ನ್ಯೂಸ್

ಪಹಲ್ಗಾಮ್ ಮಾಸ್ಟರ್​ವೆುೖಂಡ್ ಜತೆ ಪಾಕ್ ಸ್ಪೀಕರ್

ಭಯೋತ್ಪಾದಕರಿಗೆ ಪಾಕ್ ರಾಜಕಾರಣಿಯ ಬೆಂಬಲ | ಮಲಿಕ್ ಮುಹಮ್ಮದ್ ವಿವಾದಾತ್ಮಕ ನಡೆ

ನವದೆಹಲಿ: ಪಾಕಿಸ್ತಾನ ತನ್ನ ನೆಲದಲ್ಲಿ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ, ಭಯೋತ್ಪಾದಕರನ್ನು ಪೋಷಿಸುತ್ತಿದೆ ಎಂಬುದಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಿದ್ದು, ಪಹಲ್ಗಾಮ್ ದಾಳಿಯ ಮಾಸ್ಟರ್​ವೆುೖಂಡ್ ಜತೆ ಪಾಕಿಸ್ತಾನದ ಪ್ರಮುಖ ರಾಜಕೀಯ ಮುಖಂಡ ವೇದಿಕೆ ಹಂಚಿಕೊಂಡಿರುವ ಫೋಟೋ ವೈರಲ್ ಆಗಿದೆ.

ವಿಶ್ವಸಂಸ್ಥೆಯಿಂದ ನಿಷೇಧಕ್ಕೊಳಗಾಗಿರುವ ಲಷ್ಕರ್ ಎ ತೋಯ್ಬಾ ಉಗ್ರ ಸಂಘಟನೆಯ ಸಂಸ್ಥಾಪಕ ಹಫೀಜ್ ಸಯೀದ್​ನ ಪುತ್ರ ತಲ್ಲಾ ಸಯೀದ್ ಮತ್ತು ಲಷ್ಕರ್ ಸಂಘಟನೆಯ ಉಪ ಮುಖ್ಯಸ್ಥ ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಸೈಫುಲ್ಲಾ ಅಹಮದ್ ಜತೆ ಪಾಕ್​ನ ಪಂಜಾಬ್ ಪ್ರಾಂತ್ಯದ ವಿಧಾನಸಭೆ ಸ್ಪೀಕರ್ ಮಲಿಕ್ ಮುಹಮ್ಮದ್ ಅಹಮದ್ ಖಾನ್ ರ್ಯಾಲಿಯೊಂದರಲ್ಲಿ ವೇದಿಕೆ ಹಂಚಿಕೊಂಡಿದ್ದಾರೆ.

ಸೈಫುಲ್ಲಾ ಜತೆ ವೇದಿಕೆ ಹಂಚಿಕೊಂಡಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಪಂಜಾಬ್ ವಿಧಾನಸಭೆ ಸ್ಪೀಕರ್ ಖಾನ್ ‘ಪಹಲ್ಗಾಮ್ ದಾಳಿಯಲ್ಲಿ ಸೈಫುಲ್ಲಾ ಪಾತ್ರ ಇರುವ ಕುರಿತು ತನಿಖೆಯಲ್ಲಿ ಸಾಬೀತಾಗದ ಹೊರತು ಆತನನ್ನು ದಾಳಿಯ ಮಾಸ್ಟರ್​ವೆುೖಂಡ್ ಎನ್ನಲು ಸಾಧ್ಯವಿಲ್ಲ. ಇದೊಂದು ರಾಜಕೀಯ ರ್ಯಾಲಿ, ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡವರು ಸಭೆಯಲ್ಲಿದ್ದರು. ಕಸೂರ್ ನಗರದೊಂದಿಗೆ ನನಗೆ ಸಂಬಂಧ ಇರುವುದರಿಂದ ಆಯೋಜಕರು ರ್ಯಾಲಿಗೆ ನನ್ನನ್ನು ಆಹ್ವಾನಿಸಿದ್ದರು’ ಎಂದು ತಿಳಿಸಿದ್ದಾರೆ.

ಭಾರತೀಯ ಸೇನಾ ಪಡೆಗಳು ಧ್ವಂಸಗೊಳಿಸಿದ ಉಗ್ರರ ಕ್ಯಾಂಪ್​ಗಳಲ್ಲಿ ಮತ್ತೆ ಚಟುವಟಿಕೆಗಳು ಆರಂಭವಾಗಿವೆ. ಪಾಕ್ ಸರ್ಕಾರ-ಸೇನೆಯ ಬೆಂಬಲದೊಂದಿಗೆ ಮತ್ತೆ ತಮ್ಮ ನೆಲೆ ಕಾಣಲು ಯತ್ನಿಸುತ್ತಿದ್ದಾರೆ ಎಂಬ ಸುದ್ದಿಗಳ ಹಿನ್ನೆಲೆಯಲ್ಲೇ ಲಷ್ಕರ್​ನಂಥ ಸಂಘಟನೆಯ ಟಾಪ್ ಉಗ್ರರು ಪ್ರಮುಖ ರಾಜಕಾರಣಿ ಜತೆ ಕಾಣಿಸಿಕೊಳ್ಳುವ ಮೂಲಕ ಉಗ್ರರಿಗೆ ಸಿಗುತ್ತಿರುವ ಸರ್ಕಾರಿ ಬೆಂಬಲ ಮತ್ತೊಮ್ಮೆ ಜಗಜ್ಜಾಹೀರಾಗಿದೆ.

ಸಿಂಧೂರದಿಂದ ಪಾಕ್​ಗೆ ಹೆಚ್ಚು ನಷ್ಟ: ಆಪರೇಷನ್ ಸಿಂಧೂರ ವೇಳೆ ಭಾರತೀಯ ಸೇನಾ ಪಡೆಗಳು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಭಯೋತ್ಪಾದಕರ ಕ್ಯಾಂಪ್​ಗಳು, ಮುಖ್ಯ ಕಚೇರಿಗಳು, ವಾಯುನೆಲೆಗಳು ಮತ್ತು ಸೇನಾ ನೆಲೆಗಳ ಮೇಲೆ ದಾಳಿ ಮಾಡಿತ್ತು. ದಾಳಿ ಮಾಡಿದ ಸ್ಥಳಗಳ ಕುರಿತು ನಮ್ಮ ಸೇನಾಪಡೆಗಳು ಸಾಕ್ಷ್ಯಗಳ ಸಹಿತ ಮಾಹಿತಿ ಹಂಚಿಕೊಂಡಿದ್ದರು. ಆದರೆ ಪಾಕಿಸ್ತಾನ ಸರ್ಕಾರ ದಾಳಿ ಕುರಿತಾದ ಅಧಿಕೃತ ದಾಖಲೆಗಳಲ್ಲಿ ಭಾರತ ಹೆಚ್ಚು ಸ್ಥಳಗಳ ಮೇಲೆ ದಾಳಿ ಮಾಡಿದೆ ಎಂದು ದಾಖಲಿಸಿದೆ. ಅದರಲ್ಲೂ ಪೇಶಾವರ, ಅಟ್ಟಾಕ್, ಗುಜರಾತ್, ಜಾಂಗ್, ಭಹಾವಲ್​ನಗರ, ಹೈದರಾಬಾದ್, ಛೋರ್​ನಂತಹ ನಗರಗಳ ಮೇಲೆ ದಾಳಿ ನಡೆದಿದೆ. ನಾಗರಿಕರನ್ನೂ ಗುರಿಯಾಗಿಸಿ ಭಾರತ ದಾಳಿ ನಡೆಸಿದೆ ಎಂದು ದಾಖಲೆಯಲ್ಲಿ ತಿಳಿಸಿದೆ.

ಭಾರತ ಗರಿಷ್ಠ 300 ಕಿ.ಮೀ. ದೂರದ ಗುರಿ ಹೊಡೆದುರುಳಿಸಿದೆ ಎಂದಿತ್ತು. ಆದರೆ ಪಾಕ್ ತನ್ನ ದಾಖಲೆಯಲ್ಲಿ ಗಡಿ ನಿಯಂತ್ರಣ ರೇಖೆಯಿಂದ 700ರಿಂದ 1000 ಕಿ.ಮೀ. ದೂರದ ಅಟ್ಟಾಕ್-ಪೇಶಾವರ ನಗರದ ಮೇಲೂ ದಾಳಿ ನಡೆದಿದೆ ಎಂದಿದೆ. ಪಾಕ್ ಸೇನೆಯ ಸುದ್ದಿಗೋಷ್ಠಿಯಲ್ಲಿ ತಿಳಿಸದಿದ್ದ ಸ್ಥಳಗಳೂ ಅಧಿಕೃತ ದಾಖಲೆಯಲ್ಲಿ ಸೇರಿವೆ. ಇದು ಆಪರೇಷನ್ ಸಿಂಧೂರದಲ್ಲಿ ಭಾರತ ಹೆಚ್ಚು ಸ್ಥಳಗಳನ್ನು ಗುರಿಯಾಗಿಸಿ ದಾಳಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಪಾಕ್ ಕದನ ವಿರಾಮಕ್ಕೆ ಮುಂದಾಗಿತ್ತು ಎಂಬುದನ್ನು ಸೂಚಿಸುತ್ತದೆ.

ಟ್ರಂಪ್ ಮುಂದೆ ಶರಣಾದ ಮೋದಿ

ಭಾರತ-ಪಾಕ್ ಸಂಘರ್ಷದ ಸಮಯದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರಿಂದ ಕರೆ ಬರುತ್ತಿದ್ದಂತೆ ಟ್ರಂಪ್​ಗೆ ಪ್ರಧಾನಿ ನರೇಂದ್ರ ಮೋದಿ ಶರಣಾಗಿದ್ದರು. ಬಿಜೆಪಿ-ಆರ್​ಎಸ್​ಎಸ್​ನವರು ಯಾವಾಗಲೂ ತಲೆಬಾಗುತ್ತಾರೆ. ನನಗೆ ಆರ್​ಎಸ್​ಎಸ್-ಬಿಜೆಪಿ ಜನರು ಗೊತ್ತು, ನೀವು ಸ್ವಲ್ಪ ಒತ್ತಡ ಹೇರಿ ಅವರನ್ನು ತಳ್ಳಿದರೂ ಅವರು ಭಯದಿಂದ ಓಡಿಹೋಗುತ್ತಾರೆ. ಮಹಾತ್ಮಾಗಾಂಧಿ, ಜವಾಹರ್ ಲಾಲ್ ನೆರವು, ಸರ್ದಾರ್ ವಲ್ಲಭಭಾಯಿ ಪಟೇಲ್ ಎಂದಿಗೂ ಶರಣಾಗಲಿಲ್ಲ, ಅವರು ಮಹಾಶಕ್ತಿಗಳ ವಿರುದ್ಧ ಹೋರಾಟ ನಡೆಸಿದ್ದರು ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಎನ್​ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಷ್ಟ ಮುಖ್ಯವಲ್ಲ, ಫಲಿತಾಂಶ ಮುಖ್ಯ...

ಸೇನಾ ಪಡೆಗಳು ಸೋಲು ಮತ್ತು ಹಿನ್ನಡೆಯಿಂದ ಕುಗ್ಗುವುದಿಲ್ಲ. ಯುದ್ಧದಲ್ಲಿ ಹಿನ್ನಡೆಯಾದಾಗಲೂ ಉತ್ಸಾಹ ಕುಗ್ಗದಂತೆ ನೋಡಿಕೊಳ್ಳಬೇಕು. ಸನ್ನಿವೇಶಕ್ಕೆ ತಕ್ಕಂತೆ ನಮ್ಮನ್ನು ಒಗ್ಗಿ್ಗಕೊಳ್ಳಬೇಕು. ನಮ್ಮಿಂದ ಆದ ತಪು್ಪ ಏನು ಎಂಬುದನ್ನು ಗುರುತಿಸಿ, ಮತ್ತೆ ದಾಳಿ ನಡೆಸಬೇಕು, ಭಯದಿಂದ ಕೂರಬಾರದು. ಮೇ 7ರಂದು ನಾವು ಭಯೋತ್ಪಾದಕರ ಕ್ಯಾಂಪ್​ಗಳ ಮೇಲೆ ದಾಳಿ ಮಾಡುವಾಗ ನಮಗೆ ಸ್ವಲ್ಪ ನಷ್ಟವಾಗಿತ್ತು. ಕಾರ್ಯಾಚರಣೆ ವೇಳೆ ಸಾಕಷ್ಟು ಅಪಾಯ ಎದುರಾಗಿತ್ತು. ಆದರೆ ಅಂತಿಮವಾಗಿ ಪಾಕಿಸ್ತಾನಕ್ಕೆ ದೊಡ್ಡ ಪೆಟ್ಟು ನೀಡುವಲ್ಲಿ ಯಶಸ್ವಿಯಾದೆವು. ಪಾಕಿಸ್ತಾನ ಭಾರತವನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಒತ್ತೆಯಾಳಾಗಿ ಇರಿಸಲು ಸಾಧ್ಯವಾಗಬಾರದು.

ಭಾರತ ಭಯೋತ್ಪಾದನೆ ಮತ್ತು ಅಣ್ವಸ್ತ್ರದ ಬೆದರಿಕೆಯ ನೆರಳಿನಲ್ಲಿ ಬದುಕುವುದಿಲ್ಲ ಎಂದು ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಪುಣೆಯ ಸಾವಿತ್ರಿ ಭಾಯಿ ಪುಲೆ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ. ಮೇ 9ರಂದು ತಡರಾತ್ರಿ 1 ಗಂಟೆ ವೇಳೆಗೆ ಭಾರತವನ್ನು 48 ಗಂಟೆಯೊಳಗೆ ಸೋಲಿಸಿ ಮಂಡಿಯೂರಿಸುವುದು ಪಾಕಿಸ್ತಾನದ ಗುರಿಯಾಗಿತ್ತು. ಆದರೆ ಆ ಬಳಿಕ ಮೇ 10ರ ಬೆಳಗಿನ ಜಾವ ಭಾರತ ನಡೆಸಿದ ದಾಳಿ ಹಿನ್ನೆಲೆಯಲ್ಲಿ ಕೇವಲ 8 ಗಂಟೆಗಳಲ್ಲಿ ಪಾಕಿಸ್ತಾನ ನಮ್ಮೆದುರು ಮಂಡಿಯೂರಿ ಕದನ ವಿರಾಮಕ್ಕಾಗಿ ಅಂಗಲಾಚಿತ್ತು ಎಂದು ಚೌಹಾಣ್ ತಿಳಿಸಿದರು.