ನ್ಯೂಸ್

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮೊಗಿಲಯ್ಯ ಇನ್ನಿಲ್ಲ..Padma Shri awardee folk artist Mogilaiah passes away

Padma Shri awardee folk artist Mogilaiah passes away: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ  ಹಾಗೂ ತೆಲುಗು ಚಲನಚಿತ್ರ ಬಾಲಗಂನಲ್ಲಿ ( Balagam ) ತಮ್ಮ ಹಾಡಿನ ಮೂಲಕ ಖ್ಯಾತಿ ಗಳಿಸಿದ ಮೊಗಿಲಯ್ಯನವರು ಮೂತ್ರಪಿಂಡದ ಕಾಯಿಲೆಯಿಂದ ನಿಧನರಾದರು.

ಕಿನ್ನೇರ ಮೊಗಿಲಯ್ಯ ಎಂದೂ ಕರೆಯಲ್ಪಡುವ ಮೊಗಿಲಯ್ಯ ಅವರು ವಾರಂಗಲ್‌ನ ಖಾಸಗಿ ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಗುರುವಾರ ಮುಂಜಾನೆ ಅವರು ಕೊನೆಯುಸಿರೆಳೆದಿದ್ದಾರೆ. 'ಬಳಗಂ' ಖ್ಯಾತಿಯ ಮೊಗಿಲಯ್ಯ ಮೂತ್ರಪಿಂಡ ವೈಫಲ್ಯದಿಂದ ಡಯಾಲಿಸಿಸ್‌ಗೆ ಒಳಗಾಗಿದ್ದರು . ಒಂದು ವರ್ಷದಿಂದ ಹಾಸಿಗೆ ಹಿಡಿದಿದ್ದಾರೆ. ಇಂದು ಮುಂಜಾನೆ ಅವರು ಕೊನೆಯುಸಿರೆಳೆದಿದ್ದಾರೆ. ಮೊಗಿಲಯ್ಯ ಅವರ ನಿಧನಕ್ಕೆ, ಸಹ ನಟರು ಹಾಗೂ ಗ್ರಾಮಸ್ಥರು ಸಂತಾಪ ಸೂಚಿಸಿದ್ದಾರೆ.

ಪದ್ಮಶ್ರೀ ಪುರಸ್ಕೃತರಾದ  ಮೊಗಿಲಯ್ಯ ಅವರು ಅಪರೂಪದ ಸಂಗೀತ ವಾದ್ಯ 'ಕಿನ್ನೆರ'ಕ್ಕೆ ಮರುಜೀವ ಕೊಟ್ಟವರು. ಕಿನ್ನೆರಗೆ ರಾಷ್ಟ್ರೀಯ ಸ್ಥಾನಮಾನ ಸಿಗುವಲ್ಲಿ ಪ್ರಮುಖ ಪಾತ್ರ ವಹಿಸಿದರು.   ಪದ್ಮಶ್ರೀ ಪುರಸ್ಕೃತರಾದ ಕಿನ್ನೆರ ಮೊಗಿಲಯ್ಯ ಎಂದೇ ಖ್ಯಾತರಾದ ದರ್ಶನಂ ಮೊಗಿಲಯ್ಯ . ಮೊಗಿಲಯ್ಯ ಅವರು ಬುಡಕಟ್ಟು ಸಂಗೀತ ವಾದ್ಯಗಾರರಲ್ಲಿ ಒಬ್ಬರು. ಜನಪದ ಕಲಾವಿದ, ಗಾಯಕ 2022 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು.

ಮೊಗಿಲಯ್ಯ ವಾರಂಗಲ್ ಜಿಲ್ಲೆಯ ದುಗ್ಗೊಂಡಿ ಮಂಡಲ ಕೇಂದ್ರದ ನಿವಾಸಿಯಾಗಿದ್ದಾರೆ. ಹಾಸ್ಯನಟ ಮತ್ತು ನಿರ್ದೇಶಕ ವೇಣು ಯೆಲ್ದಂಡಿ ಅವರ ನಿರ್ದೇಶನದಲ್ಲಿ ದಿಲ್ ರಾಜು ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಬಲಗಂ ಚಿತ್ರದಲ್ಲಿ ಮೊಗಿಲಯ್ಯ ದಂಪತಿ ನಟಿಸಿದ್ದಾರೆ.

ಪದ್ಮಶ್ರೀ ಮೊಗಿಲಯ್ಯ ಬಹಳ ಒಳ್ಳೆಯ ಜನಪದ ಗಾಯಕರು. ಪವನ್ ಕಲ್ಯಾಣ್ ನಟಿಸಿರುವ ‘ಭೀಮ್ಲಾ ನಾಯಕ್’ ಸಿನಿಮಾದಲ್ಲಿ ಹಾಡೊಂದನ್ನು ಹಾಡಿದ್ದಾರೆ. ಆ ಹಾಡು ಸೂಪರ್ ಹಿಟ್ ಆಗಿದೆ. ಭೀಮ್ಲಾ ನಾಯಕ್ ಸಿನಿಮಾದ ಶೂಟಿಂಗ್ ಸಮಯದಲ್ಲಿ ಪವನ್ ಕಲ್ಯಾಣ್, ಮೊಗಿಲಯ್ಯಗೆ ಆರ್ಥಿಕ ಸಹಾಯ ಮಾಡಿದ್ದರು. ಆ ಬಳಿಕ ಅವರಿಗೆ ಪದ್ಮಶ್ರೀ ಸಹ ದೊರಕಿತು. ಆದರೆ ಈಗ ಅವರು ಜೀವನ ನಿರ್ವಹಣೆಗೆ ಕಟ್ಟಡ ಕಾರ್ಮಿಕನ ಕಾರ್ಯ ಮಾಡುತ್ತಿದ್ದರು.

ಈ ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ಮಾನವೀಯ ಸಂಬಂಧಗಳನ್ನು ವಿವರಿಸುತ್ತಾ ಹಾಡಿದ ಅವರ ‘ತೊಡುಗ ಮಾತು ಉದ್ಯ ಯಾಡಾಗ ಮಾತು’ ಹಾಡು ಜನರ ಮನ ಕದ್ದಿತ್ತು. ಆ ದೃಶ್ಯವೇ ಬಲಗಂ ಚಿತ್ರದ ಹೈಲೈಟ್. ಮೊಗಿಲಯ್ಯ ದಂಪತಿ ಈ ಮೂಲಕ ಜನಪ್ರಿಯತೆಯನ್ನು ಪಡೆದರು.

ಬಳಗಂ ಚಿತ್ರ ನಿರ್ದೇಶಕ ವೇಣು ಏಳ್ದಂಡಿ ಹಾಗೂ ಚಿತ್ರತಂಡ ಮೊಗಿಲಯ್ಯನವರ ಚಿಕಿತ್ಸಾ ವೆಚ್ಚಕ್ಕೆ ಆರ್ಥಿಕ ನೆರವು ನೀಡಿದೆ. ಹಿಂದಿನ ಬಿಆರ್ ಎಸ್ ಸರಕಾರ ಮೊಗಿಲಯ್ಯ ರೂ. 10 ಲಕ್ಷ ಆರ್ಥಿಕ ನೆರವು. ಮೊಗಿಲಯ್ಯ ದಂಪತಿಗೆ (ಬಳಗಂ ಮೊಗಿಲಯ್ಯ) ನಿವೇಶನದ ಜತೆಗೆ ಮನೆ ನಿರ್ಮಿಸಿ, ಚಿಕಿತ್ಸಾ ವೆಚ್ಚ ಭರಿಸುವುದಾಗಿ ಸಚಿವ ಪೊನ್ನಂ ಪ್ರಭಾಕರ್ ಇತ್ತೀಚೆಗೆ ಪೊನ್ನಂ ಸತ್ತಯ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಘೋಷಿಸಿದ್ದರು.