ನ್ಯೂಸ್

ನಿಮಗೊಂದು ಸವಾಲು; ಈ ಚಿತ್ರದಲ್ಲಿರುವ ಆಮೆಯನ್ನು 5 ಸೆಕೆಂಡುಗಳಲ್ಲಿ ಪತ್ತೆ ಮಾಡಿ..

ಬೆಂಗಳೂರು: ಆಪ್ಟಿಕಲ್ ಭ್ರಮೆಗಳು ನಮ್ಮ ಮೆದುಳು ಮತ್ತು ಕಣ್ಣುಗಳಿಗೆ ಕೆಲಸ ಕೊಡಲು ರಚಿಸಲಾದ ದೃಶ್ಯ ಚಿತ್ರಗಳಾಗಿವೆ. ಅವುಗಳನ್ನು ದೃಶ್ಯ ಭ್ರಮೆಗಳು ಎಂದೂ ಕರೆಯುತ್ತಾರೆ.  ನಾವು ನಿಮಗೆ ಹೀಗೆ ಒಂದು ಸವಾಲನ್ನು ನೀಡುತ್ತಿದ್ದೇವೆ. ಈ ಸವಾಲು ಖಂಡಿತವಾಗಿಯೂ ನಿಮ್ಮ ತಲೆಯನ್ನು ಕೆರೆದುಕೊಳ್ಳುವಂತೆ ಮಾಡುತ್ತದೆ.

ದೃಷ್ಟಿ ಭ್ರಮೆ ಎಂದರೇನು?: ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.

ನಿಮ್ಮ ಮೆದುಳಿನ ಶಕ್ತಿಯನ್ನು ಪರೀಕ್ಷಿಸಲು ಮತ್ತು ಸ್ವಲ್ಪ ಮೋಜು ಮಾಡಲು ನೀವು ಸರಳವಾದ ಮಾರ್ಗವನ್ನು ಹುಡುಕುತ್ತಿದ್ದರೆ, ಈಗ ಈ ಆಪ್ಟಿಕಲ್ ಇಲ್ಯೂಷನ್ ಸವಾಲನ್ನು ನೀಡುತ್ತಿದ್ದೇವೆ.

ಮೇಲೆ ಹಂಚಿಕೊಂಡಿರುವ ಚಿತ್ರದಲ್ಲಿ, ಸುಸಜ್ಜಿತವಾದ ಮಾರ್ಗವನ್ನು ನೀವು ನೋಡಬಹುದು. ಆದರೆ ಈ ಮಾರ್ಗದಲ್ಲಿ ನೆಲಕ್ಕೆ ಹಾಕಿರುವ ಕಲ್ಲುಗಳ ಮಧ್ಯೆ ಒಂದು ಆಮೆ ಅಡಗಿ ಕುಳಿತಿದೆ. 5 ಸೆಕೆಂಡುಗಳಲ್ಲಿ ಆಮೆಯನ್ನು ಕಂಡುಹಿಡಿಯುವುದು ಓದುಗರಿಗೆ ಇರುವ ಸವಾಲಾಗಿದೆ.

ನೀವು ಎಷ್ಟು ಗಮನಿಸುತ್ತಿರುವಿರಿ ಎಂಬುದನ್ನು ಪರೀಕ್ಷಿಸಲು ಇದು ಉತ್ತಮ ಅವಕಾಶವಾಗಿದೆ. ನಿಮ್ಮ ಸಮಯ ಈಗ ಪ್ರಾರಂಭವಾಗುತ್ತದೆ. ಈ ಚಿತ್ರದಲ್ಲಿ ಆಮೆ ಇದೆ. ಸೂಕ್ಷ್ಮವಾಗಿ ಗಮನಿಸಿದರೆ ನೀವು ಸವಾಲನ್ನು ಗೆಲ್ಲಬಹುದಾಗಿದೆ. ನೀವು ಈ ಸವಾಲನ್ನು ಪೂರ್ಣಮಾಡಲು ಸಾಧ್ಯವಾಗಿಲ್ವಾ? ಇನ್ನೂ ನೀವು ಈ ಆಪ್ಟಿಕಲ್ ಭ್ರಮೆಯಲ್ಲಿ ಅಡಗಿರುವ ಎಲ್ಲಾ ಆಮೆಯನ್ನು ಹುಡುಕುತ್ತಿದ್ದರೆ. ಚಿಂತಿಸಬೇಡಿ, ನಾವು ಉತ್ತರವನ್ನು ಕೆಳಗೆ ಹಂಚಿಕೊಂಡಿದ್ದೇವೆ.

ಆಮೆಯು ಚಿತ್ರದ ಬಲಭಾಗದಿಂದ ನಡೆಯುವುದನ್ನು ಕಾಣಬಹುದು, ಇದು ಚಿಕ್ಕದಾಗಿದೆ. ಅದರ ಆಮೆಯ ಚಿಪ್ಪಿನ ಬಣ್ಣವು ಇಟ್ಟಿಗೆಗಳೊಂದಿಗೆ ಸ್ವಲ್ಪ ಮಟ್ಟಿಗೆ ಹೊಂದಿಕೆಯಾಗುವುದರಿಂದ ಮೊದಲ ನೋಟದಲ್ಲಿ ಗಮನಿಸುವುದು ಕಷ್ಟಕರವಾಗಿತ್ತು.