ಕಾಮನ್ವೆಲ್ತ್ ಗೇಮ್ಸ್: ಭಾರತದ ಸಿದ್ಧತೆಗೆ 53.09 ಕೋಟಿ ರೂ. ವೆಚ್ಚ
ನವದೆಹಲಿ: ಗುರುವಾರದಿಂದ ಗ್ಲಾಸ್ಗೋದಲ್ಲಿ ನಡೆಯಲಿರುವ ಕಾಮನ್ವೆಲ್ತ್ ಗೇಮ್ಸ್ (Glasgow Commonwealth Games) ಸಿದ್ಧತೆಗೆ 53.09 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಕ್ರೀಡಾ ಸಚಿವಾಲಯ ಸೋಮವಾರ ಮಾಹಿತಿ ನೀಡಿದೆ. ಈ ಪೈಕಿ ಅಥ್ಲೆಟಿಕ್ಸ್ ಮತ್ತು ಬಾಕ್ಸಿಂಗ್ ಕ್ರೀಡೆಗೆ ಹೆಚ್ಚಿನ ಹಣ ವ್ಯಯಿಸಲಾಗಿದೆ.
32 ಸದಸ್ಯರ ಅಥ್ಲೆಟಿಕ್ಸ್ ತಂಡದ ತರಬೇತಿಗೆ 20 ಕೋಟಿ ರೂ. ನೀಡಲಾಗಿದೆ. 14 ಬಾಕ್ಸರ್ಗಳ ತರಬೇತಿಗೆ 10 ಕೋಟಿ ರೂ. ಖರ್ಚು ಮಾಡಲಾಗಿದೆ. ಮೀರಾಬಾಯಿ ಚಾನು ಸಹಿತ 12 ವೇಟ್ಲಿಫ್ಟರ್ಗಳ ತರಬೇತಿಗೆ 7.5 ಕೋಟಿ ರೂ. ವ್ಯಯಿಸಲಾಗಿದೆ.
ಈ ಬಾರಿ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಬ್ಯಾಡ್ಮಿಂಟನ್, ಶೂಟಿಂಗ್, ಕುಸ್ತಿ, ಹಾಕಿ, ಕ್ರಿಕೆಟ್ನಂಥ ಪ್ರಮುಖ ಸ್ಪರ್ಧೆಗಳು ಇರುವುದಿಲ್ಲ. ಹೀಗಾಗಿ ಭಾರತಕ್ಕೆ ಹೆಚ್ಚಿನ ಪದಕಗಳ ನಿರೀಕ್ಷೆ ಇಲ್ಲ. ಆದರೆ ಮುಂದಿನ 2030ರ ಕಾಮನ್ವೆಲ್ತ್ ಗೇಮ್ಸ್ ಅಹಮದಾಬಾದ್ನಲ್ಲಿ ನಡೆಯಲಿರುವುದರಿಂದ ಭಾರತ ಈ ಬಾರಿ ಹೆಚ್ಚು ಆಸಕ್ತಿಯಿಂದ ಸ್ಪರ್ಧಿಸಲಿದೆ.