ನ್ಯೂಸ್

ಸಿಂಧೂರ್ ಕಾರ್ಯಾಚರಣೆ; ಸಮಗ್ರತೆಯನ್ನು ರಕ್ಷಿಸುವಲ್ಲಿ ರಿಲಯನ್ಸ್ ಕುಟುಂಬ ಸಿದ್ಧವಾಗಿದೆ; ಶ್ರೀ ಮುಖೇಶ್ ಡಿ ಅಂಬಾನಿ|Ambani

Ambani| ಭಾರತೀಯ ಸೇನೆಯು ಪಾಕಿಸ್ತಾನದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ಸರಣಿ ದಾಳಿಗಳನ್ನು ನಡೆಸಿದೆ. ಮತ್ತೊಂದೆಡೆ ಪಾಕ್​ ಕೂಡ ಭಾರತದ ಮೇಲೆ ಡ್ರೋನ್ ದಾಳಿ ಮಾಡಲು ಮುಂದಾಗಿದೆ. ಇನ್ನೂ ಈ ಬಗ್ಗೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಮುಖೇಶ್ ಡಿ ಅಂಬಾನಿ ಅವರು ಮಾತನಾಡಿದ್ದು, ನಮ್ಮ ಭಾರತೀಯ ಸಶಸ್ತ್ರ ಪಡೆಗಳ ಕಾರ್ಯಾಚರಣೆ ಸಿಂಧೂರ್ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ ಎಂದಿದ್ದಾರೆ.

ಎಲ್ಲಾ ರೀತಿಯ ಭಯೋತ್ಪಾದನೆಯ ಪಿಡುಗಿನ ವಿರುದ್ಧ ಭಾರತವು ಒಗ್ಗಟ್ಟಿನಿಂದ, ದೃಢನಿಶ್ಚಯದಲ್ಲಿ ಅಚಲವಾಗಿ ನಿಂತಿದೆ. ಪ್ರಧಾನಿ ನರೇಂದ್ರ ಮೋದಿಯವರ ದಿಟ್ಟ ಮತ್ತು ನಿರ್ಣಾಯಕ ನಾಯಕತ್ವದಲ್ಲಿ, ಭಾರತೀಯ ಸಶಸ್ತ್ರ ಪಡೆಗಳು ಗಡಿಯಾಚೆಯಿಂದ ಬರುವ ಪ್ರತಿಯೊಂದು ಪ್ರಚೋದನೆಗೂ ನಿಖರತೆ ಮತ್ತು ಶಕ್ತಿಯಿಂದ ಪ್ರತಿಕ್ರಿಯಿಸಿವೆ. ಭಯೋತ್ಪಾದನೆಯ ಎದುರು ಭಾರತ ಎಂದಿಗೂ ಮೌನವಾಗಿರುವುದಿಲ್ಲ ಮತ್ತು ನಮ್ಮ ನೆಲದ ಮೇಲೆ, ನಮ್ಮ ನಾಗರಿಕರ ಮೇಲೆ ಅಥವಾ ನಮ್ಮ ರಾಷ್ಟ್ರವನ್ನು ರಕ್ಷಿಸುವ ಧೈರ್ಯಶಾಲಿ ಪುರುಷರು ಮತ್ತು ಮಹಿಳೆಯರ ಮೇಲೆ ಒಂದೇ ಒಂದು ದಾಳಿಯನ್ನು ನಾವು ಸಹಿಸುವುದಿಲ್ಲ ಎಂದು ಪ್ರಧಾನಿ ಮೋದಿಯವರ ನಾಯಕತ್ವವು ಪ್ರದರ್ಶಿಸಿದೆ.

ನಮ್ಮ ಶಾಂತಿಗೆ ಇರುವ ಪ್ರತಿಯೊಂದು ಬೆದರಿಕೆಯನ್ನು ದೃಢ ಮತ್ತು ನಿರ್ಣಾಯಕ ಕ್ರಮದಿಂದ ಎದುರಿಸಲಾಗುವುದು ಎಂದು ಕಳೆದ ಕೆಲವು ದಿನಗಳು ತೋರಿಸಿವೆ. ನಮ್ಮ ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ರಕ್ಷಿಸುವಲ್ಲಿ ರಿಲಯನ್ಸ್ ಕುಟುಂಬವು ಯಾವುದೇ ಕ್ರಮವನ್ನು ಬೆಂಬಲಿಸಲು ಸಿದ್ಧವಾಗಿದೆ. ನಮ್ಮ ಸಹ ಭಾರತೀಯರು ನಂಬುವಂತೆ ನಾವು ಭಾರತದ ಶಾಂತಿಯನ್ನು ಬಯಸುತ್ತೇವೆ,  ಸಾರ್ವಭೌಮತ್ವವನ್ನು ಬಲಿಕೊಡದೆ ಒಟ್ಟಾಗಿ ನಾವು ನಿಂತು ಹೋರಾಡುವ ಮೂಲಕ ನಾವು ಜಯಗಳಿಸುತ್ತೇವೆ ಜೈ ಹಿಂದ್, ಜೈ ಹಿಂದ್ ಕಿ ಸೇನಾ ಎಂದು ಮುಖೇಶ್​​ ಅಂಬಾನಿ ಹೇಳಿದ್ದಾರೆ.

ಏನಿದು ಆಪರೇಷನ್​ ಸಿಂಧೂರ್​?

(ಏಜೆನ್ಸೀಸ್)

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದಲ್ಲಿ ಭಾರತ ಇತ್ತೀಚೆಗೆ ನಡೆಸಿದ ಮಿಲಿಟರಿ ಕಾರ್ಯಾಚರಣೆಯನ್ನು ಆಪರೇಷನ್ ಸಿಂಧೂರ್ ಎಂದು ಕರೆಯಲಾಗುತ್ತಿದೆ. ಈ ಪದವು ಧೈರ್ಯ ಮತ್ತು ದೇಶಭಕ್ತಿಯ ಸಂಕೇತವಾಗಿ ಮಾರ್ಪಟ್ಟಿದ್ದು, ದೇಶಾದ್ಯಂತ ವ್ಯಾಪಕವಾಗಿ ಗುರುತಿಸಲ್ಪಟ್ಟಿದೆ.