ಬೆಂಗಳೂರು: ಕರ್ನಾಟಕ ಪ್ಲಾಟ್ ಫಾಮ್೯ ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ)ವಿಧೇಯಕ-2025 ಜಾರಿಗೆ ಸರ್ಕಾರ ಸುಗ್ರೀವಾಜ್ಞೆ(Ordinance for social security of gig workers) ಹೊರಡಿಸಿದೆ.
ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಗಿಗ್ ಕಾರ್ಮಿಕರ ಕಲ್ಯಾಣ ಕುರಿತು ಧ್ವನಿ ಎತ್ತಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್, ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತಿತರರ ಸಚಿವರು ಕೂಡ ಇತ್ತೀಚೆಗೆ ದೆಹಲಿಯಲ್ಲಿ ರಾಹುಲ್ ಗಾಂಧಿ ಭೇಟಿ ಸಂದರ್ಭದಲ್ಲಿ ಗಿಗ್ ಕಾರ್ಮಿಕ ಕಲ್ಯಾಣ ಮಂಡಳಿ ಸ್ಥಾಪಿಸುವ ಕುರಿತು ಚರ್ಚಿಸಿದ್ದರು.
ಈಗ ಗಿಗ್ ಕಾರ್ಮಿಕರ ಸಾಮಾಜಿ ಭದ್ರತೆ ಹಾಗೂ ಕಲ್ಯಾಣಕ್ಕಾಗಿ ಸುಗ್ರೀವಾಜ್ಞೆ ಜಾರಿಗೊಳಿಸಿದೆ.
ಸಿಎಂ ಸಿದ್ದಾರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಕುರಿತು ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಯಿತು. ಸಚಿವ ಸಂಪುಟ ಸಭೆ ಬಳಿಕ ಕಾನೂನು ಸಚಿವ ಎಚ್.ಕೆ.ಪಾಟೀಲ ಸರ್ಕಾರದ ನಿರ್ಧಾರವನ್ನು ಪ್ರಕಟಿಸಿದರು.
ಪ್ಲಾಟ್ ಫಾಮ್೯ ಆಧಾರಿತ ಸೇವೆಗಳಾದ ಸ್ವಿಗ್ಗಿ, ಜೊಮ್ಯಾಟೋಗಳಲ್ಲಿ ುಡ್ ಡಿಲೇವಾರಿ ಮಾಡುವವರು, ರೈಡ್ ಶೇರಿಂಗ್ ಸೇವೆಗಳಾದ ಓಲಾ, ಉಬರ್ ಮತ್ತು ನಮ್ಮ ಯಾತ್ರಿ ಇತ್ಯಾದಿ ಅಪ್ಲಿಕೇಶನ್ ಆಧಾರಿತ ಚಾಲಕರು ಹಾಗೂ ಇ-ಕಾಮರ್ಸ್ ಸಂಸ್ಥೆಗಳಾದ ಅಮೆಜಾನ್, ಪ್ಲಿಪ್ ಕಾರ್ಟ್, ಬಿಗ್ ಬ್ಯಾಸ್ಕೆಟ್ ಇವೇ ಮುಂದಾದ ಪೂರ್ಣಕಾಲಿಕ, ಅರೆಕಾಲಿಕ
ಡೆಲಿವರಿ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು, ಅಸಂಘಟಿತ ಕಾರ್ಮಿಕರಿಗೆ ಅನುಕೂಲ.
1. ಗಿಗ್ ಕಾರ್ಮಿಕರು ಗುಣಮಟ್ಟದ ಜೀವನ ಮತ್ತು ಕೆಲಸದ ವಾತಾವರಣ
ನಿರ್ಮಾಣ, ಉದ್ಯೋಗ, ಸಾಮಾಜಿಕ, ಆರ್ಥಿಕ ಭದ್ರತೆ ಒದಗಿಸುವುದು.
2. ಗಿಕ್ ಕಾರ್ಮಿಕರು ಅಪಘಾತದಿಂದ ಮರಣ/ಸಂಪೂರ್ಣ ಶಾಶ್ವತ ದುರ್ಬಲತೆ ಹೊಂದಿದಲ್ಲಿ ಅವರು ಹಾಗೂ ಅವರ ಅವಲಂಬಿತರಿಗೆ ಸಾಮಾಜಿಕ ಭದ್ರತೆ ಒದಗಿಸುವುದು.
3. ಸಾಮಾಜಿಕ ಭದ್ರತಾ ಸೌಲಭ್ಯಗಳಾದ ಅಪಘಾತ ಪರಿಹಾರ, ನೈಸರ್ಗಿಕ ಮರಣ ಪರಿಹಾರ, ಅಂತ್ಯ ಸಂಸ್ಕಾರ ವೆಚ್ಚ, ವಿವಾಹ ಭತ್ಯೆ, ಹೆರಿಗೆ ಭತ್ಯೆ, ಮಕ್ಕಳಿಗೆ ಶೈಕ್ಷಣಿಕ ಸಹಾಯಧನ, ಭವಿಷ್ಯ ನಿಧಿ, ವಸತಿ ಸೌಲಭ್ಯ, ಕೌಶಲಾಭಿವೃದ್ಧಿ ಹಾಗೂ ವೃದ್ಧಾಪ್ಯ ನೆರವು ಇತ್ಯಾದಿ ಸೌಲಭ್ಯಗಳನ್ನು ಹಂತ ಹಂತವಾಗಿ ಒದಗಿಸುವುದು.
4. ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಅವಶ್ಯವಿರುವ ನಿಧಿ ಸಂಗ್ರಹಣೆಗೆ ಸಂಬಂಧಿಸಿದಂತೆ ಅಗ್ರಿಗೇಟರ್ ಅಥವಾ ಪ್ಲಾಟ್ ಾರ್ಮ್ ಆಧಾರಿತ ಕಾರ್ಮಿಕರಿಗೆ ಪಾವತಿಸುವ ಪ್ರತಿ ವಹಿವಾಟಿನ ಮೇಲೆ ಶೇ.1 ರಷ್ಟು ಕಡಿಮೆ ಇಲ್ಲದಂತೆ ಆದರೆ, ಶೇ.2 ಮೀರದಂತೆ ಸುಂಕ ವಿಧಿಸಿ ಸಂಗ್ರಹಿಸುವ ಉದ್ದೇಶ
ಹೊಂದಲಾಗಿದೆ.
5. ನಿಧಿ ಸಂಗ್ರಹಣೆ, ನಿರ್ವಹಣೆ ಹಾಗೂ ಲಾನುಭವಿಗಳಿಗೆ ಮತ್ತು ಅವರ ಅವಲಂಬಿತರಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳ ಕರ್ನಾಟಕ ಪ್ಲಾರ್ಟ್ ಫಾಮ್೯ ಬೇಸ್ಡ್ ಗಿಗ್ ವರ್ಕರ್ಸ್ ವೆಲ್ಫೇರ್ ಬೋರ್ಡ್ ರಚಿಸಲು ಉದ್ದೇಶಿಸಲಾಗಿದೆ.
6. ಗಿಗ್ ಕಾರ್ಮಿಕರ ಸೇವೆ ಬಳಸಿಕೊಂಡು ಲಾಭ ಮಾಡಿಕೊಳ್ಳುತ್ತಿರುವ ಅಗ್ರಿಗೇಟರ್ಸ್‌ಗಳು ಸಾಮಾಜಿಕ ಜವಾಬ್ದಾರಿ ಹೊರ ಬೇಕಾಗುತ್ತದೆ. ಮತ್ತು ಗಿಕ್ ಕಾರ್ಮಿಕರ ಕನಿಷ್ಟ
ಸಾಮಾಜಿಕ ಭದ್ರತಾ ಸೌಲಭ್ಯ ನೀಡುವುದು ಅವರ ಕರ್ತವ್ಯವಾಗಿದೆ ಎಂದು ವಿಧೇಯಲದಲ್‌ಇ ಸ್ಪಷ್ಟಪಡಿಸಲಾಗಿದೆ.
7. ಅಗ್ರಿಗೇಟರ್ಸ್‌ಗಳು ವಹಿವಾಟಿನಿಂದ ಬರುವ ಆದಾಯದ ಕನಿಷ್ಟ ಶೇ.1 ಗರಿಷ್ಟ ಶೇ.2 ರವರೆಗೆ ವೆಲ್‌ೇರ್ ಫೀ ಅನ್ನು ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿಗೆ ಪಾವತಿಸುವುದು ಕಾಯ್ದೆಯ ಉದ್ದೇಶವಾಗಿದೆ.
8. ವೆಲ್‌ೇರ್ ಫೀ ಬಳಸಿಕೊಂಡು ಮಂಡಳಿಯು ಗಿಗ್ ಕಾರ್ಮಿಕರಿಗೆ ಸೂಕ್ತ ಸಾಮಾಜಿಕ ಭದ್ರತಾ ಯೋಜನೆ ರೂಪಿಸಿ ಜಾರಿ ಮಾಡುತ್ತದೆ.
ಗಿಗ್ ಕಾರ್ಮಿಕರ ಸಂಖ್ಯೆಗೆ ನಿಖರ ದತ್ತಾಂಶವಿಲ್ಲ. ಆದರೆ ನೀತಿ ಆಯೋಗ 2022ರ ವರದಿ ಅನ್ವಯ ಗಿಗ್ ಕಾರ್ಮಿಕರ ಸಂಖ್ಯೆ 2.30 ಲಕ್ಷ ಎಂದು ಉಲ್ಲೇಖಿಸಿದೆ. ಇದನ್ನು ಗಮನದಲ್ಲಿಟ್ಟುಕೊಂಡು 2023-24ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಇ-ಕಾಮರ್ಸ್ ವಲಯದಲ್ಲಿ ಕೆಲಸ ಮಅಡುವ ಗಿಗ್ ಕಾರ್ಮಿಕರಿಗೆ ಅಪಘಾತದಿಂದ ಮರಣ ಹೊಂದಿದಲ್ಲಿ ಅಪಘಾಥ ಪರಿಹಾರ ಮತ್ತು ಜೀವ ವಿಮೆ ಸೇರಿ ಒಟ್ಟು 4 ಲಕ್ಷ ರೂ. ಮತ್ತು ಜೀವವಿಮೆ 2 ಲಕ್ಷ ರೂ. ಒದಗಿಸಲು ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆ ರೂಪಿಸಿದೆ. ಈ ಯೋಜನೆ ಅನುಷ್ಠಾನಕ್ಕೆ 1ಕೋಟಿ ರೂ. ಅನುದಾನ ಒದಗಿಸಿದೆ.
ಆರ್ಥಿಕ ಇಲಾಖೆ, ಸಂಸದೀಯ ವ್ಯವಹಾರ, ಶಾಸನ ರಚನೆ, ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ, ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗಳೊಂದಿಗೆ ಸಮಾಲೋಚನೆ ನಡೆಸಿ ಈ ವಿಧೇಯಕ ಸಿದ್ಧಪಡಿಸಲಾಗಿದೆ.