ವಿಶ್ವ ಸುಗಮ ಸಂಗೀತ ದಿನಾಚರಣೆಯಲ್ಲಿ ಜಯಶ್ರೀ ಶ್ರೀಧರ್ ಮತ್ತು ಉಮಾ ದಿಲೀಪ್ ಅವರನ್ನು ಸನ್ಮಾನಿಸಲಾಯಿತು. ಎಸ್.ಶಾಂತಾ ಶೆಟ್ಟಿ, ದಾಕ್ಷಾಯಿಣಿ, ಶೋಭಾ ಸತೀಶ್, ಲಕ್ಷ್ಮೀ ಮಹೇಶ್, ಮಥುರಾ ನಾಗರಾಜ ಇತರರಿದ್ದರು.  
ನ್ಯೂಸ್

ಪಿ. ಕಾಳಿಂಗರಾಯರ ಸೇವೆ ಅನನ್ಯ

ಅರವಿಂದ ಅಕ್ಲಾಪುರ

ಶಿವಮೊಗ್ಗ: ಸುಗಮ ಸಂಗೀತ ಕ್ಷೇತ್ರಕ್ಕೆ ಪಿ.ಕಾಳಿಂಗ ರಾವ್ ಸಲ್ಲಿಸಿದ ಸೇವೆ ಅನನ್ಯ ಎಂದು ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್‌ನ ಅಧ್ಯಕ್ಷೆ ಎಸ್.ಶಾಂತಾ ಶೆಟ್ಟಿ ಹೇಳಿದರು.

ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್‌ನ 28ನೇ ವಾರ್ಷಿಕೋತ್ಸವ ಹಾಗೂ ವಿಶ್ವ ಸುಗಮ ಸಂಗೀತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಿ.ಕಾಳಿಂಗರಾಯರ ಹಾಡುಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ. ಅವರ ಮಾರ್ಗದರ್ಶನ ಪಡೆದಿರುವ ಸಾಕಷ್ಟು ಕಲಾವಿದರು ಇಂದು ಸುಗಮ ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.

ಸುಗಮ ಸಂಗೀತ ಕ್ಷೇತ್ರದಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿದ ಸುಗಮ ಸಂಗೀತ ಕಲಾವಿದರಾದ ಜಯಶ್ರೀ ಶ್ರೀಧರ್ ಹಾಗೂ ಉಮಾ ದಿಲೀಪ್ ಅವರನ್ನು ಸನ್ಮಾನಿಸಲಾಯಿತು. ಗಾಯಕರಾದ ಶೋಭಾ ಸತೀಶ್, ಸುಶೀಲಾ, ರಾಜಕುಮಾರ್, ದಾಕ್ಷಾಯಿಣಿ, ಲಕ್ಷ್ಮೀ ಮಹೇಶ್, ಕೆ.ಎಸ್.ಮಂಜುನಾಥ್, ಶ್ವೇತಾ ಪಾಟೀಲ್, ಮಥುರಾ ನಾಗರಾಜ್, ಲತಾ ಕೆದಿಲಾಯ, ಮಮತಾ ಇತರರಿದ್ದರು.