ನ್ಯೂಸ್

ಜೆಎನ್​ಯುನಲ್ಲಿ ದೀಪಿಕಾ ಪಡುಕೋಣೆ| ಮೆಚ್ಚುಗೆ ಸೂಚಿಸಿ ಪಾಕ್ ಸೇನಾ ವಕ್ತಾರ ಟ್ವೀಟ್ ಮಾಡಿದ. ಮುಂದೇನಾಯಿತು...

ಇಸ್ಲಮಾಬಾದ್: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜೆಎನ್​ಯುಗೆ ಭೇಟಿ ನೀಡಿದ್ದು ವಿವಾದಕ್ಕೀಡಾದ ಬೆನ್ನಲ್ಲೇ, ಆಕೆಯ ನಡೆಯ ಬಗ್ಗೆ ಮೆಚ್ಚುಗೆ ಸೂಚಿಸಿ ಪಾಕಿಸ್ತಾನದ ಸೇನಾ ವಕ್ತಾರ ಮೇಜರ್ ಜನರಲ್​ ಆಸಿಫ್ ಗಫೂರ್ ಬುಧವಾರ ಟ್ವೀಟ್ ಮಾಡಿದ್ದರು.

ಜೆಎನ್​ಯು ಪ್ರತಿಭಟನಾಕಾರರ ಪರ ನಿಂತ ದೀಪಿಕಾ ಪಡುಕೋಣೆ ಬ್ರೇವ್ ಪರ್ಸನ್​ ಎಂಬ ಪ್ರಶಂಸೆಯನ್ನು ಗಫೂರ್ ತಮ್ಮ ಟ್ವೀಟ್​ನಲ್ಲಿ ಉಲ್ಲೇಖಿಸಿದ್ದರು. ಈ ಟ್ವೀಟನ್ನು ಅವರು ತಮ್ಮ ವೈಯಕ್ತಿಕ ಖಾತೆಯಿಂದ ಮಾಡಿದ್ದರು. ಆದರೆ, ಕೆಲವೇ ನಿಮಿಷಗಳಲ್ಲಿ ಈ ಟ್ವೀಟನ್ನು ಅವರು ಅಳಿಸಿ ಹಾಕಿದರು. ಕಾರಣ ಏನು ಎಂಬುದು ಬಹಿರಂಗವಾಗಿಲ್ಲ.

ಅವರು ಮಾಡಿದ ಟ್ವೀಟ್ ಹೀಗಿತ್ತು - "Kudos @deepikapadukone for standing both with youth and the truth. You have proved to be a brave person in a difficult environment earning respect. Humanity is above everything," (ಏಜೆನ್ಸೀಸ್)