ಲಾಸ್ ಏಂಜಲೀಸ್: ದಕ್ಷಿಣ ಕೊರಿಯನ್ ಸಿನಿಮಾ ಪಾರಸೈಟ್ ಚಿತ್ರಕ್ಕೆ ಪ್ರತಿಷ್ಠಿತ ಆಸ್ಕರ್ ಮೂರು ಪ್ರಶಸ್ತಿ ಸಂದಿದ್ದು ಇತಿಹಾಸವನ್ನೇ ಸೃಷ್ಟಿಸಿದೆ. ಈವರೆಗೆ ಇಂಗ್ಲಿಷೇತರ ಚಿತ್ರಗಳಿಗೆ ಆಸ್ಕರ್ ಒಲಿದಿರಲಿಲ್ಲ. ಆದರೆ ಈಗ ದಕ್ಷಿಣ ಕೊರಿಯಾದ ಸಿನಿಮಾಕ್ಕೆ ಆಸ್ಕರ್ ಸಂದಿದೆ.
ಪಾರಸೈಟ್ ಚಿತ್ರದ ನಿರ್ದೇಶಕ ಬೊಂಗ್ ಜೂನ್ ಹೊ ಅವರಿಗೂ ಅತ್ಯುತ್ತಮ ಚಿತ್ರ ನಿರ್ದೇಶಕ ಪ್ರಶಸ್ತಿ ಸಂದಿದೆ. ಇದರ ಜತೆಗೆ ಇನ್ನು ಎರಡು ಪ್ರಶಸ್ತಿಗಳು ಪಾರಸೈಟ್ ಚಿತ್ರದ ಮುಡಿಗೇರಿವೆ. ಅತ್ಯುತ್ತಮ ಮೂಲ ಚಿತ್ರಕಥೆ ಮತ್ತು ಅತ್ಯುತ್ತಮ ಅಂತಾರಾಷ್ಟ್ರೀಯ ಫೀಚರ್ ಸಿನಿಮಾ ಪ್ರಶಸ್ತಿಯ ಹೆಗ್ಗಳಿಕೆ ಪಾರಸೈಟ್ನದ್ದು.
ಜೊವಾಕ್ವಿನ್ ಫೀನಿಕ್ಸ್ ಜೋಕರ್ ಸಿನಿಮಾದ ನಟನೆಗಾಗಿ ಉತ್ತಮ ನಟ ಪ್ರಶಸ್ತಿ ಪಡೆದುಕೊಂಡರು. ಜೂನಿ ಚಿತ್ರಕ್ಕಾಗಿ ರೆನೀ ಜೆಲ್ವೆಗರ್ ಅತ್ಯುತ್ತಮ ನಟಿ ಆಸ್ಕರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಆಸ್ಕರ್ ಪ್ರಶಸ್ತಿ ಪುರಸ್ಕೃತರ ಅಂತಿಮ ಪಟ್ಟಿ ಇದು...
ಅತ್ಯುತ್ತಮ ಚಿತ್ರ: ಪಾರಸೈಟ್
ಅತ್ಯುತ್ತಮ ನಟಿ (ಮುಖ್ಯಪಾತ್ರ): ರೆನೀ ಜೆಲ್ವೆಗರ್, ಚಿತ್ರ: ಜೂನಿ
ಅತ್ಯುತ್ತಮ ನಟ (ಮುಖ್ಯಪಾತ್ರ): ಜೊವಾಕ್ವಿನ್ ಫೀನಿಕ್ಸ್, ಚಿತ್ರ: ಜೋಕರ್
ಅತ್ಯುತ್ತಮ ನಿರ್ದೇಶಕ: ಬೊಂಗ್ ಜೂನ್ ಹೊ, ಚಿತ್ರ: ಪಾರಸೈಟ್
ಅತ್ಯುತ್ತಮ ನಟ (ಪೋಷಕ ಪಾತ್ರ): ಬ್ರಾಡ್ ಫಿಟ್, ಚಿತ್ರ: ಒನ್ಸ್ ಅಪಾನ್ ಎ ಟೈಮ್ ಇನ್ ಹಾಲಿವುಡ್
ಅತ್ಯುತ್ತಮ ನಟಿ (ಪೋಷಕ ಪಾತ್ರ): ಲೌರಾ ಡೆರ್ನ್, ಚಿತ್ರ; ಮ್ಯಾರೇಜ್ ಸ್ಟೋರಿ
ಅತ್ಯುತ್ತಮ ಅಂತಾರಾಷ್ಟ್ರೀಯ ಫೀಚರ್ ಸಿನಿಮಾ: ಪಾರಾಸೈಟ್ (ದಕ್ಷಿಣ ಕೋರಿಯನ್)
ಅತ್ಯುತ್ತಮ ಚಿತ್ರಕಥೆ: ಜೊಜೊ ರ‍್ಯಾಬಿಟ್
ಅತ್ಯುತ್ತಮ ಚಿತ್ರಕತೆ: ಪಾರಸೈಟ್
ಅತ್ಯುತ್ತಮ ಆನಿಮೇಟೆಡ್ ಚಲನಚಿತ್ರ: ಟಾಯ್ ಸ್ಟೋರಿ-4
ಅತ್ಯುತ್ತಮ ಸಾಕ್ಷ್ಯಚಿತ್ರ: ಅಮೆರಿಕನ್ ಫ್ಯಾಕ್ಟರಿ
ಅತ್ಯುತ್ತಮ ಸಂಗೀತ ಸಂಯೋಜನೆ: 1917
(ಏಜೆನ್ಸೀಸ್)