ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ನಾಡುಪ್ರಭು ಕೆಂಪೇಗೌಡರ ‘ಪ್ರಗತಿಯ ಪ್ರತಿಮೆ’ ಅನಾವರಣದ ನಂತರ ಕಾರ್ಯಕ್ರಮ ರಾಜಕೀಯ ಬಣ್ಣ ಬಳಿದುಕೊಂಡಿದ್ದು, ಪರಸ್ಪರ ತಿವಿಯುವ ಹೈವೋಲ್ಟೇಜ್ ರಾಜಕಾರಣ ಬಿಸಿ ಚರ್ಚೆಗೆ ಗ್ರಾಸವಾಗಿದೆ. ಕಾರ್ಯಕ್ರಮ ಮುಗಿದ ನಂತರ ಆಹ್ವಾನದ ವಿವಾದ ಕಾವೇರಿದೆ. ಆಡಳಿತ ಬಿಜೆಪಿ ಮೇಲೆ ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಮುಗಿಬಿದ್ದಿವೆ.
ಮುಂಬರುವ ಚುನಾವಣೆ ದೃಷ್ಟಿಯಲ್ಲಿಟ್ಟು ಕೊಂಡು ‘ಒಕ್ಕಲಿಗ ಮತಬ್ಯಾಂಕ್’ ವಶಪಡಿಸಿ ಕೊಳ್ಳಲು 3 ರಾಜಕೀಯ ಪಕ್ಷಗಳು ಹಗ್ಗಜಗ್ಗಾಟಕ್ಕೆ ಇಳಿದಂತಿದೆ. ಇದರಿಂದಾಗಿ ಬೆಂಗಳೂರಿನ ನಿರ್ವತೃ, ದೂರದೃಷ್ಟಿ ನಾಯಕ ಕೆಂಪೇಗೌಡರ ಭವ್ಯ ಪ್ರಗತಿ ಪ್ರತಿಮೆ ತಲೆ ಎತ್ತಿ ನಿಂತಿರುವ ಬಗ್ಗೆ ಹೆಮ್ಮೆ, ಸಂತಸ ತ್ರಿವಳಿ ಪಕ್ಷಗಳಿಗೆ ಗೌಣವಾಗಿದೆ.
ಆರಂಭಿಕ ಅಪಸ್ವರ: ನಾಡುಪ್ರಭುವಿನ ಪ್ರತಿಮೆ ಅನಾವರಣ ಪಕ್ಷಾತೀತವಾಗಿ ಸಂಘಟಿಸಲು, ಅಧಿಕೃತ ಕಾರ್ಯಕ್ರಮಕ್ಕೆ ಎಲ್ಲರನ್ನೂ ಆಹ್ವಾನಿಸಲು ಬಿಜೆಪಿ ಆಂತರಿಕವಾಗಿ ರ್ಚಚಿಸಿತ್ತು ಎಂದು ಮೂಲಗಳು ತಿಳಿಸಿವೆ.
ಸಿಎಂ ಕರೆ ಮಾಡಿ ಆಹ್ವಾನಿಸಿದ್ದರು, ಪಕ್ಷದ ಸಭೆ ಇದೆ ಬರಲಾಗಲ್ಲ ಎಂದಿದ್ದೆ. ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆಯಲ್ಲಿ ಸಿಎಂ, ಸ್ಪೀಕರ್, ರಾಜ್ಯಪಾಲರ ಬಳಿಕ ನನ್ನ ಹೆಸರು ಇರಬೇಕಿತ್ತು. ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರೇ ಇಲ್ಲವೆಂದು ಪ್ರಶ್ನಿಸಿದ್ದೆ.
| ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ
ಕೆಂಪೇಗೌಡ ಈ ನಾಡಿನ ಆಸ್ತಿ, ಎಲ್ಲರನ್ನೂ ಕರೆದು ಹಬ್ಬದ ರೀತಿ ಪ್ರತಿಮೆ ಅನಾವರಣಗೊಳಿಸಬೇಕಿತ್ತು. ವಿಧಾನಸೌಧ ಮುಂದೆ ಬಸವಣ್ಣ ಪ್ರತಿಮೆ ವಿಚಾರ ಬಹಳ ದಿನದಿಂದ ಚರ್ಚೆಯಲ್ಲಿದೆ. ಆದಷ್ಟು ಬೇಗ ಆಗಬೇಕು. ಕನಕದಾಸರು, ಕುವೆಂಪು, ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಇನ್ನೂ ಅನೇಕ ಮಹಾತ್ಮರು ಇದ್ದಾರೆ. ಅವರ ಪ್ರತಿಮೆಗಳನ್ನೂ ಸರ್ಕಾರದ ಜಾಗದಲ್ಲಿ ನಿರ್ವಿುಸಲಿ.
| ಎಂ.ಬಿ.ಪಾಟೀಲ್
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ
ಮರುದಿನ 12.50ರ ಸಮಾರಂಭಕ್ಕೆ ರಾತ್ರಿ 9 ಗಂಟೆಗೆ ಮಾಜಿ ಪ್ರಧಾನಿಗಳಿಗೆ ಕಾಟಾಚಾರದ ಕರೆ ಮಾಡಿದ ಸಿಎಂ, ತಾವು ಬರೆದ ಪತ್ರವನ್ನು ತಲುಪಿಸಿದ್ದು ಮಧ್ಯರಾತ್ರಿ 12.30 ಗಂಟೆಗೆ! ಇಂತಹ ಹಿರಿಯರ ವಿಷಯದಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವ ಸಿಎಂ ವರ್ತಿಸುವ ರೀತಿ ಹೀಗೇನಾ?
| ಜೆಡಿಎಸ್
ಎಚ್.ಡಿ.ದೇವೇಗೌಡರನ್ನು ಸ್ವತಃ ಮುಖ್ಯಮಂತ್ರಿಗಳೇ ಕರೆ ಮಾಡಿ, ಪತ್ರ ಬರೆದು ಆಹ್ವಾನಿಸಿದ್ದರು. ಇದರಲ್ಲಿ ತಪು್ಪ ಹುಡುಕುವಂಥದ್ದೇನಿಲ್ಲ. ನಮಗೆ ಕೆಂಪೇಗೌಡರು ಮುಖ್ಯವಾಗಬೇಕಷ್ಟೇ. ಇಷ್ಟಕ್ಕೂ ಈ ಕಾರ್ಯಕ್ರಮಕ್ಕೆ ಆಹ್ವಾನ ಪತ್ರಿಕೆ ಅಚ್ಚು ಹಾಕಿರಲಿಲ್ಲ.
| ಡಾ.ಸಿ.ಎನ್.ಅಶ್ವತ್ಥನಾರಾಯಣ ಉನ್ನತ ಶಿಕ್ಷಣ ಸಚಿವ
ಟಿಪ್ಪು ಪ್ರತಿಮೆ ನಿರ್ವಿುಸಿಯೇ ಸಿದ್ಧ
ಇಸ್ಲಾಂ ಧರ್ಮದಲ್ಲಿ ಪ್ರತಿಮೆ ನಿರ್ವಣಕ್ಕೆ ಅವಕಾಶವಿಲ್ಲ. ಇದ್ದಿದ್ದರೆ ಎಲ್ಲ ಕಡೆಯೂ ಟಿಪ್ಪುವಿನ ಪ್ರತಿಮೆ ಇರುತ್ತಿತ್ತು. ಯಾರು ಎಷ್ಟೇ ಅಡ್ಡಿಪಡಿಸಿದರೂ ಟಿಪ್ಪು ಪ್ರತಿಮೆ ನಿರ್ಮಾಣ ಮಾಡುತ್ತೇವೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು. ಟಿಪ್ಪುವಿನ 100 ಅಡಿ ಎತ್ತರದ ಪ್ರತಿಮೆ ನಿರ್ವಿುಸಲು ನಿರ್ಧರಿಸಲಾಗಿದೆ. ಅದನ್ನು ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ಮಾಡಬೇಕೇ? ಕಂಚು ಅಥವಾ ಪಂಚಲೋಹದಲ್ಲಿ ನಿರ್ವಿುಸಬೇಕೇ? ಎನ್ನುವ ಕುರಿತು ಸಮುದಾಯದ ಮುಖಂಡರೊಂದಿಗೆ ಚರ್ಚೆ ಮಾಡುತ್ತೇನೆ ಎಂದು ಶನಿವಾರ ಸುದ್ದಿಗಾರರಿಗೆ ತಿಳಿಸಿದರು. ಟಿಪ್ಪು ಆಳ್ವಿಕೆಯನ್ನು ಮುಂದಿನ ಪೀಳಿಗೆಗೆ ತಿಳಿಸಲು ಪ್ರತಿಮೆ ನಿರ್ವಿುಸುತ್ತಿದ್ದು, ಅದು ನಮ್ಮ ಸಮುದಾಯದ ತೀರ್ವನವೇ ಹೊರತು ಕಾಂಗ್ರೆಸ್ ಪಕ್ಷದ ತೀರ್ಮಾನ ಅಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ನವರು ಟಿಪ್ಪು ಪ್ರತಿಮೆ ನಿರ್ಮಾಣ ಮಾಡಲಿ. ಜನ ಅವರನ್ನು ಮನೆಗೆ ಕಳುಹಿಸುತ್ತಾರೆ. ಟಿಪ್ಪು ಜಯಂತಿಗೆ ಈಗಲೂ ನಮ್ಮ ವಿರೋಧವಿದೆ. ಟಿಪ್ಪು ಒಬ್ಬ ಮತಾಂಧ, ದೇಶದ್ರೋಹಿ, ಕನ್ನಡ ವಿರೋಧಿ. ಇದು ನನ್ನ ವೈಯಕ್ತಿಕ ಹಾಗೂ ಪಕ್ಷದ ನಿಲುವು.
| ಪ್ರಲ್ಹಾದ ಜೋಶಿ ಕೇಂದ್ರ ಸಚಿವ