ನವದೆಹಲಿ: ಕೊವಿಡ್-19 ಲಾಕ್ಡೌನ್ನಿಂದಾಗಿ ಬೇರೆ ದೇಶಗಳಲ್ಲಿ ಸಿಲುಕಿ ಒದ್ದಾಡುತ್ತಿದ್ದ ಭಾರತೀಯರನ್ನು ವಂದೇ ಭಾರತ್ ಯೋಜನೆಯಡಿ, ವಿಮಾನಗಳ ಮೂಲಕ ವಾಪಸ್ ಕರತರಲಾಗಿದೆ.
ಮೇ 7ರಿಂದ ಶುರು ಮಾಡಿ ಒಟ್ಟು ನಾಲ್ಕು ಹಂತದ ಕಾರ್ಯಾಚರಣೆ ನಡೆಸಲಾಗಿದ್ದು, ಇಲ್ಲಿಯವರೆಗೆ ವಂದೇ ಭಾರತ್ ಯೋಜನೆಯಡಿ ಸುಮಾರು 8.78 ಲಕ್ಷ ಭಾರತೀಯರದನ್ನು ವಿದೇಶಗಳಿಂದ ವಾಪಸ್ ಕರೆತರಲಾಗಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.
849 ಅಂತಾರಾಷ್ಟ್ರೀಯ ವಿಮಾನಗಳು ಮತ್ತು 234 ಫೀಡರ್ ಫ್ಲೈಟ್ ಸೇರಿ ಒಟ್ಟು 1083 ವಿಮಾನಗಳ ಮೂಲಕ ಭಾರತೀಯರನ್ನು ಕರೆತರುವ ಕಾರ್ಯಾಚರಣೆ ನಡೆದಿದೆ ಎಂದು ಇಲಾಖೆ ವಕ್ತಾರ ಅನುರಾಗ್ ಶ್ರೀವಾಸ್ತವ್ ತಿಳಿಸಿದ್ದಾರೆ. ಇದನ್ನೂ ಓದಿ: ಪ್ಯಾಂಟಿನೊಳಗೆ ಹಾವು: ರಾತ್ರಿಯಿಡೀ ಕದಲದೇ ಕಳೆದ ಯುವಕ!
ಏರ್ ಇಂಡಿಯಾ, ಇಂಡಿಗೋ, ಸ್ಪೈಸ್ಜೆಟ್ ಮತ್ತು ಗೋ ಏರ್ ಸಂಸ್ಥೆಗಳ ವಿಮಾನಗಳನ್ನು ಬಳಸಿಕೊಳ್ಳಲಾಗಿದೆ. ವಂದೇ ಭಾರತ್ ಮಿಶನ್ನ 4ನೇ ಹಂತದಿಂದ 5ನೇ ಹಂತವನ್ನು ಪ್ರಾರಂಭಿಸಲಾಗಿದೆ. ಜು.29ರವರೆಗೆ 8,78,921 ಭಾರತೀಯರು ಸ್ವದೇಶಕ್ಕೆ ಮರಳಿದ್ದಾರೆ.
ನೇಪಾಳ, ಭೂತಾನ್, ಮಯನ್ಮಾರ್, ಪಾಕಿಸ್ತಾನ, ಬಾಂಗ್ಲಾದೇಶ, ಯುಎಸ್ಎ, ಕೆನಡಾ, ಯುಕೆ, ಜರ್ಮನಿ, ಫ್ರಾನ್ಸ್, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ಥೈಲ್ಯಾಂಡ್, ಚೀನಾ, ಇಸ್ರೇಲ್, ಉಕ್ರೇನ್, ಕರ್ಜಿಸ್ತಾನ್ಗಳಿಂದ ವಾಪಸ್ ಆಗಿದ್ದಾರೆ. 5ನೇ ಹಂತ ಆಗಸ್ಟ್ 1ರಿಂದ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)