಪಿಕೆಆರ್​ ಆಗಿದೆ. ಬೆಲೆ ಏರಿಕೆ ತಾಳಲಾರದೆ ಕಂಗೆಟ್ಟಿರುವ ಜನರು ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಹೈನುಗಾರರ ಸಂಘದ ಬೇಡಿಕೆಗಳಿಗೆ ಸಮ್ಮತಿಸಿ ನಗರದ ಕಮಿಷನರ್ ಹಾಲು ಬೆಲೆ ಹೆಚ್ಚಳಕ್ಕೆ ಅನುಮೋದನೆ ನೀಡಿದ ನಂತರ ಬೆಲೆ ಏರಿಕೆಯಾಗಿದೆ. ಕರಾಚಿಯ ಅಂಗಡಿಗಳು ಈಗ ಪ್ರತಿ ಲೀಟರ್‌ಗೆ 210ಪಿಕೆಆರ್​ಗೆ ಹಾಲನ್ನು ಮಾರಾಟ ಮಾಡುತ್ತಿವೆ. ಆದರೆ ಹಣದುಬ್ಬರದ ಕಾರಣ ನೀಡಿ ಶೀಘ್ರದಲ್ಲೇ ಸರ್ಕಾರ 50ಪಾಕ್​ ರೂಪಾಯಿ ಹೆಚ್ಚಿಸುವ ಸಾಧ್ಯತೆಯಿದೆ ಎಂದು ನಾಗರಿಕರು ಆತಂಕಗೊಂಡಿ್ದಾರೆ.

ಕರಾಚಿಯ ಡೈರಿ ರೈತರ ಅಧ್ಯಕ್ಷ ಮುಬಾಷರ್ ಖಾದಿರ್ ಅಬ್ಬಾಸಿ ಮಾತನಾಡಿ, ಹಾಲಿನ ಉತ್ಪಾದನೆಯ ವೆಚ್ಚಾಗಿದೆ. ರಾಸುಗಳ ಬೆಲೆ ಗಗನಕ್ಕೇರಿದೆ. ಸರ್ಕಾರದ ನಿರ್ಲಕ್ಷ್ಯವು ಈ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಉಲ್ಲೇಖಿಸಿದ್ದಾರೆ.

ಮೇ 10 ರೊಳಗೆ ಅಧಿಕಾರಿಗಳು ಹಾಲಿನ ದರ 50ರೂ.ಗೆ ಹೆಚ್ಚಿಸದಿದ್ದರೆ ಹಾಲು ಉತ್ಪಾದಕರು ಪ್ರತಿಭಟನೆಗೆ ಇಳಿಯಲಿದ್ದಾರೆ ಎಂದು ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ ಹಣದುಬ್ಬರದ ಕಾರಣದಿಂದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಜನ ತತ್ತರಿಸಿಹೋಗಿದ್ದಾರೆ.