ನವದೆಹಲಿ: ಕರೊನಾ ವಾರಿಯರ್ಸ್ಗೆಂದು ದೊಡ್ಡ, ದೊಡ್ಡ ಕಂಪನಿಗಳು ಚೀನಾದಿಂದ ತರಿಸಿಕೊಟ್ಟಿದ್ದ 50 ಸಾವಿರ ವೈಯಕ್ತಿಕ ರಕ್ಷಣಾ ಉಪಕರಣಗಳನ್ನು (ಪಿಪಿಇ) ವೈದ್ಯರು ತಿರಸ್ಕರಿಸಿದ್ದಾರೆ. ಇವುಗಳು ಗುಣಮಟ್ಟ ಕಳಪೆಯಾಗಿದೆ ಎಂಬ ಕಾರಣಕ್ಕಾಗಿ ತಾವು ಈ ನಿರ್ಧಾರ ಕೈಗೊಂಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಭಾರತದಲ್ಲಿನ ದೊಡ್ಡ, ದೊಡ್ಡ ಕಂಪನಿಗಳು ಕರೊನಾ ವಾರಿಯರ್ಸ್ಗಾಗಿ ಕೇಂದ್ರ ಸರ್ಕಾರಕ್ಕೆ ಒಟ್ಟು 1.7 ಲಕ್ಷ ಪಿಪಿಇಗಳನ್ನು ದೇಣಿಗೆಯಾಗಿ ಕೊಟ್ಟಿದ್ದರು. ಏಪ್ರಿಲ್ 5ರಂದು ಇವು ಭಾರತವನ್ನು ತಲುಪಿದ್ದವು.
ಇವುಗಳನ್ನು ಗ್ವಾಲಿಯರ್ನಲ್ಲಿರುವ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ ಪ್ರಯೋಗಾಲಯದಲ್ಲಿ (ಡಿಆರ್ಡಿಒ) ಪರಿಶೀಲಿಸಿದಾಗ
ಒಟ್ಟು 50 ಸಾವಿರ ಪಿಪಿಇಗಳ ಗುಣಮಟ್ಟ ಕಳಪೆಯಾಗಿರುವುದು ಖಚಿತಪಟ್ಟಿತು ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕೇಂದ್ರ ಸರ್ಕಾರ ಸಿಇ/ಎಫ್ಡಿಎ ಅನುಮೋದಿಸಿ, ಮುದ್ರೆಯೊತ್ತಿರುವ ಪಿಪಿಇಗಳನ್ನೇ ತರಿಸುತ್ತಿರುವುದಾಗಿ ಕೇಂದ್ರ ಸರ್ಕಾರದ ಅಧಿಕಾರಿಗಳು ಪ್ರತಿಪಾದಿಸಿದ್ದಾರೆ. ಇದೀಗ ಪರೀಕ್ಷೆಗೆ ಒಳಪಡಿಸಿರುವ ದಾಸ್ತಾನು ದೇಣಿಗೆ ರೂಪದಲ್ಲಿ ಚೀನಾದಿಂದ ಬಂದಿದ್ದರು ಎಂದು ಹೇಳಲಾಗಿದೆ.