ನ್ಯೂಸ್

ನಿಮ್ಮ ಕಣ್ಣಿಗೊಂದು ಸವಾಲು; ಈ ಚಿತ್ರದಲ್ಲಿ ಕಪ್ಪೆ ಇದೆ ನೋಡಿದ್ದೀರಾ?

ಬೆಂಗಳೂರು: ಭ್ರಮೆ ಎಂಬ ಪದದ ಅರ್ಥ ಯಾರನ್ನಾದರೂ ಮೋಸಗೊಳಿಸುವುದು. ಆಪ್ಟಿಕಲ್ ಭ್ರಮೆಯ ಹಿಂದಿನ ಉದ್ದೇಶವೂ ಇದೇ ಆಗಿದೆ. ಈ ಭ್ರಮೆಯ ಮೂಲಕ ಜನರ ಮನಸ್ಸು ಮತ್ತು ಕಣ್ಣುಗಳೊಂದಿಗೆ ಆಟವಾಡಲಾಗುತ್ತದೆ. ಅಂತಹ ಭ್ರಮೆಯ ಜಾಲವನ್ನು ಈ ಚಿತ್ರಗಳಲ್ಲಿ ಹೆಣೆಯಲಾಗಿದೆ. ಇಂದು ನಾವು ನಿಮಗಾಗಿ ಅಂತಹ ಒಂದು ಫೋಟೋ ಪಜಲ್ ಅನ್ನು ತಂದಿದ್ದೇವೆ, ಅದು ಖಂಡಿತವಾಗಿಯೂ ನಿಮ್ಮ ತಲೆಗೆ ಒಂದು ಕೆಲಸ ನೀಡುತ್ತದೆ.

ದೃಷ್ಟಿ ಭ್ರಮೆ ಎಂದರೇನು? : ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.

ಮನರಂಜನೆಯ ಜತೆಗೆ, ಆಪ್ಟಿಕಲ್ ಭ್ರಮೆ ನಮ್ಮ ಮೆದುಳು ಹೇಗೆ ದೃಶ್ಯ ಮಾಹಿತಿಯನ್ನು ಹೀರಿಕೊಳ್ಳುತ್ತದೆ ಎಂಬುದರ ಮೇಲೆ ಬೆಳಕು ಚೆಲ್ಲುತ್ತದೆ. ಮೇಲೆ ನೀಡಲಾದ ಚಿತ್ರದಲ್ಲಿ, ನೀವು ಒಂದೇ ಹುಡುಗನ ಅನೇಕ ತದ್ರೂಪುಗಳನ್ನು ನೋಡಬಹುದು. ಆದರೆ ಇಲ್ಲಿ ಕಪ್ಪೆ ಅಡಗಿ ಕುಳಿತಿದೆ. ಈ ಕಪ್ಪೆಯನ್ನಾದರೂ ನೋಡಿದ್ದೀರಾ? ಕಪ್ಪೆ ಚಿತ್ರದಲ್ಲಿದೆ. ಅದನ್ನು ಮೊದಲು ಗುರುತಿಸುವುದು ನಿಮ್ಮ ಮುಂದೆ ಇರುವ ಸವಾಲಾಗಿದೆ.

ನಿಮ್ಮ ಮುಂದೆ ಇರುವ ಸವಾಲು.. ಈ ಚಿತ್ರದಲ್ಲಿ ನೀವು ಕಪ್ಪೆಯನ್ನು ನೋಡಿದ್ದೀರಾ?

ಸೋಶಿಯಲ್ ಮೀಡಿಯಾದಲ್ಲಿ 99 ಪ್ರತಿಶತ ಜನರು ಅದನ್ನು ಪರಿಹರಿಸುವಲ್ಲಿ ವಿಫಲರಾಗಿದ್ದಾರೆ. ಅಡಗಿರುವ ಕಪ್ಪೆಯನ್ನು ಕಂಡುಹಿಡಿಯಬಲ್ಲವರು ನೀವೇ ಎಂದು ನಾವು ಭಾವಿಸುತ್ತೇವೆ. ಆದರೆ ಈ ಸವಾಲನ್ನು ಪೂರ್ಣಗೊಳಿಸಲು ನಿಮಗೆ ಕೇವಲ ಏಳು ಸೆಕೆಂಡುಗಳಿವೆ ಎಂಬುದನ್ನು ನೆನಪಿನಲ್ಲಿಡಿ.

ಅಸಾಧಾರಣ ವೀಕ್ಷಣಾ ಸಾಮರ್ಥ್ಯ ಹೊಂದಿರುವ ಜನರು ಮಾತ್ರ ನಿರ್ದಿಷ್ಟ ಸಮಯದ ಚೌಕಟ್ಟಿನಲ್ಲಿ ಕಪ್ಪೆಯನ್ನು ಕಂಡುಹಿಡಿಯಲು ಸಾಧ್ಯವಾಗುತ್ತದೆ. ಇನ್ನೂ ಕಪ್ಪೆಯನ್ನು ಹುಡುಕುತ್ತಿರುವವರಿಗೆ, ಪರಿಹಾರವನ್ನು ಕೆಳಗೆ ನೀಡಲಾಗಿದೆ. ಚಿತ್ರದ ಎಡಭಾಗದಲ್ಲಿ ಕಪ್ಪೆಯನ್ನು ಮರೆಮಾಡಲಾಗಿದೆ.