ನ್ಯೂಸ್

ಕಾಬೂಲ್​ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ: TTP ಮುಖ್ಯಸ್ಥ ನೂರ್ ವಾಲಿ ಮೆಹ್ಸೂದ್ ಮಗ ಬಲಿ!

ಕಾಬೂಲ್: ಪಾಕಿಸ್ತಾನದ ಯುದ್ಧ ವಿಮಾನಗಳು ನಗರದೊಳಗಿನ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ ( TTP ) ನೆಲೆಗಳನ್ನು ಗುರಿಯಾಗಿಸಿಕೊಂಡು ಗುರುವಾರ ಮತ್ತು ಶುಕ್ರವಾರ ಬೆಳಿಗ್ಗೆ ವೈಮಾನಿಕ ದಾಳಿ ನಡೆಸಿವೆ ಎಂದು ವರದಿಯಾಗುತ್ತಿದೆ.

ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್​ನಲ್ಲಿ ಭಾರೀ ಸ್ಫೋಟಗಳ ಶಬ್ದ ಕೇಳಿಬಂದಿದೆ.ಇನ್ನು ನಗರದ ವಾಯುಪ್ರದೇಶದ ಮೇಲೆ ಫೈಟರ್ ಜೆಟ್ ಹಾರಿದ ಶಬ್ದವನ್ನು ಹಲವಾರು ಸಾಕ್ಷಿಗಳು ವರದಿ ಮಾಡಿದ್ದಾರೆ.

ಉನ್ನತ ಗುಪ್ತಚರ ಮೂಲಗಳು ಈ ಘಟನೆಯು ಪೂರ್ವ ಕಾಬೂಲ್‌ನಲ್ಲಿರುವ  ಟಿಟಿಪಿ ಮತ್ತು ಅಲ್-ಖೈದಾ ಸೇಫ್‌ಹೌಸ್‌ನಿಂದ ಕಾರ್ಯನಿರ್ವಹಿಸುತ್ತಿರುವ ತೆಹ್ರಿಕ್ -ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಮುಖ್ಯಸ್ಥ ನೂರ್ ವಾಲಿ ಮೆಹ್ಸೂದ್ ಅವರನ್ನು ಗುರಿಯಾಗಿಸಿಕೊಂಡು ನಡೆಸಲಾದ ವೈಮಾನಿಕ ದಾಳಿ ಎಂದು ಸೂಚಿಸುತ್ತವೆ.

ಮೂಲಗಳು ಕಾಂಪೌಂಡ್ ಅನ್ನು ಗುರಿಯಾಗಿಸಿಕೊಂಡು ದಾಳಿ ಯಶಸ್ವಿಯಾಗಿ ನಡೆಸಲಾಗಿದೆ ಎಂದು ದೃಢಪಡಿಸಿದರೂ, ನೂರ್ ವಾಲಿ ಮೆಹ್ಸೂದ್ ಅವರು ಪಾಕಿಸ್ತಾನದಲ್ಲಿ ಸುರಕ್ಷಿತರಾಗಿದ್ದಾರೆ ಎನ್ನಲಾಗುತ್ತಿದೆ. ಆದಾಗ್ಯೂ ಅವರ ಮಗ ದಾಳಿಯಲ್ಲಿ ಮೃತಪಟ್ಟಿದಾನೆ.

ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅಫ್ಘಾನಿಸ್ತಾನವನ್ನು ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದ್ದಾರೆ ಎಂದು ಸಾರ್ವಜನಿಕವಾಗಿ ಆರೋಪಿಸಿದ್ದಾರೆ. ಈ ಹಿನ್ನೆಲೆ ದಾಳಿ ನಡೆದಿದೆ ಎಂದು ವರದಿ ಉಲ್ಲೇಖಿಸಿದೆ.(ಏಜೆನ್ಸೀಸ್​)