ಜಮ್ಮು ಮತ್ತು ಕಾಶ್ಮೀರ: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ದೇಶಾದ್ಯಂತ ಎಲ್ಲರಲ್ಲೂ ಕೋಪ ಆವರಿಸಿದೆ. ಇನ್ನೂ ಜಮ್ಮು ಮತ್ತು ಕಾಶ್ಮೀರದಲ್ಲಿನ 14 ಸ್ಥಳೀಯ ಭಯೋತ್ಪಾದಕರ ಪಟ್ಟಿಯನ್ನು ಗುಪ್ತಚರ ಇಲಾಖೆ ಸಿದ್ಧಪಡಿಸಿದೆ.
ಈ ಭಯೋತ್ಪಾದಕರು ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ. ಈ ಸ್ಥಳೀಯ ಭಯೋತ್ಪಾದಕರು ವಿದೇಶಿ ಪಾಕಿಸ್ತಾನಿ ಭಯೋತ್ಪಾದಕರಿಗೆ ಲಾಜಿಸ್ಟಿಕಲ್ ಮತ್ತು ಇತರ ಬೆಂಬಲವನ್ನು ನೀಡುವವರಾಗಿದ್ದು, ಈ ಸ್ಥಳೀಯ ಭಯೋತ್ಪಾದಕರು ಪಾಕಿಸ್ತಾನಿ ಭಯೋತ್ಪಾದಕರ ಪ್ರಬಲ ಬೆಂಬಲಿಗರಾಗಿ ಕಾರ್ಯ ನಿರ್ವಹಿಸುತ್ತಾ ಇದ್ದರು ಎನ್ನಲಾಗಿದೆ.
ಅವರು ಸ್ಥಳೀಯ ಮಟ್ಟದಲ್ಲಿ ಬೆಂಬಲ ಮತ್ತು ವ್ಯವಸ್ಥಾಪನಾ ಸಹಾಯವನ್ನು ಒದಗಿಸುವುದಲ್ಲದೆ, ಭಯೋತ್ಪಾದಕರಿಗೆ ಆಶ್ರಯ ಮತ್ತು ಸಂಪನ್ಮೂಲಗಳನ್ನು ಸಹ ಒದಗಿಸುತ್ತಿದ್ದರು ಎಂಬುದಾಗಿ ತಿಳಿದು ಬಂದಿದೆ. ಈಗಾಗಲೇ ಅವರಿಗಾಗಿ ಶೋಧ ಕಾರ್ಯಾಚರಣೆಗಳು ನಡೆಯುತ್ತಿದ್ದು, ಈ ಸ್ಥಳೀಯ ಭಯೋತ್ಪಾದಕರನ್ನು ಹಿಡಿಯಲು ಸೇನಾಪಡೆ ನಿರಂತರ ಕಾರ್ಯದಲ್ಲಿ ತೊಡಗಿದೆ.
ಈ ಭಯೋತ್ಪಾದಕರು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಭದ್ರತಾ ಸಂಸ್ಥೆಗಳು ಸ್ಪಷ್ಟಪಡಿಸಿವೆ.
14. ಜುಬೈರ್ ಅಹ್ಮದ್ ಗನಿ
13. ಹರೂನ್ ರಶೀದ್ ಗನಿ
12. ಜುಬೈರ್ ಅಹ್ಮದ್ ವಾನಿ
11. ಅದ್ನಾನ್ ಸಫಿ ದಾರ್
10. ಅಮೀರ್ ಅಹ್ಮದ್ ದಾರ್
9. ಶಾಹಿದ್ ಅಹ್ಮದ್ ಕುಟೆ
8. ನಾಸೀರ್ ಅಹ್ಮದ್ ವಾನಿ
7. ಆಸಿಫ್ ಅಹ್ಮದ್ ಕಾಂಡಯ್
6. ಯಾವರ್ ಅಹ್ಮದ್ ಭಟ್
5. ಅಮೀರ್ ನಜೀರ್ ವಾನಿ
4. ಹರೀಶ್ ನಜೀರ್
3. ಭಯೋತ್ಪಾದಕ ಎಹ್ಸಾನ್ ಅಹ್ಮದ್ ಶೇಖ್
2. ಭಯೋತ್ಪಾದಕ ಆಸಿಫ್ ಅಹ್ಮದ್ ಶೇಖ್
1. ಆದಿಲ್ ರೆಹಮಾನ್ ಡೆಂಟು