ರಣಜೀತ್‌ಪುರದ ಬಳಿ ನಡೆಸುತ್ತಿರುವ ದೇವದಾರಿ ಮೈನ್ಸ್ ಕಂದಾಯ ಮತ್ತು ಅರಣ್ಯ ಇಲಾಖೆಯ ಜಂಟಿ ಸರ್ವೇ ಕಾರ್ಯಕ್ಕೆ ಜನಸಂಗ್ರಾಮ ಪರಿಷತ್, ರೈತ ಸಂಘ, ಕರ್ನಾಟಕ ರಾಷ್ಟ್ರ ಸಮಿತಿಗಳಿಂದ ಶುಕ್ರವಾರ ವಿರೋಧ ವ್ಯಕ್ತಪಡಿಸಲಾಯಿತು. ಅರಣ್ಯ ಇಲಾಖೆ ಡಿಆರ್‌ಎಫ್‌ಒ ಗುರುಸ್ವಾಮಿ, ಕೆಐಒಸಿಎಲ್ ಕಂಪನಿಯ ಮ್ಯಾನೇಜರ್ ವಿಶ್ವಜೀತ್, ಸಂಘಟನೆ ಪದಾಧಿಕಾರಿಗಳಾದ ಶ್ರೀಶೈಲ ಆಲದಳ್ಳಿ, ಎಂ.ಎಲ್.ಕೆ.ನಾಯ್ಡು, ಟಿ.ಕೆ.ಮಂಜುನಾಥ್, ಜಿ.ಕೆ.ನಾಗರಾಜ ಇತರರಿದ್ದರು. 
ನ್ಯೂಸ್

ಸರ್ವೇಗೆ ಸಂಘಟನೆಗಳ ವಿರೋಧ

ಗಾಯತ್ರಿ ಮಾಲಿಪಾಟೀಲ್

ಸಂಡೂರು: ತಾಲೂಕಿನ ರಣಜೀತ್‌ಪುರದ ದೇವದಾರಿ ಮೈನ್ಸ್‌ನಲ್ಲಿ ಒಂದು ಲಕ್ಷ ಮರಗಳನ್ನು ಕಡಿದು ಗಣಿಗಾರಿಕೆ ಆರಂಭಿಸಲು ಸಿದ್ಧತೆ ಮತ್ತು 20 ಲಕ್ಷ ಟನ್ ಕಬ್ಬಿಣದ ಅದಿರು ಸಾಗಿಸಲು ರಸ್ತೆ ನಿರ್ಮಾಣಕ್ಕೆ ಅರಣ್ಯ ಹಾಗೂ ಕಂದಾಯ ಇಲಾಖೆಯ ಜಂಟಿ ಸರ್ವೇ ಕಾರ್ಯಕ್ಕೆ ಜನಸಂಗ್ರಾಮ ಪರಿಷತ್, ರೈತ ಸಂಘ ಹಾಗೂ ಕರ್ನಾಟಕ ರಾಷ್ಟ್ರ ಸಮಿತಿ ಕಾರ್ಯಕರ್ತರು ಶುಕ್ರವಾರ ವಿರೋಧ ವ್ಯಕ್ತಪಡಿಸಿದರು.

ಈ ವೇಳೆ ಅಧಿಕಾರಿಗಳು ಮತ್ತು ಸಂಘಟನೆಗಳ ನಡುವೆ ವಾಗ್ವಾದ ನಡೆಯಿತು. ಗ್ರಾಪಂ ಒಪ್ಪಿಗೆ ಪತ್ರ ಕೇಳುತ್ತಿದ್ದಂತೆ ಮತ್ತು ಸರ್ವೇ ಇಲಾಖೆ ಡಿ-ಗ್ರೂಪ್ ನೌಕರ ವೆಂಕಟೇಶ್ ಅವರ ಗುರುತಿನ ಚೀಟಿ ಕೇಳಿದ್ದಕ್ಕೆ ಕೆಐಒಸಿಎಲ್ ಅಧಿಕಾರಿಗಳು ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸ್ ತೆರಳಿದರು.

ಅರಣ್ಯ ಇಲಾಖೆ ಡಿಆರ್‌ಎಫ್‌ಒ ಗುರುಸ್ವಾಮಿ, ಕೆಐಒಸಿಎಲ್ ಕಂಪನಿಯ ಮ್ಯಾನೇಜರ್ ವಿಶ್ವಜೀತ್, ಸಿಬ್ಬಂದಿ ಕೊಟ್ರೇಶ್, ಸುರೇಶ, ನಾರಾಯಣ, ಸರ್ವೇ ಇಲಾಖೆ ಡಿ-ಗ್ರೂಪ್ ನೌಕರ ವೆಂಕಟೇಶ್ ಇತರರಿದ್ದರು.

ಸಂಘಟನೆಗಳ ಪರವಾಗಿ ಹನುಮಂತಪ್ಪ, ಕಾಡಪ್ಪ, ಮಂಜುನಾಥ, ಅಚ್ಯುತ್, ಮೌನೇಶ, ಶ್ರೀಶೈಲ ಆಲದಳ್ಳಿ, ಎಂ.ಎಲ್.ಕೆ.ನಾಯ್ಡು, ಟಿ.ಕೆ.ಮಂಜುನಾಥ್, ಜಿ.ಕೆ.ನಾಗರಾಜ, ಈರಣ್ಣ ಮೂಲೆಮನಿ, ಗೌಳಿ ಮಂಜುನಾಥ್, ನಾಗರಾಜ್ ಇತರರಿದ್ದರು.