ನವದೆಹಲಿ: ಭಾರತದಲ್ಲಿ ಸ್ವಂತ ಸರ್ಕಾರಿ ನೌಕರರಾಗಿ ಸ್ವಂತ ಉದ್ದಿಮೆ ಶುರು ಮಾಡ್ತೀನಿ ಅಂದರೆ ಅನೇಕರು ನಿನಗೆ ಹುಚ್ಚು ಹಿಡಿದಿದೆಯಾ ಎಂದೇ ಕೇಳುತ್ತಾರೆ. ಆದರೆ ಈ ದೇಶದಲ್ಲಿ ಮಾತ್ರ ಸ್ವಂತ ಉದ್ದಿಮೆ ಶುರು ಮಾಡಲು ಆಸಕ್ತಿ ಇರುವ ಸರ್ಕಾರಿ ನೌಕರರಿಗೆ ವೇತನ ಸಹಿತ ರಜೆ ಕೊಡುತ್ತಾರೆ!
ಯುಎಇಯ ಹೊಸ ನಿಯಮದ ಪ್ರಕಾರ ಜನವರಿ 2,2023 ರಿಂದ ಸರ್ಕಾರಿ ಉದ್ಯೋಗಿಗಳಿಗೆ ಸ್ವಂತ ಉದ್ಯಮ ಶುರು ಮಾಡುವ ಆಸಕ್ತಿ ಇದ್ದರೆ ಅವರಿಗೆ ಒಂದು ವರ್ಷದ ವೇತನ ಸಹಿತ ರಜೆಯನ್ನು ನೀಡಲಾಗುತ್ತದೆ.
ದುಬೈ ಆಡಳಿತಗಾರ, ಯುಎಇ ಉಪಾಧ್ಯಕ್ಷ ಮತ್ತು ಪ್ರಧಾನ ಮಂತ್ರಿ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್, ಉದ್ದಿಮೆಗಳಿಗೆ ಉತ್ತೇಜನ ನೀಡುವ ಸಲುವಾಗಿ ದೇಶದ ಕ್ಯಾಬಿನೆಟ್ ಈ ಉಪಕ್ರಮವನ್ನು ಅನುಮೋದಿಸಿದ್ದಾರೆ ಎಂದು ಘೋಷಿಸಿದರು.
"ಇಂದು, ಕೌನ್ಸಿಲ್‌ನಲ್ಲಿ, ಸ್ವಂತ ವ್ಯವಹಾರವನ್ನು ನಡೆಸಲು ಬಯಸುವ ಸರ್ಕಾರಿ ನೌಕರರಿಗೆ ನಾವು ವಿಶ್ರಾಂತಿ ರಜೆಯನ್ನು ನಿರ್ಧರಿಸಿದ್ದೇವೆ. ರಜೆಯು ಒಂದು ವರ್ಷದವರೆಗೆ ಇರುತ್ತದೆ. ಅರ್ಧದಷ್ಟು ಸಂಬಳದೊಂದಿಗೆ, ಈ ಸಂದರ್ಭ ಹೊಸ ಉದ್ದಿಮೆಯನ್ನು ಶುರು ಮಾಡಬಹುದು. ನಮ್ಮ ಗುರಿ ನಮ್ಮ ನಾಗರಿಕರನ್ನು ಪ್ರೋತ್ಸಾಹಿಸುವುದು. ಯುವಜನರು ನಮ್ಮ ರಾಷ್ಟ್ರೀಯ ಆರ್ಥಿಕತೆ ನೀಡುವ ಬೃಹತ್ ವ್ಯಾಪಾರ ಅವಕಾಶಗಳ ಲಾಭವನ್ನು ಪಡೆದುಕೊಳ್ಳಬೇಕು" ಎಂದು ಶೇಖ್ ಮೊಹಮ್ಮದ್ ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್)