OTT Films: ಪ್ರತಿವಾರ ಚಿತ್ರಮಂದಿರಗಳಲ್ಲಿ ತೆರೆಕಾಣುವ ಭಾರತೀಯ ಚಿತ್ರೋದ್ಯಮದ ಹಾಗೂ ಹಾಲಿವುಡ್ ಸಿನಿಮಾಗಳ ಪೈಕಿ ಕೆಲವೇ ಕೆಲವು ಸೂಪರ್ಹಿಟ್ ಸಾಲಿಗೆ ಸೇರಿದರೆ, ಬಹುತೇಕ ಚಿತ್ರಗಳು ಸೋಲಿನ ಹಾದಿ ಹಿಡಿಯುತ್ತವೆ. ಥಿಯೇಟರ್ಗಳಲ್ಲಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯದ ಒಂದಷ್ಟು ಸಿನಿಮಾಗಳು ಜಾದೂವಿನಂತೆ ಒಟಿಟಿಯಲ್ಲಿ ಮಿಂಚುವುದು ಆಶ್ಚರ್ಯವೇ ನಿಜ. ಆಯಾ ಒಟಿಟಿ ಪ್ಲಾಟ್ಫಾರ್ಮ್ಗಳಲ್ಲಿ ರಿಲೀಸ್ ಆಗುವ ಚಿತ್ರಗಳಿಗೆ ಕಾತರದಿಂದ ಕಾಯುವ ಸಿನಿಪ್ರಿಯರಿಗೆ ಈ ವಾರವು ಮನರಂಜನೆ ಖಚಿತವಾಗಿದೆ.
ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಒಟಿಟಿಗೆ ಎಂಟ್ರಿಕೊಟ್ಟಿದ್ದು, ಯಾವೆಲ್ಲ ಸಿನಿಮಾಗಳು ರಿಲೀಸ್ ಆಗಿವೆ? ಯಾವ ನಟ ಹಾಗೂ ಭಾಷೆಯ ಚಿತ್ರಗಳನ್ನು ನಾವು ನೋಡಬಹುದು? ಎಂಬುದರ ವಿವರ ಈ ಕೆಳಕಂಡಂತಿದೆ ಗಮನಿಸಿ.
ಈ ವಾರ ತೆರೆಕಂಡ ಚಿತ್ರಗಳಿವು (ಫೆ.09-15 ರವರೆಗೆ)
1. ಕೊಹ್ರಾ ಸೀಸನ್ 2 (ಹಿಂದಿ)
2. ಲವ್ ಇಸ್ ಬ್ಲೈಂಡ್ ಸೀಸನ್ 10
3. ದಿ ಕಾಂಜುರಿಂಗ್: ಲಾಸ್ಟ್ ರೈಟ್ಸ್ (ಇಂಗ್ಲಿಷ್)
ಒಟಿಟಿ: ಜಿಯೋ ಹಾಟ್ಸ್ಟಾರ್
6. ತಲೈವರ್ ತಂಬಿ ತಲೈಮಯೈಲ್ (ತಮಿಳು)
7. ದಿ ಮ್ಯೂಸಿಯಂ ಆಫ್ ಇನ್ನೋಸೆನ್ಸ್ (ಇಂಗ್ಲಿಷ್)