ನವದೆಹಲಿ: ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನದೊಂದಿಗಿನ ಯುದ್ಧದಲ್ಲಿ ವಿಮಾನಗಳ ನಷ್ಟವಾಗಿದೆ ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಒಪ್ಪಿಕೊಂಡಿದ್ದಾರೆ. ಆದರೆ ಆರು ಭಾರತೀಯ ಜೆಟ್‌ಗಳನ್ನು ಹೊಡೆದುರುಳಿಸಿದ ಇಸ್ಲಾಮಾಬಾದ್‌ನ ಹೇಳಿಕೆಯನ್ನು ಅವರು ತಿರಸ್ಕರಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ದಾಳಿಯಲ್ಲಿ ನಾವು ಭಾರತದ 6 ಫೈಟರ್ ಜೆಟ್‌ಗಳನ್ನು ಹೊಡೆದುರುಳಿಸಿದ್ದೇವೆ ಎಂದು ಪಾಕಿಸ್ತಾನ ಹೇಳಿಕೊಂಡಿತ್ತು. ಆದರೆ ಅದನ್ನು ಭಾರತ ನಿರಾಕರಿಸಿದ್ದು, ಇದೇ ಮೊದಲ ಬಾರಿಗೆ ಭಾರತ ತನ್ನ ಯುದ್ಧ ವಿಮಾನ ಪಾಕಿಸ್ತಾನದ ದಾಳಿಯ ವೇಳೆ ನಷ್ಟವಾಗಿರುವುದು ನಿಜ ಎಂದು ಒಪ್ಪಿಕೊಂಡಿದೆ. ಮೇ ತಿಂಗಳಲ್ಲಿ ಪಾಕಿಸ್ತಾನದೊಂದಿಗಿನ ಘರ್ಷಣೆಯಲ್ಲಿ ಅನಿರ್ದಿಷ್ಟ ಸಂಖ್ಯೆಯ ಯುದ್ಧ ವಿಮಾನಗಳನ್ನು ಕಳೆದುಕೊಂಡಿರುವುದಾಗಿ ಭಾರತದ ಸೇನೆ ಮೊದಲ ಬಾರಿಗೆ ಹೇಳಿದೆ. ಭಾರತ ತನ್ನ ಫೈಟರ್ ಜೆಟ್‌ಗಳನ್ನು ಕಳೆದುಕೊಂಡಿದೆ ಎಂದು ರಕ್ಷಣಾ ಸಿಬ್ಬಂದಿ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಹೇಳಿದ್ದಾರೆ
ಇದನ್ನೂ ಓದಿ: ಅತ್ತಿಗೆಯ ತಲೆ ಕತ್ತರಿಸಿ ರಸ್ತೆಯಲ್ಲಿ ರುಂಡ ಹಿಡಿದು ತಿರುಗಾಡುತ್ತಿದ್ದ ವ್ಯಕ್ತಿಯ ಬಂಧನ| bengal-horror
(ಏಜೆನ್ಸೀಸ್)
ಎಷ್ಟು ಫೈಟರ್ ಜೆಟ್ಗಳು ಪತನವಾದವು, ಏಕೆ ಪತನಗೊಂಡವು ಎಂಬುದಕ್ಕಿಂತ ಯಾವ ತಪ್ಪಿಗಾಗಿ ದಾಳಿ ನಡೆಸಲಾಯಿತು ಎಂಬುದು ಮಾತ್ರ ಮುಖ್ಯ ಎಂದು ಅನಿಲ್ ಚೌಹಾಣ್ ಹೇಳಿದ್ದಾರೆ.
ನಾವು ಮಾಡಿದ ಯುದ್ಧತಂತ್ರದ ತಪ್ಪನ್ನು ಅರ್ಥಮಾಡಿಕೊಳ್ಳಲು, ಅದನ್ನು ಸರಿಪಡಿಸಲು ಮತ್ತು ಎರಡು ದಿನಗಳ ನಂತರ ಅದನ್ನು ಮತ್ತೆ ಕಾರ್ಯಗತಗೊಳಿಸಲು ನಮ್ಮ ಎಲ್ಲಾ ಜೆಟ್‌ಗಳನ್ನು ಮತ್ತೆ ಹಾರಿಸಲು ಸಾಧ್ಯವಾಯಿತು, ನಾವು ದೀರ್ಘ ವ್ಯಾಪ್ತಿಯನ್ನು ಗುರಿಯಾಗಿಸಿಕೊಂಡಿದ್ದೇವೆ ಎಂದು ಜನರಲ್ ಚೌಹಾಣ್ ಹೇಳಿದರು.