ಬೆಂಗಳೂರು: ಪೆಹಲ್ಗಾಮ್ ದಾಳಿ ಹಿನ್ನೆಲೆಯಲ್ಲಿ ಮೂರ‌್ನಾಲ್ಕು ದಿನದಲ್ಲಿ ಲೋಕಸಭೆ ಅಧಿವೇಶನ ಕರೆಯಬೇಕು(Pahalgam attack; Lok Sabha session should be called) . ಪಾಕಿಸ್ತಾನ ಒಂದು ಟೆರೆರಿಸ್ಟ್ ಸ್ಟೇಟ್ ಎಂದು ಘೋಷಣೆ ಮಾಡಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಾಯ ಮಾಡಬೇಕು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ(Basavaraj Rayareddy) ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ದೇಶದ ಆಂತರಿಕ ಭದ್ರತೆಯ ಪ್ರಶ್ನೆ ಇದು. ಪ್ರಧಾನಿ ನೀರು ನಿಲ್ಲಿಸಿದ್ದನ್ನು ಸ್ವಾಗತ ಮಾಡುತ್ತೇನೆ. ಮೊದಲು ಪ್ರಧಾನಿ ಕಾಶ್ಮೀರಕ್ಕೆ ಹೋಗಬೇಕು ಎಂದರು.
ಉಗ್ರರು ಮೃಗಗಳಂತೆ ತಮ್ಮ ತೆವಲಿಗೆ 26 ಜನರನ್ನು ಬಲಿ ಪಡೆದಿದ್ದಾರೆ. ಈ ವಿಚಾರದಲ್ಲಿ ಟೀಕೆ-ಟಿಪ್ಪಣಿ ಆಗಬಾರದು. ನಮ್ಮ ದೇಶದಲ್ಲಿ ಜಾತಿ, ಧರ್ಮದ ಮೇಲೆ ಹೋರಾಟ ಮಾಡಬಾರದು ಎಂದು ತಿಳಿಸಿದರು. ಬಿಜೆಪಿಯವರು ಸಿಎಂ ಮೇಲೆ ಹಗುರವಾಗಿ ಟೀಕೆ ಮಾಡುತ್ತಿದ್ದಾರೆ. ತಿಳಿಯದೇ ಏನು ಬೇಕಾದರೂ ಮಾತನಾಡಬಾರದು. ಸಿಎಂ ಮೊದಲು ಸೆಕ್ಯುರಿಟಿ ಟೈಟ್ ಮಾಡಿ ಅಂದಿದ್ದು ಸರಿಯಾಗಿಯೇ ಇದೆ.
ಆ ಜಾಗದಲ್ಲಿ ಪೊಲೀಸರು, ಸೈನಿಕರು ಇರಲಿಲ್ಲ. ಇಂಟೆಲಿಜೆನ್ಸ್ ಫೆಲ್ಯುರ್ ಎಂದು ಕೇಂದ್ರವೇ ಒಪ್ಪಿಕೊಂಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಪ್ರತಿಪಕ್ಷ ನಾಯಕ ಅಶೋಕ್ ಅವರು ಸಿಎಂ ವಿರುದ್ಧ ನೀಡಿರುವ ಹೇಳಿಕೆ ವಾಪಸ್ಸು ಪಡೆಯಬೇಕು ಎಂದು ಆಗ್ರಹಿಸಿದರು.
ಸಿಎಂ ಯುದ್ಧ ಬೇಡ ಎಂದಿಲ್ಲ, ಅನಿವಾರ್ಯ ಇದ್ದರೆ ಮಾಡಿ ಅಂದಿದ್ದಾರೆ. ಇದನ್ನು ತಿರುಚಲಾಗಿದೆ ಎಂದರು. 180 ಕ್ಕೂ ಹೆಚ್ಚು ಜನ ಅಲ್ಲಿ ಇದ್ದರು. ವಿಶೇಷ ವಿಮಾನ ಕಳುಹಿಸಿ ವಾಪಸ್ ಕರೆಸಿಕೊಂಡಿದ್ದಾರೆ ಎಂದರು.
ದೇಶದ ಆಂತರಿಕ ಭದ್ರತೆಯ ಪ್ರಶ್ನೆ ಇದು. ಪ್ರಧಾನಿ ನೀರು ನಿಲ್ಲಿಸಿದ್ದನ್ನು ಸ್ವಾಗತ ಮಾಡುತ್ತೇನೆ. ಮೊದಲು ಪ್ರಧಾನಿ ಕಾಶ್ಮೀರಕ್ಕೆ ಹೋಗಬೇಕು. ಹಿಂದೆ ಹೀಗಾದಾಗ ಮನಮೋಹನ್ ಸಿಂಗ್ ಕಾಶ್ಮೀರಕ್ಕೆ ಹೋಗಿ ಸಾಂತ್ವನ ಹೇಳಿದ್ದರು ಎಂದು ನೆನಪಿಸಿದರು.
ಉಗ್ರರ ದಾಳಿ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂದೇಶ ತಲುಪಬೇಕು. ಎಲ್ಲರೂ ಒಂದಾಗಿ ನಿರ್ಣಯ ಅಂಗೀಕರಿಸಬೇಕು. ಪಾಕಿಸ್ತಾನ ಒಂದು ಟೆರೆರಿಸ್ಟ್ ಸ್ಟೇಟ್ ಎಂದು ಘೋಷಣೆ ಮಾಡಲು ಒತ್ತಾಯ ಮಾಡಬೇಕು ಎಂದರು.
ಈಗಾಗಲೇ ಅಮೇರಿಕ, ರಷ್ಯಾ, ಇಸ್ರೇಲ್ ಸೇರಿದಂತೆ ಹಲವು ರಾಷ್ಟ್ರಗಳು ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿವೆ. ಯುದ್ದ ನಾಳೆಯಿಂದಲೇ ಶುರುಮಾಡಿ ಯಾರು ಬೇಡ ಅಂದಿದ್ದಾರೆ? ಯುದ್ಧ ಆರಂಭಿಸಿದರೆ ಸುಮಾರು 12 ಲಕ್ಷ ಕೋಟಿಗಿಂತ ಹೆಚ್ಚು ಹಣ ಬೇಕಾಗುತ್ತದೆ. ಇದಕ್ಕೆ ಲೋಕಸಭೆಯಲ್ಲಿ ಅನುಮೋದನೆ ತೆಗೆದುಕೊಳ್ಳಿ. ಸೈನ್ಯ ನೇಮಕಾತಿಯಲ್ಲಿ 1.45 ಲಕ್ಷ ಹುದ್ದೆ ಖಾಲಿ ಇದೆ. ಎಲ್ಲವನ್ನೂ ನೇಮಕ ಮಾಡಿಕೊಳ್ಳಿ ಎಂದು ಹೇಳಿದರು.
ಸಿಂಧು ನದಿ ನೀರು ನಿಲುಗಡೆ ಮಾಡುವ ನಿರ್ಧಾರ ಸರಿ. ಆದರೆ, ನೀರು ನಿಲ್ಲಿಸಲು ಆಗುವುದಿಲ್ಲ. ಈ ವಿಚಾರ ಪ್ರಚಾರಕ್ಕೆ ಬಳಕೆ ಆಗಬಾರದು. ಇದಕ್ಕೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಳ್ಳಿ ಎಂದರು.
ನಮ್ಮಲ್ಲಿ 180 ನ್ಯೂಕ್ಲಿಯರ್ ಬಾಂಬ್ ಇದೆ. ಇದು ಉಪಯೋಗ ಆಗದಂತೆ ನೋಡಿಕೊಳ್ಳಬೇಕು. 1972 ರಲ್ಲಿ ಇಂದಿರಾಗಾಂಧಿಯವರು ಪಾಕಿಸ್ತಾನದ ಸೈನಿಕರನ್ನು ಹೊಡೆದು ಓಡಿಸಿದ್ದರು. ಅದೇ ರೀತಿ ಮೋದಿಯವರು ಮಾಡಬೇಕು ಎಂದು ತಿಳಿಸಿದರು.