ನ್ಯೂಸ್

Optical Illusion: ಜಸ್ಟ್​ 10 ಸೆಕೆಂಡ್​​​ನಲ್ಲಿ ಈ ಫೋಟೋದಲ್ಲಿರುವ ಚಿರತೆಯನ್ನು ನೀವು ಗುರುತಿಸಬಹುದೇ?

Webdesk - Savina Naik
ನವದೆಹಲಿ: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಆಗಾಗ ಕಾಣ ಸಿಗುತ್ತವೆ. ಅಂಥದ್ದೇ ಮತ್ತೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.

ದೃಷ್ಟಿಭ್ರಮ ಎಂದರೇನು? ( Optical Illusion )

ಮೇಲಿನ ಫೋಟೋ ಗಮನಿಸಿ.? ಅದರಲ್ಲಿ ಚಿರತೆಯೊಂದು ನಮ್ಮೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿದೆ. ಅದು ಎಲ್ಲಿದೆ ಎಂದು ಕಂಡುಹಿಡಿಯುವುದು ನಿಮ್ಮ ಮುಂದೆ ಇರುವ ಸವಾಲಾಗಿದೆ. ಮತ್ತು ಫೋಟೋವನ್ನು ಮೇಲ್ನೋಟಕ್ಕೆ ನೋಡಬೇಡಿ. ಸೂಕ್ಷ್ಮವಾಗಿ ಗಮನಿಸಿದರೆ ಆ ಚಿರತೆ ಕಾಣುವುದು ಕಷ್ಟವೇನಲ್ಲ. ಈ ಫೋಟೋ ಒಗಟು ನಿಮ್ಮ ಕಣ್ಣಿನ ಶಕ್ತಿಯ ವ್ಯಾಪ್ತಿಯನ್ನು ನಿಮಗೆ ತಿಳಿಸುತ್ತದೆ. ಮತ್ತೇಕೆ ತಡ.. ಈ ಫೋಟೋದಲ್ಲಿ ಅಡಗಿರುವ ಚಿರತೆಯನ್ನು ಪತ್ತೆ ಮಾಡುವ ಕೆಲಸ ಶುರು ಮಾಡಿ....

10 ಸೆಕೆಂಡ್​ ಸಮಯದಲ್ಲಿ ನೀವು ಫೋಟೋದಲ್ಲಿರುವ ಚಿರತೆಯನ್ನು ಪತ್ತೆಹಚ್ಚಿದ್ದರೆ, ನಿಮ್ಮ ಕಣ್ಣಿನ ಸಾಮರ್ಥ್ಯ ಮತ್ತು ಬುದ್ಧಿಮತ್ತೆಗೆ ನೀವೇ ಫುಲ್​ ಮಾರ್ಕ್ಸ್​ ಕೊಟ್ಟುಬಿಡಿ. ಒಂದು ವೇಳೆ ಚಿರತೆಯನ್ನು ಗುರುತಿಸಲು ಸಾಧ್ಯವಾಗದೇ, ಎಲ್ಲಿದೆ ಅಂತಾ ಹುಡುಕಾಡುತ್ತಿದ್ದರೆ ಈ ಕೆಳಗಿನ ಚಿತ್ರವನ್ನು ನೋಡಿ ನಿಮಗೆ ಉತ್ತರ ಸಿಗಲಿದೆ.