Pahalgaon Attack : ಪಹಲ್ಗಾವ್ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಮುನ್ನೆಚ್ಚೆರಿಕೆ ಕ್ರಮವಾಗಿ 1500 ಕ್ಕೂ ಅಧಿಕ ಶಂಕಿತರನ್ನು ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಉಗ್ರರದಾಳಿ ಕುರಿತು ರಾಬರ್ಟ್ ವಾದ್ರಾ ವಿವಾದಾತ್ಮಕ ಹೇಳಿಕೆ!; ಪ್ರಿಯಾಂಕಾ ಗಾಂಧಿ ಪತಿ ಹೇಳಿದ್ದೇನು? | Controversial
ದಾಳಿ ಮಾಡಿದ ಉಗ್ರರ ಶೋಧಕ್ಕೆ ಜಮ್ಮು-ಕಾಶ್ಮೀರ ಪೊಲೀಸರು, ಕೇಂದ್ರಿಯ ಮೀಸಲು ಪಡೆ ಸೇರಿದಂತೆ ಭದ್ರತಾ ಪಡೆಗಳು ಕಾಶ್ಮೀರದ್ಯಂತ ತೀವ್ರ ಶೋಧ ಕಾರ್ಯ ಮಾಡುತ್ತಿವೆ. ಉಗ್ರರ ಸುಳಿವು ಕಂಡುಹಿಡಿಯಲು ನೂರಾರು ಶಂಕಿತನ್ನು ಬಂಧಿಸಿದೆ.
ಪಹಲ್ಗಾಮ್ಗೆ ಬಂದು ಪ್ರವಾಸಿಗರನ್ನು ಹತ್ಯೆ ಮಾಡಲು ಉಗ್ರರಿಗೆ ಯಾರು ಆಶ್ರಯ ನೀಡಿದರು?, ಸಹಾಯ ಮಾಡಿದರು ಅಥವಾ ಶಸ್ತ್ರಾಸ್ತ್ರಗಳನ್ನು ಒದಗಿಸಿದರು ಎಂಬುದನ್ನು ಕಂಡುಹಿಡಿಯಲು ಈ ಎಲ್ಲ ಜನರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಗುಪ್ತಚರ ಸಂಸ್ಥೆಗಳ ಮಾಹಿತಿಗಳನ್ನು ಒಟ್ಟುಗೂಡಿಸಿ, ಪ್ರತಿಯೊಬ್ಬ ಶಂಕಿತನ ಸಂಪರ್ಕಗಳನ್ನು ತನಿಖೆ ಮಾಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.(ಏಜೆನ್ಸೀಸ್)