ನ್ಯೂಸ್

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸೇಡು ತೀರಿಸಿಕೊಳ್ಳಬೇಕು: Operation Sindoor ಮುಂದುವರಿಸಿ; ಅಸಾದುದ್ದೀನ್ ಓವೈಸಿ

ಹೈದರಾಬಾದ್: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ "ಸೇಡು ತೀರಿಸಿಕೊಳ್ಳಬೇಕು" ಮತ್ತು Operation Sindoor ಮುಂದುವರಿಸಬೇಕು ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಬುಧವಾರ (ಜು. 16) ಹೇಳಿದ್ದಾರೆ.

ವಕ್ಫ್ (ತಿದ್ದುಪಡಿ) ಕಾಯ್ದೆಯನ್ನು ವಿರೋಧಿಸಿ ಬುಧವಾರ ರಾತ್ರಿ ತೆಲಂಗಾಣದ ಬೋಧನ್ ಪಟ್ಟಣದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪಹಲ್ಗಾಮ್ ಭಯೋತ್ಪಾದಕ ದಾಳಿಯು ಪ್ರಧಾನಿ ಮೋದಿ ಸರ್ಕಾರದ ಭದ್ರತಾ ವೈಫಲ್ಯಕ್ಕೆ ಒಂದು ಉದಾಹರಣೆಯಾಗಿದೆ ಎಂದು ಆರೋಪಿಸಿದರು.

"ಪಹಲ್ಗಾಮ್‌ಗೆ ಸೇಡು ತೀರಿಸಿಕೊಳ್ಳಬೇಕು. ಆಪರೇಷನ್ ಸಿಂಧೂರ ಮುಂದುವರಿಸಿ. ಧರ್ಮ ಕೇಳಿ 26 ಭಾರತೀಯರನ್ನು ಕೊಂದ ನಾಲ್ವರು ಭಯೋತ್ಪಾದಕರನ್ನು ಹಿಡಿದು ಕೊಲ್ಲುವವರೆಗೂ ನಾವು ನಿಮ್ಮನ್ನು ಪ್ರಶ್ನಿಸುತ್ತೇವೆ" ಎಂದು ಕಿಡಿಕಾರಿದರು.

ಬಾಂಗ್ಲಾದೇಶದಲ್ಲಿ ಚೀನಾ ತನ್ನ ಪ್ರಭಾವವನ್ನು ವಿಸ್ತರಿಸುತ್ತಿರುವ ಸಮಯದಲ್ಲಿ, ದೇಶದ ಕೆಲವರು ಕಟ್ಟಡಗಳನ್ನು ಕೆಡವುವುದು ಮತ್ತು ಬುಲ್ಡೋಜರ್‌ಗಳಂತಹ ವಿಷಯಗಳ ಬಗ್ಗೆ ಮಾತನಾಡುತ್ತಿರುವುದಕ್ಕೆ ಓವೈಸಿ ವಿಷಾದ ವ್ಯಕ್ತಪಡಿಸಿದರು. (ಏಜೆನ್ಸೀಸ್​)