ಶಿಕಾರಿಪುರದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮನೆಗೆ ಆಗಮಿಸಿದ್ದ ಕೊಪ್ಪಳದ ಶ್ರೀ ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾ ಸ್ವಾಮೀಜಿ ಅವರಿಗೆ ಸಂಸದ ಬಿ.ವೈ.ರಾಘವೇಂದ್ರ ದಂಪತಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ದಂಪತಿ ಪಾದಪೂಜೆ ಸಲ್ಲಿಸಿದರು. ಶ್ರೀ ಚನ್ನವೀರ ದೇಶೀಕೇಂದ್ರ ಸ್ವಾಮೀಜಿ ಇದ್ದರು. 
ನ್ಯೂಸ್

ಕೊಪ್ಪಳ ಗವಿಮಠದ ಶ್ರೀಗಳಿಗೆ ಪಾದಪೂಜೆ

ಶಿಕಾರಿಪುರ: ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾ ಸ್ವಾಮೀಜಿ ಭಾನುವಾರ ಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸ್ವಗೃಹಕ್ಕೆ ಭೇಟಿ ನೀಡಿದ್ದರು.

ಸಂಸದ ಬಿ.ವೈ.ರಾಘವೇಂದ್ರ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ದಂಪತಿ ಹಾಗೂ ಭಕ್ತರು ಶ್ರೀಗಳನ್ನು ಸ್ವಾಗತಿಸಿದರು. ನಂತರ ಕುಟುಂಬದ ಸದಸ್ಯರು ಗುರುಗಳ ಪಾದಪೂಜೆ ನೆರವೇರಿಸಿದರು.

ಪಾದ ಪೂಜೆ ನಂತರ ಆಶೀರ್ವದಿಸಿದ ಶ್ರೀಗಳು, ಜನಸೇವೆಗಾಗಿಯೇ ಬದುಕನ್ನು ಮುಡಿಪಾಗಿಟ್ಟು ಇಂದಿಗೂ ಸಾರ್ಥಕ್ಯದ ಪಥದಲ್ಲಿ ಸಾಗುತ್ತಿರುವವರು ಯಡಿಯೂರಪ್ಪ. ಅವರಂತೆಯೇ ಮಕ್ಕಳು ಜನಹಿತ ಕಾರ್ಯಗಳನ್ನು ಮಾಡುತ್ತಿದ್ದೀರಿ. ಸಾಮಾಜಿಕ ಕಳಕಳಿ ಇರುವ ನಾಯಕರು ಯಾವತ್ತೂ ಉತ್ಸಾಹ ಕಳೆದುಕೊಳ್ಳುವುದಿಲ್ಲ. ನಿಮ್ಮ ಜನಸೇವೆ ನಿರಂತರವಾಗಿರಲಿ. ಇದುವೇ ನಿಮಗೆ ಶ್ರೀರಕ್ಷೆಯಾಗಲಿದೆ ಎಂದು ಹಾರೈಸಿದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಕೊಪ್ಪಳದ ಗವಿಮಠದ ಶ್ರೀಗಳ ಆಗಮನದಿಂದ ಮಹದಾನಂದವಾಯಿತು. ಅವರ ಪಾದಸ್ಪರ್ಶದಿಂದ ನಾವೆಲ್ಲರೂ ಪುನೀತರಾಗಿದ್ದೇವೆ ಎಂದರು.

ತೊಗರ್ಸಿ ಪಂಚವಣ್ಣಿಗೆ ಮಠದ ಶ್ರೀ ಚನ್ನವೀರ ದೇಶೀಕೇಂದ್ರ ಸ್ವಾಮೀಜಿ, ಮೂಲೆಗದ್ದೆ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ,ಹಿರೇಮಾಗಡಿ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಇದ್ದರು.