ನ್ಯೂಸ್

SIR ಕುರಿತು ಚರ್ಚೆಗೆ ವಿಪಕ್ಷಗಳ ಪಟ್ಟು: ರಾಜ್ಯಸಭಾ ಕಲಾಪ ನಾಳೆಗೆ ಶಿಫ್ಟ್​!Monsoon session

Monsoon session: ಬಿಹಾರದಲ್ಲಿ ನಡೆಸುಯತ್ತಿರುವ ತ್ವರಿಯ ಮತದಾರರ ಪಟ್ಟಿ ಪರಿಷ್ಕರಣೆಯ ವಿರುದ್ಧ ವಿಪಕ್ಷಗಳು ಸದನದಲ್ಲಿ ಪ್ರತಿಭಟಿಸಿದ ಕಾರಣ ರಾಜ್ಯಸಭಾ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.

ಸೋಮವಾರ ಎರೆಡು ಬಾರಿ ಕಲಾಪವನ್ನು ಮುಂದೂಡಲಾಯಿತು. ಕಲಾಪ ಆರಂಭವಾದ ಕೇಲವೇ ಸಮಯದಲ್ಲಿ 12 ಗಂಟೆಗೆ ಮುಂದೂಡಲಾಗಿತ್ತು. ನಂತರ ರಾಜ್ಯಸಭೆ ಕಲಾಪದಲ್ಲಿ, ಪ್ರತಿಪಕ್ಷಗಳು ಬಿಹಾರದಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ವಿಷಯದ ಬಗ್ಗೆ ಚರ್ಚೆಸುವಂತೆ ಒತ್ತಾಯಿಸಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದರಿಂದ ಕಲಾಪವನ್ನು ಮತ್ತೊಮ್ಮೆ 2 ಗಂಟೆಗೆ ಮುಂದೂಡಲಾಯಿತು.

ಪುನಃ ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾದ ಕಲಾಪದಲ್ಲಿ, ಸಮುದ್ರದ ಮೂಲಕ ಸರಕುಗಳ ಸಾಗಣೆ-2025 ವಿಧೇಯಕದ ಕುರಿತು ಚರ್ಚಿಸಲು ರಾಜ್ಯಸಭಾ ಸ್ಪೀಕರ್ ಹರಿವಂಶ್ ನಾರಾಯಣ ಸಿಂಗ್​ ಅವರಿಗೆ ವಿಪಕ್ಷಗಳು ಮನವಿ ಮಾಡಿದವು. ಆ ವೇಳೆಯೂ ವಿರೋಧ ಪಕ್ಷಗಳ ಸಂಸದರು SIR ಬಗ್ಗೆ ಚರ್ಚಿಸಲು ಒತ್ತಾಯಿಸಿ, ಸದನದ ಬಾವಿಗೆ ಇಳಿದು ಪ್ರತಿಭಟಿಸಿದ ಕಾರಣ ರಾಜ್ಯಸಭಾ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.

ಮಂಗಳವಾರ ಬೆಳಗ್ಗೆ 11 ಗಂಟೆಗೆ ಆಪರೇಷನ್​ ಸಿಂಧೂರ ಕುರಿತು ಚರ್ಚಿಸಲು ಸಭೆ ಸೇರಲಿವೆ. ರಾಜ್ಯಸಭೆಯಲ್ಲಿ ನಡೆಯಲಿರುವ ಚರ್ಚೆಗೆ ಕೇಂದ್ರ ಸಚಿವರಾದ ರಾಜನಾಥ್​ ಸಿಂಗ್​ ಮತ್ತು ಎಸ್​. ಜೈಶಂಕರ್​ ಆಗಮಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಚರ್ಚೆಯಲ್ಲಿ ಮಧ್ಯಪ್ರವೇಶಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್​)