ಗ್ಯಾಂಗ್ಟಾಕ್: 50ನೇ ಗಣರಾಜ್ಯೋತ್ಸವ ಹಿನ್ನೆಲೆ ಪ್ರಧಾನಿ ಮೋದಿ ಸಿಕ್ಕಿಂಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ವರ್ಚುವಲ್ ಭಾಷಣ ಅವರು, ಆಪರೇಷನ್ ಸಿಂಧೂರ್ ಪಾಕಿಸ್ತಾನದ ಬಣ್ಣ ಬಯಲು ಮಾಡಿ ಉಗ್ರರಿಗೆ ಸರಿಯಾದ ಉತ್ತರ ನೀಡಿದೆ, ಭಾರತ ಏನು ಎಂಬುದು ಈಗ ಪಾಕಿಸ್ತಾನಕ್ಕೆ ಅರ್ಥವಾಗಿರಬಹುದು ಎಂದು ಹೇಳಿದ್ದಾರೆ.
ಪಹಲ್ಗಾಮ್ನಲ್ಲಿ ನಡೆದ ದಾಳಿ ಕೇವಲ ಭಾರತೀಯರ ಮೇಲಿನ ದಾಳಿಯಾಗಿರಲಿಲ್ಲ. ಅದು ಮಾನವೀಯತೆಯ ಆತ್ಮದ ಮೇಲಿನ ದಾಳಿ, ಸಹೋದರತ್ವದ ಮನೋಭಾವದ ಮೇಲಿನ ದಾಳಿ. ಭಯೋತ್ಪಾದಕರು ನಮ್ಮ ಅನೇಕ ಕುಟುಂಬಗಳ ಸಂತೋಷವನ್ನು ಕಸಿದುಕೊಂಡರು. ಅವರು ಭಾರತೀಯರಾದ ನಮ್ಮನ್ನು ವಿಭಜಿಸಲು ಸಹ ಪಿತೂರಿ ನಡೆಸಿದರು. ಇಂದು ಇಡೀ ಜಗತ್ತು ಭಾರತ ಹಿಂದೆಂದಿಗಿಂತಲೂ ಹೆಚ್ಚು ಒಗ್ಗಟ್ಟಿನಿಂದ ಇರುವುದನ್ನು ನೋಡುತ್ತಿದೆ. ನಾವು ಒಗ್ಗಟ್ಟಿನಿಂದ ಭಯೋತ್ಪಾದಕರು ಮತ್ತು ಅವರ ಪೋಷಕರಿಗೆ ಸ್ಪಷ್ಟ ಸಂದೇಶವನ್ನು ನೀಡಿದ್ದೇವೆ ಎಂದು ಮೋದಿ ಹೇಳಿದರು.
ಇದನ್ನೂ ಓದಿ: ಪಾಕಿಸ್ತಾನ ಪರ ಬೇಹುಗಾರಿಕೆ ; 7 ಬಾರಿ ಪಾಕ್ಗೆ ಭೇಟಿ; ಕಾಂಗ್ರೆಸ್ ನಾಯಕನ ಮಾಜಿ ಸಹಾಯಕ ಬಂಧನ| Arrested
ಪಹಲ್ಗಾಮ್ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚಾಯಿತು. ಮೇ 7 ರ ಮುಂಜಾನೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ಆಪರೇಷನ್ ಸಿಂಧೂರ್‌ನ ಭಾಗವಾಗಿ ಭಾರತ ನಿಖರವಾದ ದಾಳಿಗಳನ್ನು ನಡೆಸಿತು. ಭಯೋತ್ಪಾದಕರಿಗೆ ತಕ್ಕ ಉತ್ತರ ನೀಡಿದ್ದೇವೆ.
(ಏಜೆನ್ಸೀಸ್)
ತನ್ನ ಭಯೋತ್ಪಾದಕ ನೆಲೆಯ ನಾಶದಿಂದ ಕೋಪಗೊಂಡ ಪಾಕಿಸ್ತಾನವು ನಮ್ಮ ನಾಗರಿಕರು ಮತ್ತು ಸೈನಿಕರ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು, ಆದರೆ ಅದರಲ್ಲಿಯೂ ಪಾಕಿಸ್ತಾನದ ನಿಜವಾದ ಬಣ್ಣ ಬಯಲಾಗಿದೆ ಎಂದರು. ನಾವು ಅವರ ಅನೇಕ ವಾಯುನೆಲೆಗಳನ್ನು ನಾಶಪಡಿಸಿದ್ದೇವೆ ಮತ್ತು ಭಾರತವು ಯಾವುದೇ ಸಮಯದಲ್ಲಿ ಏನು ಮಾಡಬಹುದು ಎಂಬುದನ್ನು ಅವರಿಗೆ ತೋರಿಸಿದ್ದೇವೆ ಎಂದು ಪ್ರಧಾನಿ ಮೋದಿ ತಿಳಿಸಿದರು.