ಕೋಲಾರ: ಬಾಂಗ್ಲಾದೇಶದಲ್ಲಿ ಹಿಂದುಗಳು ಹಾಗೂ ಶ್ರದ್ಧಾ ಕೇಂದ್ರಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ, ಕೋಲಾರ ನಗರದಲ್ಲಿ ಹಿಂದು ಪರ ಸಂಘಗಳ ಮುಖಂಡರು ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಬಂಗಾರಪೇಟೆ ವೃತ್ತದಲ್ಲಿ ಜಮಾಯಿಸಿದ ವಿವಿಧ ಹಿಂದು ಪರ ಸಂಘಟನೆ ಮುಖಂಡರು, ಇಟಿಸಿಎಂ ವೃತ್ತ, ಕಾಲೇಜು ವೃತ್ತ ಮೂಲಕ ಮೆರವಣಿಗೆ ಸಾಗಿ, ಹಳೇ ಬಸ್ ನಿಲ್ದಾಣದಲ್ಲಿ ಜಮಾಯಿಸಿದರು. ಹಿಂದುಗಳ ಮೇಲೆ ಹಲ್ಲೆ ನಡೆಸುತ್ತಿರುವವರ ವಿರುದ್ಧ ಕ್ರಮವಹಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ತಹಸೀಲ್ದಾರ್ ಡಾ.ನಯನಾ ಅವರಿಗೆ ಮನವಿ ಸಲ್ಲಿಸಿದರು.
ಚಿನ್ಮಯ ಮಿಷನ್‌ನ ದತ್ತಪಾದಾನಂದ ಸ್ವಾಮೀಜಿ ಮಾತನಾಡಿ, ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ಹಲ್ಲೆ, ದೌರ್ಜನ್ಯ ನಡೆಯುತ್ತಿರುವುದು ಇದೇನು ಮೊದಲಲ್ಲ. ಸನಾತನ ಧರ್ಮ, ರಾಮಾಯಣ, ದ್ವಾಪರ ಯುಗದ ಕಾಲದಿಂದಲೂ ನಡೆದುಕೊಂಡು ಬಂದಿದೆ. ಇದಕ್ಕೆಲ್ಲ ರಾಜಕೀಯ ಪಕ್ಷಗಳೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ನಾವೆಲ್ಲ ನಮ್ಮ ಜಾತಿ, ಮತ, ಪಂಥಗಳಲ್ಲಿ ಮುಳುಗಿದ್ದೇವೆ. ಅದಕ್ಕಾಗಿ ಒಗ್ಗಟ್ಟಾಗಲು ಸಾಧ್ಯವಾಗುತ್ತಿಲ್ಲ. ಬೆಂಕಿ ಎಲ್ಲೋ ಇದೆ ಎಂದು ಮೈಮರೆತರೆ ನಾಳೆ ನಮ್ಮ ಮನೆಗೆ ಬರಬಹುದು ಎನ್ನುವ ಎಚ್ಚರಿಕೆ ಹೊಂದಬೇಕು. ಹಿಂದುಗಳ ಮೇಲೆ ಎಲ್ಲೇ ದೌರ್ಜನ್ಯ ನಡೆದರೂ ನಾವು ಸುಮ್ಮನೆ ಇರುವುದಿಲ್ಲ ಎಂಬ ಸಂಕಲ್ಪ ಮಾಡಬೇಕು ಎಂದ ಸ್ವಾಮೀಜಿ, ಮಹಾಭಾರತ ಧರ್ಮಯುದ್ಧವೇ ಆಗಿದ್ದು, ಇಂತಹ ಕ್ರಾಂತಿಗಳಿಗೆ ಸಂತರೇ ಮುಂದೆ ಬರಬೇಕಾಯಿತು. ಹಿಂದುಗಳ ರಕ್ಷಣೆೆಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ನಾವೆಲ್ಲರೂ ಒಂದಾಗಬೇಕು. ಇಂದಿನ ಪ್ರತಿಭಟನೆಯನ್ನು ಇಲ್ಲಿಗೆ ನಿಲ್ಲಿಸದೆ ತೀವ್ರಗೊಳಿಸುವ ಮೂಲಕ ಸರ್ಕಾರದ ಕಣ್ಣು ತೆರೆಸಬೇಕು ಎಂದರು.
* ಬಾಂಗ್ಲಾದೇಶ ರೂಪಗೊಂಡಿದ್ದೇ ಭಾರತದ ಭಿಕ್ಷೆಯಲ್ಲಿ
ಸಾಮಾಜಿಕ ಕಾರ್ಯಕರ್ತ ಉಲ್ಲಾಸ್ ಮಾತನಾಡಿ, ಬಾಂಗ್ಲಾದೇಶ ಹುಟ್ಟಿದ್ದೇ ಭಾರತದ ಭಿಕ್ಷೆಯಲ್ಲಿ. ಕೇಂದ್ರ ಸರ್ಕಾರ ರಾಜತಾಂತ್ರಿಕ ಒತ್ತಡ ಹೇರಿ, ಸ್ವಾಮೀಜಿಯನ್ನು ಬಿಡುಗಡೆಗೊಳಿಸಬೇಕು. ಹಿಂದುಗಳ ರಕ್ಷಣೆ ಮಾಡುವ ಜತೆಗೆ ನೈತಿಕ ಬೆಂಬಲ ನೀಡಬೇಕು ಎಂದು ಒತ್ತಾಯಿಸಿದರು.
ಜಮಾತ್, ಇಸ್ಲಾಂ ಸಂಘಟನೆಯು ಡೀಪ್ ಸ್ಟೇಟ್ ರಚಿಸಿಕೊಂಡು ಧಂಗೆ ಪ್ರಾರಂಭಿಸಿದ್ದು, ಭಾರತದಲ್ಲಿ ಇವಿಎಂ ಸರಿಯಿಲ್ಲ ಎನ್ನುವುದು ಸಹ ಡೀಪ್ ಸ್ಟೇಟ್‌ನ ಕೃತ್ಯ. ಹಿಂದುಗಳು ಎಚ್ಚೆತ್ತುಕೊಳ್ಳಬೇಕು. ೨೦೧೩ರಿಂದ ಈವರೆಗೆ ಸುಮಾರು ನಾಲ್ಕು ಸಾವಿರ ಹಲ್ಲೆ ಘಟನೆಗಳು ನಡೆದಿವೆ. ಆದರೂ ಅಲ್ಲಿನ ಸರ್ಕಾರ, ಪೊಲೀಸ್ ಇಲಾಖÉ ಹಿಂದುಗಳ ರಕ್ಷಣೆÉಗೆ ಮುಂದಾಗುತ್ತಿಲ್ಲ ಎಂದು ಉಲ್ಲಾಸ್ ದೂರಿದರು.
ಸಾಮಾಜಿಕ ಕಾರ್ಯಕರ್ತ ಉಲ್ಲಾಸ್ ಮಾತನಾಡಿ, ಬಾಂಗ್ಲಾದಲ್ಲಿ ಜಮಾತ್ ಇಸ್ಲಾಮಿ ಸಂಘಟನೆ ರಾಜಕೀಯ ಪಕ್ಷವಾಗಿದ್ದು, ಶರಿಯಾ ಕಾನೂನನ್ನು ಅಲ್ಲಿ ಜಾರಿಗೆ ತರುವ ಉದ್ದೇಶ ಹೊಂದಿದೆ. ಇಸ್ಲಾಂ ಅನ್ನು ನಂಬದವರನ್ನು ಕೊಲೆ ಮಾಡುವ ಹಂತಕ್ಕೆ ಇಳಿದಿದ್ದು, ಅದರ ಭಾಗವಾಗಿ ಹಿಂದುಗಳ ಮೇಲೆ ದೌರ್ಜನಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.
ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದೇಶ ಅಲ್ಲದೆ ಹಿಂದುಗಳ ಕೊಲೆ, ಆಸ್ತಿಪಾಸ್ತಿ ಲೂಟಿ, ಅತ್ಯಾಚಾರದಂತ ಕೃತ್ಯಗಳು ಸಾಮಾನ್ಯ ಎನಿಸುತ್ತಿವೆ. ಆದರೂ ಸಂತ್ರಸ್ತರಿಗೆ ಇಸ್ಕಾನಿನ ವಕ್ತಾರ ಚಿನ್ಮಯ ಕೃಷ್ಣ ಸ್ವಾಮೀಜಿ ಧೈರ್ಯ ತುಂಬಿದ್ದರು. ಬಾಂಗ್ಲಾ ಧ್ವಜಕ್ಕಿಂತ ಎತ್ತರದಲ್ಲಿ ಹಿಂದುಧ್ವಜ ಹಾರಾಟ ಮಾಡಿದ್ದಾರೆಂಬ ನೆಪವೊಡ್ಡಿ ಸ್ವಾಮೀಜಿ ಅವರನ್ನು ಬಂಽಸಿದ್ದು, ಅಲ್ಲಿನ ಸೇನೆ, ಪೊಲೀಸ್ ಇಲಾಖÉಯೂ ಸಹಾಯಕ್ಕೆ ಬರಲಿಲ್ಲ ಎಂದು ಉಲ್ಲಾಸ್ ಅಸಮಾಧಾನ ವ್ಯಕ್ತಪಡಿಸಿದರು.
ಆರ್‌ಎಸ್‌ಎಸ್ ವಿಭಾಗೀಯ ಸಂಚಾಲಕ ಡಾ.ಶಂಕರ್ ನಾಯಕ್, ಜಿಲ್ಲಾ ಸಂಚಾಲಕ ಗೋವಿಂದರಾಜು, ಮಾಜಿ ಶಾಸಕರಾದ ಎಂ.ನಾರಾಯಣಸ್ವಾಮಿ, ವೈ.ಸಂಪAಗಿ, ಕೆ.ಎಸ್.ಮಂಜುನಾಥ್ ಗೌಡ, ಮುಖಂಡರಾದ ಸಿಎಂಆರ್ ಶ್ರೀನಾಥ್, ಡಾ.ವೇಣುಗೋಪಾಲ್, ಓಂಶಕ್ತಿ ಚಲಪತಿ, ಸತ್ಯನಾರಾಯಣರಾವ್ ಮತ್ತಿತರರು ಪಾಲ್ಗೊಂಡಿದ್ದರು.