ಭದ್ರಾವತಿ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸಿ ಪರಿಸರ ಪ್ರೇಮಿಗಳು ನಗರದ ಮಾಧವಾಚಾರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಪಶ್ಚಿಮಘಟ್ಟದ ಪರಿಸರ ವಲಯವು ಸೂಕ್ಷ್ಮ ಪ್ರದೇಶ. ಇಂತಹ ಪ್ರದೇಶದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಂಡಿರುವುದು ಸರಿಯಾದ ನಿರ್ಧಾರವಲ್ಲ. ಇದರಿಂದ ವನಸಂರಕ್ಷಣೆ ವನಸಂವರ್ಧನ ಅಧಿನಿಯಮ ಉಲ್ಲಂಘನೆ ಆಗುತ್ತದೆ. ಸಿಂಗಳೀಕ ಅಭಯಾರಣ್ಯದಲ್ಲಿ ಯಾವುದೇ ಅಭಿವೃದ್ಧಿ ಯೋಜನೆಗಳಿಗೆ ಅವಕಾಶವಿರುವುದಿಲ್ಲ. ಒಂದು ವೇಳೆ ಕಾಮಗಾರಿ ನಡೆದಿದ್ದೇ ಆದಲ್ಲಿ ಅದು ಸಂಪೂರ್ಣ ವನ ಸಂವರ್ಧನೆ ಅಧಿನಿಯಮವನ್ನು ಉಲ್ಲಂಸಿದಂತಾಗುತ್ತದೆ ಎಂದು ಎಚ್ಚರಿಸಿದರು.
ರಾಜ್ಯ ಸರ್ಕಾರ ಈ ಯೋಜನೆಯನ್ನು ಕೈಬಿಟ್ಟು ಪರಿಸರ ಸಂರಕ್ಷಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿ ತಾಲೂಕು ಕಚೇರಿ ಗ್ರೇಡ್-2 ತಹಸೀಲ್ದಾರ್ ಮಂಜಾನಾಯ್ಕ ಅವರಿಗೆ ಮನವಿ ಸಲ್ಲಿಸಿದರು.
ಕೆಆರ್‌ಎಸ್ ಪಕ್ಷದ ತೀರ್ಥೇಶ, ಪ್ರಮುಖರಾದ ಟಿ.ಜಿ.ಬಸವರಾಜಯ್ಯ, ಶರತ್‌ಕುಮಾರ್, ಶಶಿಕುಮಾರ್ ಗೌಡ, ಅಬ್ದುಲ್ ಖಾದೀರ್ ಇತರರಿದ್ದರು.