ಇಸ್ಲಾಮಾಬಾದ್: ಜಮ್ಮು-ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆ ಆಗ್ತಿದೆಯಂತೆ. ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿಯಲ್ಲಿ ಪ್ರಸ್ತಾಪವಾಗಿರುವ ವಿಚಾರ ಇದು. ಅಷ್ಟೇ ಅಲ್ಲ, ಇಂತಹ ಮಾನವ ಹಕ್ಕು ಉಲ್ಲಂಘನೆಯನ್ನು ಖಂಡಿಸಿ ಅದು ಖಂಡನಾ ನಿರ್ಣಯವನ್ನೂ ತೆಗೆದುಕೊಂಡಿದೆ!
ಕಾಶ್ಮೀರಿಗಳಿಗೆ ರಾಜಕೀಯ ಮತ್ತು ರಾಜತಾಂತ್ರಿಕ ಬೆಂಬಲ ಒದಗಿಸುವ ಮೂಲಕ ಸಹಾಯ ಹಸ್ತ ಚಾಚುವುದಕ್ಕೆ ಅನುಕೂಲವಾಗುವಂತೆ ಮಾನವ ಹಕ್ಕುಗಳ ಉಲ್ಲಂಘನೆ ಖಂಡನಾ ನಿರ್ಣಯವನ್ನು ಪಾಕಿಸ್ಥಾನದ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಅಲಿ ಮುಹಮ್ಮದ್ ಖಾನ್ ಮಂಡಿಸಿದರು.
ಇದನ್ನೂ ಓದಿ: ದ್ವಿತೀಯ ಪಿಯು ಫಲಿತಾಂಶ ಇಂದು 11.30ಕ್ಕೆ
‘ಜಮ್ಮು ಮತ್ತು ಕಾಶ್ಮೀರ ಭಾರತದ ಭಾಗವಾಗಿದ್ದು, ಕೇಂದ್ರಾಡಳಿತ ಪ್ರದೇಶವಾಗಿ ಅದು ಹಾಗೆಯೇ ಮುಂದುವರಿಯಲಿದೆ. ಜಮ್ಮು-ಕಾಶ್ಮೀರದ ಯಾವುದೇ ವಿಚಾರವೂ ಭಾರತದ ಆಂತರಿಕ ವಿಚಾರವಾಗಿದೆ. ಅದರಲ್ಲಿ ಹೊರಗಿನವ ಹಸ್ತಕ್ಷೇಪ ಬೇಡ ಎಂದು ಭಾರತ ಸರ್ಕಾರ ಪಾಕಿಸ್ತಾನಕ್ಕೆ ತಿಳಿಸಿದೆ. ಕಾಶ್ಮೀರಿಗಳ ಸಮಸ್ಯೆ ಬಗೆಹರಿಸುವುದಕ್ಕೆ ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯ ಸಮುದಾಯ ಮಹತ್ವದ ಪಾತ್ರವಹಿಸುವಂತೆ ಮಾಡಬೇಕಾಗಿದೆ ಎಂಬ ಅಂಶವೂ ನಿರ್ಣಯದಲ್ಲಿದೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕೂಡ ಟ್ವಿಟರ್ನಲ್ಲಿ ಕಾಶ್ಮೀರಿ ಜನರ ಬೆಂಬಲಕ್ಕೆ ನಿಲ್ಲುವುದಾಗಿ ಘೋಷಿಸಿದ್ದಾರೆ. ಪಾಕಿಸ್ತಾನದ ವಿದೇಶಾಂಗ ಕಚೇರಿಯೂ ಈ ಸಂಬಂಧ ಪ್ರತ್ಯೇಕ ಹೇಳಿಕೆಯನ್ನು ಬಿಡುಗಡೆ ಮಾಡಿದೆ. (ಏಜೆನ್ಸೀಸ್)