ನ್ಯೂಸ್

ಪಾದರಾಯನಪುರ ಗಲಭೆ ಪ್ರಕರಣದ ಪ್ರಮುಖ ಆರೋಪಿ ಇನ್ನೂ ಪತ್ತೆಯಿಲ್ಲ..ಕರೊನಾ ಭಯದ ನಡುವೆಯೂ ಪೊಲೀಸರಿಂದ ತೀವ್ರ ಶೋಧ...

ಬೆಂಗಳೂರು: ಪಾದರಾಯನಪುರ ಗಲಭೆ ಆರೋಪಿಗಳಲ್ಲಿ ಐವರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಆರೋಪಿಗಳಿಗೆ ಕರೊನಾ ತಗುಲಿರುವ ಬೆನ್ನಲ್ಲೇ ಅಂದು ಕಾರ್ಯಾಚರಣೆ ನಡೆಸಿದ ಪೊಲೀಸರಲ್ಲೂ ಆತಂಕ ಶುರುವಾಗಿದೆ.

ಪಾದರಾಯನಪುರ ಆರೋಪಿಗಳ ಬಂಧನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಸುಮಾರು 186 ಪೊಲೀಸರಿಗೆ ಕ್ವಾರಂಟೈನ್​ ಮಾಡಲಾಗಿದೆ. ಇಷ್ಟೆಲ್ಲದರ ಮಧ್ಯೆ ಗಲಭೆ ಪ್ರಕರಣ ಪ್ರಮುಖ ಆರೋಪಿ ಪತ್ತೆಯಾಗದೆ ಇರುವುದು ಇನ್ನೊಂದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಕರೊನಾ ಆತಂಕದ ನಡುವೆಯೂ ಕೆಎಫ್​ಡಿ ಇರ್ಫಾನ್​ಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಇರ್ಫಾನ್​ ಜತೆಗೆ ಇನ್ನೂ ಒಂದಷ್ಟು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಟ್ಟು 126 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಇರ್ಫಾನ್​ ಮತ್ತವನ ಗ್ಯಾಂಗ್ ಮೊಬೈಲ್​ಗಳನ್ನೆಲ್ಲ ಸ್ವಿಚ್​​ ಆಫ್​ ಮಾಡಿಕೊಂಡು ನಾಪತ್ತೆಯಾಗಿದೆ. ಸ್ಥಳೀಯರಿಂದಲೂ ಅವರ ಬಗ್ಗೆ ಮಾಹಿತಿ ಸಿಗುತ್ತಿಲ್ಲ. (ದಿಗ್ವಿಜಯ ನ್ಯೂಸ್​)