ನ್ಯೂಸ್

3.22 ಲಕ್ಷ ಜನರಿಂದ ಪಡಿತರ ಕಾರ್ಡ್‌ಗೆ ಅರ್ಜಿ

Bengaluru - Political - Shivananda Tagadur

ಬೆಂಗಳೂರು:
ರಾಜ್ಯದಲ್ಲಿ ಹೊಸದಾಗಿ ಪಡಿತರ ಚೀಟಿ ಪಡೆಯಲು 3,22,483 ಅರ್ಜಿಗಳನ್ನು ಸ್ವೀಕಾರ ಮಾಡಲಾಗಿದ್ದು, ಆದಷ್ಟು ಬೇಗ ಕ್ರಮ ವಹಿಸಲಾಗುವುದು ಎಂದು ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಮೇಲ್ಮನೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿಯ ಪ್ರತಾಪ ಸಿಂಹ ನಾಯಕ್ ಕೇಳಿದ ಪ್ರಶ್ನೆಗೆ ಉತ್ತರಿಸಿ, ಈ ಹಿಂದೆ ಚುನಾವಣೆ ಸಂದರ್ಭದಲ್ಲಿ ನೀಡಲಾಗಿದ್ದ 2.35 ಲಕ್ಷ ಕಾರ್ಡ್‌ಗಳನ್ನು ಪರಿಶೀಲನೆ ಮಾಡಲಾಗಿದ್ದು, ಅದರಲ್ಲಿ
1,73000 ಸಾವಿರ ಕಾರ್ಡಿಗೆ ದವಸ ಧಾನ್ಯ ಕೊಡುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಆರೋಗ್ಯಕ್ಕೆ ಸಂಬಂಧಿಸಿದಂತೆ ಕಾರ್ಡ್ ನೀಡಲು ಯಾವುದೇ ತಕರಾರು ಇಲ್ಲ. ಅದಕ್ಕೆ ಒಂದು ವಾರದಲ್ಲಿ ಅನುಮೋದನೆ ನೀಡ್ತೇವೆ. ಹೊಸದಾಗಿ ಬಂದಿರುವ ಅರ್ಜಿಯನ್ನ ಪರಿಷ್ಕರಣೆ ಮಾಡ್ತೀವಿ ಎಂದರು.